ಹರಿಹರ: ಮಹಿಳೆಯೋರ್ವರ ಗರ್ಭಕೋಶದಲ್ಲಿದ್ದ ಬೃಹತ್ ಗಾತ್ರದ ಗಡ್ಡೆಯನ್ನು ಇಲ್ಲಿನ ಶುಭೋದಯ ನರ್ಸಿಂಗ್ ಹೋಂನಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಲಾಗಿದೆ.
ವಿವರ: ಹೊಟ್ಟೆ ನೋವೆಂದು ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸಿದ್ದ 46 ವರ್ಷದ ಮಹಿಳೆಯೋರ್ವರ ಪರೀಕ್ಷೆ ನಡೆಸಿದಾಗ ಗರ್ಭಕೋಶದಲ್ಲಿ ಗಡ್ಡೆ ಇರುವುದು ಕಂಡು ಬಂದಿದೆ. ಶನಿವಾರದಂದು ಶಸ್ತ್ರ ಚಿಕಿತ್ಸೆ ಮಾಡಿ ಗಡ್ಡೆಯನ್ನು ಹೊರ ತೆಗೆಯಲಾಯಿತು.
10.5 ಕೆ.ಜಿ.: ಕಲ್ಲಂಗಡಿ ಆಕಾರದಲ್ಲಿದ್ದ ಗಡ್ಡೆ 45 ಇಂಚು ಸುತ್ತಳತೆ ಹೊಂದಿದ್ದು 10.5 ಕೆ.ಜಿ. ಭಾರವಾಗಿತ್ತು. ಶಸ್ತ್ರ ಚಿಕಿತ್ಸೆಗೆ ಒಳಗಾದ ರೋಗಿ ಸುಧಾರಿಸಿಕೊಳ್ಳುತ್ತಿದ್ದಾರೆಂದು ನರ್ಸಿಂಗ್ ಹೋಂ ನ ಪ್ರಸೂತಿ ತಜ್ಞ ವೈದ್ಯೆ ಸವಿತಾ ಜೆ. ಪತ್ರಕರ್ತರಿಗೆ ತಿಳಿಸಿದರು.
ಗರ್ಭಕೋಶದಲ್ಲಿ ವ್ಯಕ್ತಿಯ ಮಾಂಸ ಖಂಡದ ಅಂಗಾಂಶದಿಂದ ಬೆಳೆಯುವ ಈ ಗಡ್ಡೆಗೆ ಫೈಬ್ರಾಸ್ ಎಂದು ಕರೆಯುತ್ತೇವೆ. ಇದು ಒಂದು ಗೋಲಿ ಆಕಾರದಿಂದ ಹಿಡಿದು ಕಲ್ಲಂಗಡಿ ಹನ್ನಿನ ಗಾತ್ರದವರೆಗೂ ಬೆಳೆಯುತ್ತದೆ. ಇದು ಕ್ಯಾನ್ಸರ್ ಕಾರಕವಾಗಿರುವುದಿಲ್ಲ. ಮಹಿಳೆಯರು ಮಕ್ಕಳನ್ನು ಹೆರುವ ವಯಸ್ಸಿನಲ್ಲಿ ಕೆಲವರಲ್ಲಿ ಇದು ಕಾಣ ಸಿಕೊಳ್ಳಬಹುದು ಎಂದರು.
ಶಸ್ತ್ರ ಚಿಕಿತ್ಸೆಯಲ್ಲಿ ಪ್ರಸೂತಿ ತಜ್ಞ ವೈದ್ಯೆ ಸವಿತಾ ಜೆ., ಶಸ್ತ್ರ ಚಿಕಿತ್ಸಕ ವೈದ್ಯರಾದ ಹಾಲೇಶ್ ಬಿ., ಸುರೇಶ್ ಬಸರಕೋಡ್, ನವೀನ್ ಭಾಗವಹಿಸಿದ್ದರು.
