ದಾವಣಗೆರೆ: ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಡೆಯುತ್ತಿರುವ ದಾವಣಗೆರೆಯಲ್ಲಿ ವಿವಿಧ ಕಾಮಗಾರಿಗಳನ್ನು ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ವೀಕ್ಷಣೆ ಮಾಡಿದರು.
ನಗರದ ಆರ್.ಟಿ.ಓ ಆಫೀಸ್ ಎದುರುಗಡೆ ಐದು ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಕಮರ್ಷಿಯಲ್ ಕಾಂಪ್ಲೆಕ್ಸ್, 5 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಮಂಡಕ್ಕಿ ಬಟ್ಟೆಯ ಹತ್ತಿರ ರಿಂಗ್ ರಸ್ತೆ ಹಾಗೂ 40 ಲಕ್ಷ ವೆಚ್ಚದಲ್ಲಿ ನಗರದ ಶಾಮನೂರು ಶಿವಶಂಕರಪ್ಪ ಕ್ರೀಡಾಂಗಣದ ಒಳಗಡೆ ಕಾಮಗಾರಿಗಳನ್ನು ವೀಕ್ಷಿಸಿದರು.
ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ ದಿನೇಶ್ ಕೆ ಶೆಟ್ಟಿ, ಆಯುಕ್ತ ಹುಲ್ಮನೆ ತಿಮ್ಮಣ್ಣ ಜೊತೆ ಇಂಜಿನಿಯರ್ ಪರಮೇಶ್ವರ್ ನಾಯ್ಕ್ ಅಕ್ಷತಾ ಅವರ ಜೊತೆಗೂಡಿ ವೀಕ್ಷಿಸಿದರು.
ಮುಖಂಡರಾದ ಎ.ನಾಗರಾಜ್, ಆಯೂಬಪೈಲ್ವಾನ್, ಗ್ಯಾರಂಟಿ ಸಮಿತಿ ಸದಸ್ಯ ಎಂ.ಕೆ.ಲಿಯಾಖತ್ ಆಲಿ, ದಾದಾಪೀರ್ ಇತರರು ಇದ್ದರು.
Read also : ದಾವಣಗೆರೆ | ಮಹಿಳಾ ಸ್ವ ಸಹಾಯ ಗುಂಪುಗಳಿಂದ ಅರ್ಜಿ ಆಹ್ವಾನ