Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಕಾಯಕದಲ್ಲಿ ಶ್ರದ್ಧೆ, ಭಕ್ತಿ, ಗುರು ನಿಷ್ಠೆ ಇದ್ದರೆ ಪರಮಾತ್ಮನು ಆಶೀರ್ವಾದ ಮಾಡುತ್ತಾನೆ : ಕಣ್ವಕುಪ್ಪೆ ಶ್ರೀ
ತಾಜಾ ಸುದ್ದಿ

ಕಾಯಕದಲ್ಲಿ ಶ್ರದ್ಧೆ, ಭಕ್ತಿ, ಗುರು ನಿಷ್ಠೆ ಇದ್ದರೆ ಪರಮಾತ್ಮನು ಆಶೀರ್ವಾದ ಮಾಡುತ್ತಾನೆ : ಕಣ್ವಕುಪ್ಪೆ ಶ್ರೀ

Dinamaana Kannada News
Last updated: February 19, 2026 2:47 pm
Dinamaana Kannada News
Share
Davanagere
SHARE
ಜಗಳೂರು : ಕಾಯಕದಲ್ಲಿ ಶ್ರದ್ಧೆ ಭಕ್ತಿ ಗುರು ನಿಷ್ಠೆ ಇದ್ದರೆ ಪರಮಾತ್ಮನು ಆಶೀರ್ವಾದ ಮಾಡುತ್ತಾನೆ. ಕೇದಾರ ಪೀಠಕ್ಕೆ ಉತ್ತರಾಧಿಕಾರಿಯನ್ನಾಗಿ ಘೋಷಣೆ ಮಾಡಿದ ಸಂದರ್ಭ ನನಗೆ ಆಶ್ಚರ್ಯವಾಗಿತ್ತು ಎಂದು ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಚಾರ್ಯ  ಮಹಾಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಗುರುವಾರ ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದಲ್ಲಿ ನಾಲ್ವಡಿ ಶಾಂತಲಿಂಗ ಶಿವಚಾರ್ಯ ಮಹಾಸ್ವಾಮೀಜಿಯವರು ಕೇದಾರ ಪೀಠದ ಉತ್ತರಾಧಿಕಾರಿಯಾಗಿ ನೇಮಕಗೊಂಡು ಇದೇ ಪ್ರಥಮ ಬಾರಿಗೆ  ಆಗಮಿಸಿದ ಹಿನ್ನೆಲೆ ಭಕ್ತಸಮೂಹ ಕಣ್ವ ಕುಪ್ಪೆ ಮಠದಲ್ಲಿ  ಹಮ್ಮಿಕೊಂಡಿದ್ದ ಅದ್ದೂರಿ  ಸ್ವಾಗತ  ಸಮಾರಂಭದ ದಿವ್ಯ ಸಾನಿದ್ಯ ವಹಿಸಿ  ಆಶೀರ್ಚನ ನೀಡಿದರು.
ನಾನು ಕೇದಾರ ಪೀಠದ ಉತ್ತರಾಧಿಕಾರಿಯಾಗುವ  ಅಪೇಕ್ಷಿತನಲ್ಲ, ಕಣ್ವ ಕುಪ್ಪೆ ಮಠದಲ್ಲಿ  2012‌ರಲ್ಲಿ ನಡೆದ ಧರ್ಮ ಅನುಷ್ಠಾನ ಕಾರ್ಯಕ್ರಮದಲ್ಲಿ ಕೇದಾರ ಶ್ರೀಗಳ  ಭಾಗವಹಿಸಿದ್ದರು ಈ ವೇಳೆ  ಸಾಮಿಪ್ಯ ದಿಂದ ಅವರು ನನ್ನ ಧಾರ್ಮಿಕ ಸೇವೆ ಗುರುತಿಸಿರುವುದು ಸುಕೃತ ಸೌಭಾಗ್ಯ ನನ್ನದು ಭಗವಂತನ ಇಚ್ಛೆಯಂತೆ ಅವಕಾಶ ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರತಿಯೊಬ್ಬರೂ ಪ್ರಾಮಾಣಿಕ ಕರ್ತವ್ಯವನ್ನು ಮಾತ್ರ ಮಾಡಬೇಕು.ಅದರ ಫಲಾಫಲವನ್ನು ಭಗವಂತನ ಇಚ್ಛೆಗೆ  ಬಿಡಬೇಕು.ಭಗವಂತ ಮೆಚ್ಚಿದರೆ ಮನೆಯ ಚಪ್ಪರ ಕಿತ್ತು ಹಾಕಿ ಶಾಂತಿ,ನೆಮ್ಮದಿ,ಐಶ್ವರ್ಯ ಕೊಡತ್ತಾನೆ. ಮುನಿದರೆ ಚರ್ಮ ಹರಿದು ಕಸಿದುಕೊಳ್ಳುತ್ತಾನೆ ಎಂದರು.
ಫೆ.12 ರಂದು ಕೇದಾರದಲ್ಲಿ 2 ಲಕ್ಷ ಭಕ್ತಸಮೂಹ ನೆರದಿದ್ದನ್ನು ಕಂಡು ಅಚ್ಚರಿಗೊಳಿಸಿತು.108 ಕುಂಡ ಗಳಲ್ಲಿನ ಯಜ್ಞಯಾಗಾದಿ,ಪ್ರಸಾದ,ಪೂಜಾಕೈಂಕರ್ಯಗಳು  ವಿಶೇಷವಾಗಿತ್ತು.ವೇದಿಕೆಯಲ್ಲಿ ನನ್ನನ್ನು ಉತ್ತರಾಧಿಕಾರಿಯಾಗಿ ಘೋಷಿಸಿದರು. ಕೇದಾರ ಪೀಠದ ಬಾಗಿಲು  ರಾಷ್ಟ್ರಪತಿ,ಪ್ರಧಾನಮಂತ್ರಿಗಳು ಆಗಮಿಸಿದರೂ ಬಾಗಿಲು ತೆರೆಯದೆ,ಕೇದಾರ ಶ್ರೀಗಳು ಆಗಮಿಸಿದರೆ  ಮಾತ್ರ ಬಾಗಿಲು ತೆರೆಯುವುದು ವಿಶೇಷವಾಗಿದೆ ಎಂದರು.
ಮಲೆನಾಡಿನಿಂದ ಬರದನಾಡಿಗೆ 2006 ರಲ್ಲಿ ಆಗಮಿಸಿದ ವೇಳೆ ಒಂದು ಕೆಜಿ ಅಕ್ಕಿಯೂ ಇಲ್ಲದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾನು ಮಠವನ್ನು ಬೆಳೆಸಿರುವೆ.ಮುಮ್ಮಡಿ ಶಾಂತಲಿಂಗ ಸ್ವಾಮೀಜಿ ಅವರ ಕೃಪಾಶೀರ್ವಾದದಿಂದ ನಾನು ಸಾಗುವೆ. ಹೃದಯಭಾಗ ಕಣ್ವಕುಪ್ಪೆ ಮಠವನ್ನು ಬಿಡುವುದಿಲ್ಲ.ಭಕ್ತರಲ್ಲಿ ಆತಂಕಸಲ್ಲದು,ವರ್ಷದ ವೈಶಾಖ,ಜೇಷ್ಠ ಮಾಸದಲ್ಲಿ ಮಾತ್ರ ಕೇದಾರಕ್ಕೆ ತೆರಳಲಾಗುವುದು.ಉಳಿದಂತೆ ಭಕ್ತರಿಗೆ ಸ್ಥಳೀಯವಾಗಿ ಲಭ್ಯವಾಗುವೆ.ಕೇದಾರ ಪೀಠ ಅಲಂಕರಿಸಲು ಇನ್ನೂ ಅನೇಕ ಕಾಯ್ದೆಗಳು,ವ್ರತಗಳಿವೆ ಎಂದು ತಿಳಿಸಿದರು.
ವಿಜಯನಗರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡಮುಣಗು ತಿಪ್ಪೇಸ್ವಾಮಿ ಮಾತನಾಡಿ,ಕೇದಾರ ಪೀಠದಲ್ಲಿ ಬೃಹತ್ ವೇದಿಕೆಯಲ್ಲಿ ಲಕ್ಷಾಂತರ ಭಕ್ತ ಸಮೂಹದ ಸಮ್ಮುಖದಲ್ಲಿ ಕಣ್ವಕುಪ್ಪೆ ಶ್ರೀಗಳು  ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವುದು ಸಂತಸ ತಂದಿದೆ.ಭೀಮಾಶಂಕರ ಭಗವತ್ಪಾದರ ನಂತರ ಕೇದಾರ ಪೀಠ ಕಣ್ವಕುಪ್ಪೆ  ಶ್ರೀಗಳ ಸಾರಥ್ಯದಲ್ಲಿ ಇನ್ನೂ ಉನ್ನತಮಟ್ಟದಲ್ಲಿ  ಅಭಿವೃದ್ದಿಗೊಳ್ಳಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಚಿತ್ರದುರ್ಗದ ವಿಜಾಪುರ ಬಸವರಾಜ್ ಮಾತನಾಡಿ,ಅತ್ಯಂತ ಆಳವಾದ ಆಧ್ಯಾತ್ಮಿಕ ಜ್ಞಾನವನ್ನು ಸಂಪಾದಿಸಿ,ನಿರ್ಗಗಳವಾಗಿ ಆಶೀರ್ವಚನ ನೀಡುವ ಕಣ್ವಕುಪ್ಪೆ ಶಾಂತಲಿಂಗ ಸ್ವಾಮೀಜಿ ಅವರ ಪರಿಶ್ರಮಕ್ಕೆ ಇನ್ನೂ ಉತ್ತಮ ಧಾರ್ಮಿಕ, ಸಾಮಾಜಿಕ ಸೇವೆಗೆ ಉತ್ತಮ ಅವಕಾಶಸಿಕ್ಕಿದೆ ಎಂದರು.
Read also : ಎಸ್.ಎಸ್.ಎಲ್.ಸಿ, ಪಿಯುಸಿ ಫಲಿತಾಂಶ ಸುಧಾರಣೆಗೆ ಕ್ರಮ : ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ
ಈ ಸಂದರ್ಭದಲ್ಲಿ ಭಕ್ತರಾದ ಶರಣಪ್ಪ,ಬಸವರಾಜ್,ಪ್ರಕಾಶ್,ಜಯ್ಯಣ್ಣ,ಮುರುಗೇಶ್,ರುದ್ರೇಶ್,ಎನ್.ಎಂ‌.ಲೋಕೇಶ್,ಶಿವಕುಮಾರ್ ಸ್ವಾಮಿ,ಡಾ.ಹಾಲಸ್ವಾಮಿ, ಕರಿಬಸಪ್ಪ , ಅರುಣ್ ಕುಮಾರ್ ಸೇರಿದಂತೆ ನೂರಾರು ಸಂಖ್ಯೆಯ ಭಕ್ತರು ಇದ್ದರು.
ರಾಜ್ಯದಲ್ಲಿಯೇ ಅತಿ ಹಿಂದುಳಿದ ತಾಲೂಕಾಗಿರುವ ಜಗಳೂರಿನಲ್ಲಿ ಕಣ್ವ ಕುಪ್ಪೆ ಗವಿ ಮಠ ಇರುವುದು ವಿಶೇಷ ಅದರಲ್ಲಿಯೂ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಪಂಚಪೀಠಗಳಲ್ಲಿ ಒಂದಾದ ಕೇದಾರ ಪೀಠಕ್ಕೆ ಉತ್ತರ ಅಧಿಕಾರಿಯಾಗಿ ನೇಮಕವಾಗಿರುವುದು ತಾಲೂಕು ಅಲ್ಲದೆ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ
ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್
TAGGED:Davanagere Newsdinamaana.comKannada Newsಕಣ್ವಕುಪ್ಪೆ ಶ್ರೀಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article District Collector G.M. Gangadharaswamy ಎಸ್.ಎಸ್.ಎಲ್.ಸಿ, ಪಿಯುಸಿ ಫಲಿತಾಂಶ ಸುಧಾರಣೆಗೆ ಕ್ರಮ : ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ
Next Article District Collector G.M. Gangadharaswamy ಕೊಳವೆಬಾವಿಗಳನ್ನು ಕೊರೆಸುವಾಗ ನಿಬಂಧನೆಗಳನ್ನು ಪಾಲಿಸಿ : ಡಿಸಿ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಮಕ್ಕಳ ರಕ್ಷಣೆ ಜಾಗೃತಿ ಪ್ರಾಥಮಿಕ ಹಂತದಿಂದಲೇ ಅಗತ್ಯ: ಪ್ರೊ.ಕುಂಬಾರ

ದಾವಣಗೆರೆ: ಮಕ್ಕಳ ಹಕ್ಕು, ರಕ್ಷಣೆ ಕುರಿತು ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸಿದರೆ ಸಾಕಾಗುವುದಿಲ್ಲ, ಪ್ರಾಥಮಿಕ ಶಾಲಾ ಹಂತದಿಂದಲೇ ಸಮರ್ಪಕ ತರಬೇತಿ, ಮಾರ್ಗದರ್ಶನ…

By Dinamaana Kannada News

ಜಿಲ್ಲಾಸ್ಪತ್ರೆಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಭೇಟಿ, ಪರಿಶೀಲನೆ

ದಾವಣಗೆರೆ (Davanagere) :  ನಗರದ ಚಿಗಟೇರಿ ಜಿಲ್ಲಾಸ್ಪತ್ರೆಗೆ ಬುಧವಾರ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಭೇಟಿ ನೀಡಿ, ಪರಿಶೀಲಿಸಿದರು.ಮೊದಲಿಗೆ ಆಸ್ಪತ್ರೆಯ ಹೊರ…

By Dinamaana Kannada News

ಗಣಿಗಾರಿಕೆ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪಗಳು ಬಂದರೆ ಸಮಸ್ಯೆಗಳು ಉಲ್ಭಣಿಸುತ್ತವೆ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್

ದಾವಣಗೆರೆ/ ಬೆಂಗಳೂರು (Davanagere): ಗಣಿಗಾರಿಕೆಯ ವಿಚಾರದಲ್ಲಿ ರಾಜಕೀಯ ನುಸುಳಬಾರದು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವರಾದ…

By Dinamaana Kannada News

You Might Also Like

District Collector G.M. Gangadharaswamy
ತಾಜಾ ಸುದ್ದಿ

ಕೊಳವೆಬಾವಿಗಳನ್ನು ಕೊರೆಸುವಾಗ ನಿಬಂಧನೆಗಳನ್ನು ಪಾಲಿಸಿ : ಡಿಸಿ

By Dinamaana Kannada News
District Collector G.M. Gangadharaswamy
ತಂತ್ರಜ್ಞಾನ

ಎಸ್.ಎಸ್.ಎಲ್.ಸಿ, ಪಿಯುಸಿ ಫಲಿತಾಂಶ ಸುಧಾರಣೆಗೆ ಕ್ರಮ : ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ

By Dinamaana Kannada News
Davanagere
ತಾಜಾ ಸುದ್ದಿ

ನಿಮ್ಮ ಮೇಲೆ ನಂಬಿಕೆ ಇಡಿ,ಕಠಿಣ ಸತ್ಯ ಎದುರಿಸಿ ಅವಕಾಶ ಸೃಷ್ಟಿಸಿಕೊಳ್ಳಬೇಕು : ಸೈಯದ್ ಖಾಲಿದ್ ಅಹ್ಮದ್ ಕರೆ

By Dinamaana Kannada News
Applications invited
ತಾಜಾ ಸುದ್ದಿ

ಖಾಲಿ ಇರುವ ಕರ್ನಾಟಕ ಒನ್ ಫ್ರಾಂಚೈಸಿ ಕೇಂದ್ರಗಳಿಗೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?