ದಾವಣಗೆರೆ: ಕೌಟುಂಬಿಕ ಸಮಸ್ಯೆ ಇತ್ಯರ್ಥಕ್ಕೆಂದು ಬಾಲನ್ಯಾಯ ಮಂಡಳಿಗೆ ಆಗಮಿಸಿದ್ದ ವೇಳೆ ಪತಿಯೇ ಪತ್ನಿಯನ್ನು ಕೊಂದ ಘಟನೆ ನಗರದಲ್ಲಿ ಘಟಿಸಿದೆ.
ತಾಲೂಕಿನ ಕಾಡಜ್ಜಿ ಗ್ರಾಮದ ಮುಷ್ಕಾನ್ ಬಾನು (26) ಕೊಲೆಯಾದ ಪತ್ನಿ. ಪತಿ ಕಲೀಂವುಲ್ಲಾ (35) ಕೊಲೆ ಮಾಡಿದ ಆರೋಪಿ.
ಮಕ್ಕಳ ಪಾಲನೆಗೆ ಸಂಬಂಧಿಸಿದ ವಿಚಾರ ಬಗೆಹರಿಸಿಕೊಳ್ಳಲು ಎಂಸಿಸಿ ಬಡಾವಣೆಯ ಬಾಲ ನ್ಯಾಯ ಮಂಡಳಿಗೆ ಬಂದಾಗ ಆವರಣದಲ್ಲಿಯೇ ಚಾಕುವಿನಿಂದ ಹಿರಿದು ಕೊಂದಿದ್ದಾನೆ.
ಅಲ್ಲದೇ, ಜಗಳ ಬಿಡಿಸಲು ಮುಂದಾದ ಬಾನು ಅವರ ತಾಯಿ ಪರ್ಜಾನ್ (50) ಕೂಡ ಚಾಕು ಇರಿತಕ್ಕೆ ಒಳಗಾಗಿ ಗಾಯಗೊಂಡು ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಷ್ಕಾನ್ ಬಾನು ಹಾಗೂ ಕಲೀಂವುಲ್ಲಾ ದಂಪತಿ ಕೌಟುಂಬಿಕ ಕಲಹದಿಂದ ಮನನೊಂದು ವಿಚ್ಛೇದನ ಪಡೆಯಲು ಮುಂದಾಗಿದ್ದರು.
ಇಬ್ಬರು ಮಕ್ಕಳ ಪಾಲನೆಯ ವಿಚಾರದಲ್ಲಿ ಸೃಷ್ಟಿಯಾದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಆಗಮಿಸಿದ್ದರು. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಮಹಿಳೆಗೆ ಆರೋಪಿ ಚಾಕುವಿನಿಂದ ಇರಿದಿದ್ದಾನೆ.
