ದಾವಣಗೆರೆ : ರಾಜ್ಯ ಸರ್ಕಾರ ಎಡಗೈ ಮಾದಿಗ ಸಂಬಂಧಿತ ಜಾತಿಗಳಿಗೆ ಶೇ.6 ರಷ್ಟು ಒಳಮೀಸಲಾತಿ ನೀಡಿರುವ ನಿಟ್ಟಿನಲ್ಲಿ ಜಿಲ್ಲಾ ಮಾದಿಗ ಮಹಾಸಭಾ ವತಿಯಿಂದ ಸೆ.13ರಂದು ಇಲ್ಲಿನ ಮಹಾನಗರ ಪಾಲಿಕೆ ಆವರಣದ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ರಂಗಮಂದಿರದಲ್ಲಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಡಾ.ಎಚ್.ವಿಶ್ವನಾಥ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11ಗಂಟೆಗೆ ನಡೆಯುವ ಒಳಮೀಸಲಾತಿ ವಿಜಯೋತ್ಸವದಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವರಾದ ಕೆ.ಎಚ್.ಮುನಿಯಪ್ಪ, ಎಸ್.ಎಸ್.ಮಲ್ಲಿಕಾರ್ಜುನ, ಆರ್.ಬಿ.ತಿಮ್ಮಾಪುರ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ, ಗೋವಿಂದ ಕಾರಜೋಳ, ಮಾಜಿ ಸಚಿವರಾದ ಎಚ್.ಆಂಜನೇಯ, ಎ.ನಾರಾಯಣಸ್ವಾಮಿ, ಅಲ್ಕೋಡ ಹನುಮಂತಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ನಮ್ಮ ಸಮುದಾಯದ ನಾಲ್ಕು ದಶಕದ ಹೋರಾಟದಲ್ಲಿ ಪಾಲ್ಗೊಂಡಿರುವ ಹೋರಾಟಗಾರರಿಗೆ ಇದೇ ಕಾರ್ಯಕ್ರಮದಲ್ಲಿ ಗೌರವ ಸಮರ್ಪಿಸಲಾಗುವುದು ಎಂದು ಹೇಳಿದರು.
ಒಳಮೀಸಲಾತಿ ಬೇಡಿಕೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನೇತೃತ್ವದ ಎಲ್ಲಾ ಸರಕಾರಗಳು ಸ್ಪಂದಿಸಿವೆ. ನಾವು ಶೇ.8 ಮೀಸಲಾತಿಗೆ ಬೇಡಿಕೆ ಇಟ್ಟಿದ್ದೆವು. ಈಗ ಶೇ.6 ರಷ್ಟು ಮೀಸಲಾತಿ ಎಡಗೈ ಸಮುದಾಯಕ್ಕೆ ದೊರೆತಿದ್ದು, ವಿಜಯೋತ್ಸವದಲ್ಲಿ ನಮ್ಮ ಮುಂದಿನ ಸವಾಲುಗಳ ಬಗ್ಗೆ ಚರ್ಚಿಸಿ ಒಳ ಮೀಸಲಾತಿ ಸದುಪಯೋಗ ಪಡೆದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
Read also : ಬೂದಾಳ್ ಮುಖ್ಯ ರಸ್ತೆಯಲ್ಲಿ accident : ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ
ಮಾದಿಗ ಸಮುದಾಯದ ಹಿರಿಯ ಮುಖಂಡ ಬಿ.ಎಚ್.ವೀರಭದ್ರಪ್ಪ ಮಾತನಾಡಿ, ಈ ವಿಜಯೋತ್ಸವಕ್ಕೆ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ವಿಧಾನಸಭಾ ಕ್ಷೇತ್ರದಿಂದಲೂ ಕನಿಷ್ಠ 1 ಸಾವಿರ ಜನರಿಗೆ ಕಳಿಸಲು ಆಯಾ ಶಾಸಕರು ಸಹಕರಿಸಬೇಕು. ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ಒಳ ಮೀಸಲಾತಿ ನೀಡಿದ್ದಾರೆ. ಇನ್ನು ಮುಂದೆ ರಾಜಕೀಯವಾಗಿಯು ಒಳಮೀಸಲಾತಿಗಾಗಿ ನಮ್ಮ ಸಮುದಾಯ ಹೋರಾಟ ಆರಂಭಿಸಲಿದೆ ಎಂದು ಹೇಳಿದರು.
ನಿವೃತ್ತ ಎಎಸ್ಪಿ ರವಿನಾರಾಯಣ, ಹೆಚ್.ಮಲ್ಲೇಶ್‌ಪ್ಪ, ಎಸ್..ಮಲ್ಲಿಕಾರ್ಜುನ್, ಎಲ್.ಡಿ.ಗೋಣೆಪ್ಪ ಸೇರಿದಂತೆ ಇತರರು ಇದ್ದರು.