ಹರಿಹರ (Davanagere) : ನಗರದ ಗಾಂಧಿ ಮೈದಾನದ ಆವರಣದಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣದ ಬಾಡಿಗೆದಾರರ ಅವಧಿ ಮೀರಿರುವ ಕಾರಣ ಎಲ್ಲಾ ಮಳಿಗೆಗಳಿಲ್ಲಿರುವ ಬಾಡಿಗೆದಾರರನ್ನು ಖಾಲಿ ಮಾಡಿಸಿ ಹೊಸದಾಗಿ ನಿಯಮನುಸಾರ ಅಂಗಡಿ ಮಳಿಗೆಗಳನ್ನು ಹರಾಜು ಪ್ರಕ್ರಿಯ ಕೈಗೊಳ್ಳುವಂತೆ ಒತ್ತಾಯಿಸಿ ಜಯಕರ್ನಾಟಕ ತಾಲೂಕು ಘಟಕದ ಕಾರ್ಯಕರ್ತರು ಅನಿರ್ಧಿಷ್ಟವಾಧಿ ಸತ್ಯಾಗ್ರಹ ಕೈಗೊಂಡಿದ್ದಾರೆ.
ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹರಿಹರ ನಗರದ ಗಾಂಧಿ ಮೈದಾನದ ಆವರಣದಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳಿಗೆ ದಿ. 27 /9/2024 ರಂದು ಹರಾಜು ಪ್ರಕಟಣೆ ಹೊರಡಿಸಿ ದಿನಾಂಕ 1.10.2024ರಂದು ಅರ್ಜಿ ವಿತರಿಸಲು ಹಾಗೂ ದಿನಾಂಕ 5.10.2024 ರಂದು ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಲಾಗಿರುತ್ತದೆ. ಎಲ್ಲಾ ಮಳಿಗೆ ಬಾಡಿಗೆದಾರರನ್ನು ಖಾಲಿ ಮಾಡಿಸದೆ ಹರಾಜು ಪ್ರಕ್ರಿಯ ಕೈಗೊಂಡಿರುವುದು ನಿಯಮ ಭಾರವಾಗಿದೆ. ಈ ಹಿಂದೆ ಸದರಿ ವಾಣಿಜ್ಯ ಮಳಿಗೆಗಳಿಗೆ ಹರಾಜು ಪ್ರಕ್ರಿಯೆಗೆಂದು ಅರ್ಜಿ ಫಾರಂ ಪಡೆಯಲು ಸಾರ್ವಜನಿಕರಿಂದ ರೂ 500/- ಗಳನ್ನು ಸಂಗ್ರಹಣೆ ಮಾಡಿಕೊಂಡು ಹರಾಜು ಪ್ರಕ್ರಿಯ ನಡೆಸಿರುವುದಿಲ್ಲ. ಇದರಿಂದ ಸಾರ್ವಜನಿಕರು ವಂಚಿತರಾಗಿದ್ದು ಇತ್ತೀಚಿಗೆ ಪುನ: ಸದರಿ ಮಳಿಗೆಗಳಿಗೆ ಹರಾಜು ನಡೆಸಲು ಜಿಲ್ಲಾ ಸಮಿತಿಯ ತೀರ್ಮಾನ ಉಲ್ಲಂಘನೆ ಮಾಡಿರುವುದರಿಂದ ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿಕೊಡುವವರೆಗೂ ಧರಣಿ ಸತ್ಯಾಗ್ರಹ ಮಾಡಲಾಗುವುದು ತಾಲೂಕು ಅಧ್ಯಕ್ಷರಾದ ಎಸ್ ಗೋವಿಂದ ಹೇಳಿದ್ದಾರೆ.
Read also : Davanagere | ದಾವಣಗೆರೆಗೆ ಮುಸ್ಲಿಂ ಮಹಿಳಾ ಕಾಲೇಜ್, ಅಧುನಿಕ ಅಂಬ್ಯುಲೆನ್ಸ್ ಮಂಜೂರು
ಉಪಾಧ್ಯಕ್ಷ ಆನಂದ್ ಎಂ ಆರ್, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಸಿಎಚ್ ಖಜಾಂಚಿ ಶÀಬ್ರೀಶ್, ಸಹ ಕಾರ್ಯದರ್ಶಿ ಭರತ್ ಭಾನಹಳ್ಳಿ , ವಿದ್ಯಾರ್ಥಿ ಘಟಕದ ಅಧ್ಯಕ್ಷ ಮಧು, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್, ಗ್ರಾಮ ಘಟಕದ ಅಧ್ಯಕ್ಷ ಅಪ್ಪು ಭಾನುವಳ್ಳಿ, ರುದ್ರಗೌಡರು ನಿಜಗುಣಪ್ಪ, ಕೊಟ್ರಪ್ಪ, ಕಿರಣ್, ಪ್ರದೀಪ್, ಗಿರೀಶ್, ಬಸವರಾಜ್ ಇದ್ದರು.