ಹರಿಹರ : ಶೋಷಿತರು ಪರವಾಗಿರುವ ಸಂವಿಧಾನಕ್ಕೆ ಮನುವಾದಿಗಳಿಂದ ಕಂಟಕವಿದೆ ಎಂದು ಹಿರಿಯ ವಕೀಲ ಅನೀಸ್ ಪಾಷಾ ಹೇಳಿದರು.
ಸಂವಿಧಾನ ರಕ್ಷಣಾ ಪಡೆ ರಚಿಸುವ ಹಿನ್ನೆಲೆಯಲ್ಲಿ ಸಮಾನ ಮನಸ್ಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾದಲ್ಲಿ ದೇಶದ ಶೋಷಿತರು ಹಾಗೂ ಮಹಿಳೆಯರ ಹಕ್ಕುಗಳಿಗೆ ಘಾಸಿಯಾಗುವ ಅಪಾಯವಿದೆ. ಪ್ರಜಾಪ್ರಭುತ್ವ ಪ್ರಿಯರು, ಶೋಷಿತರ, ಮಹಿಳೆಯರ ಹಕ್ಕುಗಳನ್ನು ಗೌರವಿಸುವಂತಹ ಸಮಾನ ಮನಸ್ಕರ ಸಭೆಯನ್ನು ನಡೆಸಲಾಗುತ್ತಿದ್ದು, ಸಂವಿಧಾನರಕ್ಷಣಾ ಪಡೆಯನ್ನು ರಾಜ್ಯದ ಎಲ್ಲಾ ತಾಲ್ಲೂಕು, ಜಿಲ್ಲೆಗಳಲ್ಲಿ ರಚಿಸಲಾಗುತ್ತಿದೆ. ಪ್ರಜ್ಞಾವಂತರು ಈ ಪಡೆಗೆ ಶಕ್ತಿಯನ್ನು ತುಂಬಬೇಕೆಂದು ಕೋರಿದರು.
ಎದ್ದೇಳು ಕರ್ನಾಟಕ ಸಂಘಟನೆಯ ಚಿತ್ರದುರ್ಗದ ಜೆ.ಯಾದವ ರೆಡ್ಡಿ ಮಾತನಾಡಿ, ವಿವಿಧ ಧರ್ಮಗಳಿಗೆ ಒಂದೊಂದು ಧರ್ಮಗ್ರಂಥ ಇರುವಂತೆಯೆ ಸಂವಿಧಾನವು ಭಾರತೀಯರ ಧರ್ಮಗ್ರಂಥವಾಗಿದೆ ಎಂದು ಹೇಳಿದರು.
ತಾಪಂ ಮಾಜಿ ಅಧ್ಯಕ್ಷ ಟಿ.ಮುರುಗೇಶಪ್ಪ ಮಾತನಾಡಿ, ಅಸಂಖ್ಯಾತ ಜಾತಿ, ಜನಾಂಗ, ಧರ್ಮ, ಸಂಸ್ಕøತಿ, ಪರಂಪರೆ ಹೊಂದಿರುವ ಭಾರತಕ್ಕೆ ಸಂವಿಧಾನವೇ ಮೂಲ ಆಧಾರ. ಅದರ, ರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕೆಂದರು.
Read also : ಗೌರಿ ಗಣೇಶ – ಈದ್ ಮಿಲಾದ್ ಹಬ್ಬ : ಪೊಲೀಸ್ ಪಥ ಸಂಚಲನ
ಸಾಮಾಜಿಕ ಕಾರ್ಯಕರ್ತ ಬಿ.ಮಗ್ದುಮ್ ಮಾತನಾಡಿ, ಸಂವಿಧಾನದ ತಿರುಳನ್ನು ಜನ ಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಕೈಪಿಡಿಯನ್ನು ಪ್ರಕಟಿಸಿ ಹಂಚಿಕೆ ಮಾಡಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಚನ್ನಗಿರಿಯಟಿ.ರುದ್ರಪ್ಪ, ತಿಪ್ಪಣ್ಣಕತ್ತಲಗೆರೆ, ವೈ.ಮಲ್ಲಿನಾಥ, ಬಿಎಸ್‍ಪಿ ಮುಖಂಡ ಡಿ.ಹನುಮಂತಪ್ಪ, ಭಾಗ್ಯದೇವಿ, ಜಮೀಲಾಬಿ, ದೇವೇಂದ್ರಪ್ಪ, ಎಂ.ಕೃಷ್ಣ, ಪ್ರೀತಮ್ ಬಾಬು, ರಿಯಾಜ್ ಖಾದ್ರಿ, ಡಾ.ಮೊಹಮ್ಮದ್ ಇಸಾಕ್, ನಿಂಗಪ್ಪ, ಮೊಹಮ್ಮದ್ ಶಾಹೀದ್, ಮೊಹಮ್ಮದ್ ಅಶ್ಫಾಖ್, ಪಿ.ಪಕ್ಕೀರಪ್ಪ ಹಾಗೂ ಇತರರಿದ್ದರು.