Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಬರದ ನಾಡಿನಿಂದ ಹಿಮಾಲಯ ಪರ್ವತಕ್ಕೆ ಕಣ್ವ ಕುಪ್ಪೆ ಶ್ರೀಗಳು
ತಾಜಾ ಸುದ್ದಿ

ಬರದ ನಾಡಿನಿಂದ ಹಿಮಾಲಯ ಪರ್ವತಕ್ಕೆ ಕಣ್ವ ಕುಪ್ಪೆ ಶ್ರೀಗಳು

Dinamaana Kannada News
Last updated: February 13, 2026 4:39 pm
Dinamaana Kannada News
Share
ಕಣ್ವ ಕುಪ್ಪೆ ಶ್ರೀಗಳು
SHARE

ಜಗಳೂರು: ಮಲೆನಾಡಿನಿಂದ ಬರದ ನಾಡಿಗೆ ಬಂದು ಬರದ ನಾಡಿನಿಂದ ಹಿಮಾಲಯ ಪರ್ವತಕ್ಕೆ ತೆರಳಿರುವ ಅಲ್ಲಿ ತಮ್ಮ ಸೇವೆಯನ್ನು ಮಾಡಲು ಉತ್ತರಾಧಿಕಾರಿಯಾಗಿ ನೇಮಕವಾಗಿರುವ ಕಣ್ವ ಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು.

ರಾಜ್ಯದಲ್ಲಿ ಅತಿ ಹಿಂದುಳಿದಿರುವಂತಹ ಹೊರನಾಡು ಪ್ರದೇಶವಾಗಿದ್ದ ಜಗಳೂರು ತಾಲೂಕಿನಲ್ಲಿರುವ ಕಣ್ಣ ಕುಪ್ಪೆ ಗವಿಮಠದ ಪೀಠಾಧ್ಯಕ್ಷರಾದ ನಂತರ ಮಠದಲ್ಲಿ ಬೊಗಸೆ ಅಕ್ಕಿ ಇಲ್ಲದಂತಹ ಸಂದರ್ಭದಲ್ಲಿ ಪೀಠಾಧ್ಯಕ್ಷರಾದ ಇವರು ಅಕ್ಕ ಪಕ್ಕದ ಜಮೀನುಗಳಿಂದ ಸೊಪ್ಪು ತಂದು ಬೇಯಿಸಿಕೊಂಡು ಜೀವನ ನಡೆಸಿ ಮಠವನ್ನು ದೇಶ ಅಲ್ಲದೆ ವಿಶ್ವದಾದ್ಯಂತ ಪಸರಿಸುವಂತ ಕೆಲಸ ಶ್ರೀಗಳಿಂದ ನಡೆಯುತ್ತಿದೆ.

ಜನನ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ಗ್ರಾಮದ ಎಂ ಡೇರೆಯ್ಯಸ್ವಾಮಿ ಮತ್ತು ಶಾರದಮ್ಮನವರ ಏಳು ಜನ ಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು.

ಬಾಲ್ಯ: ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಮಾಗಡಿ ಗ್ರಾಮದಲ್ಲಿ ಪ್ರೌಢ ಶಿಕ್ಷಣವನ್ನು ಹಿರೇಮಾಗಡಿ ಗ್ರಾಮದಲ್ಲಿ ಮುಗಿಸಿದ ನಂತರ ಬ್ಯಾಡಗಿ ತಾಲೂಕಿನಲ್ಲಿ ಶಿಕ್ಷಣ ಮುಂದುವರಿಸಿ ದಾಗ ಗುರುಪಾದರಾದ್ಯ ವೈದಿಕ್ಯ ಜ್ಯೋತಿಷ್ಯರ ಹತ್ತಿರ ಜ್ಯೋತಿಷ್ಯ ಕಲಿತರು ಇವರ ಆಸಕ್ತಿ ಮತ್ತು ನಿಷ್ಠೆಯನ್ನು ಕಂಡಂತಹ ಗುರುಪಾದರಾಧ್ಯರು ಬಾಳೆಹೊನ್ನೂರು ಪೀಠದ ಶ್ರೀಗಳಿಗೆ ಈ ಹುಡುಗ ಉತ್ತಮವಾಗಿ ಅಧ್ಯಯನ ಮಾಡಿಕೊಂಡಿದ್ದಾರೆ. ಯಾವುದಾದರೂ ಒಂದು ಮಠಕ್ಕೆ ಪೀಠಾಧಿಪತಿಯನ್ನಾಗಿ ಮಾಡಿದರೆ ಹೆಸರಾಂತ ಸ್ವಾಮಿಯಾಗಿ ಬೆಳೆಯ ಲಿದ್ದಾರೆ ಎಂದಾಗ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕಣ್ವ ಕಣ್ವ ಕುಪ್ಪೆ ಗವಿಮಠದಲ್ಲಿ ಮುಮ್ಮಡಿ ಶ್ರೀಗಳು ಲಿಂಗೈಕ್ಯರಾಗಿ ಖಾಲಿ ಇದ್ದ ಸ್ಥಾನಕ್ಕೆ ಶ್ರೀಗಳನ್ನು ಪೀಠಾಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು.

ವಿದ್ಯಾ ಶೈಕ್ಷಣಿಕ ಅರ್ಹತೆ: ಪಿಯುಸಿ ಐಟಿಐ ಬಿಎ ಪದವೀಧರರಾಗಿ , ಜ್ಯೋತಿಷ್ಯಶಾಸ್ತ್ರ ಆಗಮ ವೇದ ಮತ್ತು ಸಂಸ್ಕೃತ ಅಧ್ಯಾಯನ, ಶಂಭುಲಿಂಗಯ್ಯ ಡಿ ಎಂ ,ಪೂರ್ವಾಶ್ರಮದ ಹೆಸರಾಗುತ್ತು. ಉತ್ತರಾದಿ ಕತ್ವ: 2005 ಜೂನ್ 12ರಂದು ಭಾನುವಾರ ಉತ್ತರಾದಿಕತ್ವ ಪ್ರಾಪ್ತಿಯಾಯಿತು,

ಪಟ್ಟಾಧಿಕಾರ: 2005 ಮೇ 5 ರ ಭಾನುವಾರದಂದು ಪಟ್ಟ ಅಧ್ಯಕ್ಷರನ್ನಾಗಿ ಬಾಳೆಹೊನ್ನೂರು ಶ್ರೀಗಳು ಉಜ್ಜಯಿನಿ ಶ್ರೀಗಳು ನೇತೃತ್ವದಲ್ಲಿ ವೀರಶೈವ ಪದ್ಧತಿಯ ಪ್ರಕಾರ ಪಟ್ಟಾಧಿಕಾರವನ್ನು ಮಾಡಲಾಯಿತು.

ಖಾಲಿ ಮಠಕ್ಕೆ ಪೀಠಾಧಿಕಾರತ್ವ:  ಮುಮ್ಮಡಿ ಶ್ರೀಗಳ ಲಿಂಗೈಕ್ಯರ ಮೂರು ವರ್ಷಗಳ ನಂತರ ಪಟ್ಟದ್ದಾಕ್ಷರಾಗಿ ಬಂದಂತ ಶ್ರೀಗಳಿಗೆ ಮಠದಲ್ಲಿ ಸೆರಿ ಅಕ್ಕಿಯೂ ಸಹ ಇಲ್ಲದೆ ಇರುವಂತ ಸ್ಥಿತಿಯಲ್ಲಿ ಶ್ರೀಗಳು 15 ದಿನಗಳ ಕಾಲ ಅಕ್ಕಪಕ್ಕದ ಜಮೀನುಗಳಿಂದ ಸೊಪ್ಪನ್ನು ತಂದು ಬೇಯಿಸಿಕೊಂಡು ಸೇವನೆ ಮಾಡಿ ಬದುಕಿದರು.

ಖಾಲಿ ಇದ್ದ ಮಠಕ್ಕೆ ಭಕ್ತರ ದಂಡು ಹರಿಯುವಂತೆ ಮಾಡಿದ ಶ್ರೀಗಳು: ಪ್ರತಿನಿತ್ಯ ಇವರ ಪೂಜಾ ಕಾರ್ಯಗಳು ಹಾಗೂ ಜ್ಯೋತಿಷ್ಯ ವಾಣಿಯ ನಂತರ ಜಿಲ್ಲೆ ಅಲ್ಲದೆ ರಾಜ್ಯ ವರರ ರಾಜ್ಯಗಳಿಂದ ಸಹ ಭಕ್ತ ಸಮೂಹವನ್ನು ಸಂಪಾದಿಸಿ ಮಠವನ್ನು ಅಭಿವೃದ್ಧಿಪಡಿಸಿದರು.

ತಾವು ಸೊಪ್ಪು ತಿಂದು ಮಠಕ್ಕೆ ಬರುವ ಭಕ್ತರಿಗೆ ಮೃಷ್ಟಾನ್ನ ನೀಡಿದ ಶ್ರೀಗಳು :ಪಟ್ಟಾಧಿಕರಾದ ಪ್ರಾರಂಭದ ದಿನಗಳಲ್ಲಿ ಸೊಪ್ಪು ತಿಂದು ಜೀವನ ನಡೆಸಿದ ಶ್ರೀಗಳು ಮಠಕ್ಕೆ ಬರುವ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆಯನ್ನು ಮಾಡಿದ್ದು ಪ್ರತಿನಿತ್ಯ ಮಠಕ್ಕೆ ಬರುವ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆ ಇಂದಿಗೂ ಸಹ ನಡೆಯುತ್ತಿದೆ.

ಮಠದಲ್ಲಿ ಹಬ್ಬ ಆಚರಣೆಗಳು: ಯುಗಾದಿ ಸಂವತ್ಸರೋಸ್ತವ, ಪಟ್ಟಾದಿಕರ ವರ್ಧಂತಿ ಮಹೋತ್ಸವ, ಜೇಷ್ಠ ಆಶಾಡ ಮಾಶಗಳ ಪೂಜೆ, ಶ್ರಾವಣ ಮಾಸದ ವಿಶೇಷ ಪೂಜೆ, ಶರವನ್ನ ರಾತ್ರಿ ಪೂಜಾ ಮಹೋತ್ಸವ, ಧನುರ್ಮಾಸ ಪೂಜಾ ಸ್ಥಾನ ಪೂಜಾ ಕಾರ್ಯಗಳು ನಡೆಯುತ್ತಿದ್ದವು.

ಮಕರ ಸಂಕ್ರಾಂತಿ ಎಂದು ಮಹಾರಥೋತ್ಸವ: ಸಂಕ್ರಾಂತಿ ಶುಭದಿನದ ಧನುರ್ಮಾಸ ಪೂಜಾ ಪ್ರತಿಷ್ಠಾನ ಮಂಗಳ ಮತ್ತು ಕ್ಷೇತ್ರದ ಮೂಲಪುರುಷ ಶ್ರೀ ಗವಿ ಶಾಂತಲಿಂಗೇಶ್ವರ ಮಹಾ ರಥೋತ್ಸವ ಜರುಗುತ್ತಿದೆ.

ಕಣ್ವ ಕುಪ್ಪೆಯಿಂದ ಕೇದಾರನಾಥಕ್ಕೆ : 2011ರಲ್ಲಿ ಕೇದಾರನಾಥನ ದರ್ಶನ ಪಡೆದವರು ಕೇದಾರ ಶ್ರೀಗಳ ಗಳನ್ನು ಮಠಕ್ಕೆ ಕರೆಸಿ ಪೂಜಾ ಕಾರ್ಯಗಳನ್ನು ಮಾಡಬೇಕೆಂಬ ಉದ್ದೇಶದಿಂದ ಭಕ್ತಿಯಿಂದ ಆಹ್ವಾನ ನೀಡಿದಾಗ ಕೇದಾರ ಶ್ರೀಗಳು 2013ರಲ್ಲಿ ಕಣ್ವ ಕುಪ್ಪೆ ಗವಿಮಠಕ್ಕೆ ಬಂದು ಶ್ರಾವಣ ಮಾಸದ ಪೂಜಾ ಕಾರ್ಯಗಳನ್ನು ಮಾಡಿದರು. ಈ ವೇಳೆ ಕೇದಾರ ಶ್ರೀಗಳು ಕಣ್ವ ಕುಪ್ಪೆ ಶ್ರೀಗಳ ಪೂಜಾ ಕಾರ್ಯವನ್ನು ನೋಡಿ ಶಿಷ್ಯಾತ್ವಾಧಿಕಾರವನ್ನು  ನೀಡಿದರು.

Read also : ಎ.ವಿ.ಕಮಲಮ್ಮ ಮಹಿಳಾ ಕಾಲೇಜ್ : ತಂಬಾಕು ಸೇವನೆ ಜಾಗೃತಿ ಕಾರ್ಯಕ್ರಮ

ನಂತರ ಕೇದಾರನಾಥ ಶ್ರೀಗಳ ಆಹ್ವಾನದಂತೆ ಕಣ್ವ ಕುಪ್ಪೆ ಶ್ರೀಗಳು 2015ರಲ್ಲಿ ಕೇದಾರದಲ್ಲಿ 183 ದಿನಗಳ ಕಾಲ ಮಹಾಮಂಡಲ ಪೂಜಾ ಕಾರ್ಯವನ್ನು ನೆರವೇರಿಸಿದರು.

ನಂತರ ಆಗಾಗ ತೆರಳಿ ಪೂಜಾ ಕಾರ್ಯಗಳನ್ನು ಮಾಡುತ್ತಿದ್ದ ಶ್ರೀಗಳಿಗೆ ಕೇದಾರ ಶ್ರೀಗಳು 2026 ಫೆಬ್ರವರಿ 12ರಂದು ಕೇದಾರನಾಥ ಪೀಠಕ್ಕೆ  ಉತ್ತಾರಧಾರಿಯಾಗಿ ನೇಮಕ  ಮಾಡಿದ್ದಾರೆ.  ತಾಲೂಕಿನ ಕೀರ್ತಿಯನ್ನು ರಾಜ್ಯಾ ದೇಶ ಅಲ್ಲದೆ ವಿಶ್ವಕ್ಕೆ ಪಸರಿಸುವಂತಹ ಕೆಲಸ ಶ್ರೀಗಳಿಂದ ನಡೆದಿದೆ.

TAGGED:Davanagere Newsdinamaana.comKannada Newsಕಣ್ವ ಕುಪ್ಪೆ ಶ್ರೀಗಳುಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ಎ.ವಿ.ಕಮಲಮ್ಮ ಮಹಿಳಾ ಕಾಲೇಜ್ : ತಂಬಾಕು ಸೇವನೆ ಜಾಗೃತಿ ಕಾರ್ಯಕ್ರಮ
Next Article Davanagere ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಜಿಲ್ಲಾಧಿಕಾರಿ ಗಂಗಾಧರಸ್ವಾಮಿ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದಾವಣಗೆರೆ : ಯುವಕರು ಏಡ್ಸ್ ಬಗ್ಗೆ ಜಾಗೃತಿವಹಿಸುವುದು ಅತೀ ಮುಖ್ಯ

ದಾವಣಗೆರೆ ಆ.12: ಏಡ್ಸ್ ಕುರಿತಂತೆ ಯುವಜನರಲ್ಲಿ ಜಾಗೃತಿ ಹೊಂದುವುದು ಅತೀ ಮುಖ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ…

By Dinamaana Kannada News

ಸೊಂಡೂರಿನ ಕಗ್ಗತ್ತಲೆಯ ಕಥನಗಳು-17 ಅಂತರಂಗ ಕಳೆದುಕೊಂಡ ನತದೃಷ್ಟ ಊರಿನಲ್ಲಿ…

  ಅತಿ ಹೆಚ್ಚು ಬ್ಯಾಂಕ್ ವ್ಯವಹಾರ ನಡೆದಿದ್ದು  ಸೊಂಡೂರಿನಲ್ಲಿ ಭಾರತದ ನಗರಗಳ ಪೈಕಿ ಕೊಲ್ಕತ್ತ ಸಿಟಿಯನ್ನು ಹೊರತುಪಡಿಸಿದರೆ ಅತಿ ಹೆಚ್ಚು…

By Dinamaana Kannada News

ನಕಲಿ ಬಂಗಾರ ಪ್ರಕರಣ : ಆರೋಪಿ ಸೆರೆ 5 ಲಕ್ಷ ನಗದು ವಶಕ್ಕೆ

ದಾವಣಗೆರೆ : ನಕಲಿ ಬಂಗಾರ ನೀಡಿ, ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಹದಡಿ ಪೊಲೀಸರು ಬಂಧಿತರಿಂದ  5 ಲಕ್ಷ ನಗದು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಜಿಲ್ಲಾಧಿಕಾರಿ ಗಂಗಾಧರಸ್ವಾಮಿ

By Dinamaana Kannada News
Davanagere
ತಾಜಾ ಸುದ್ದಿ

ಎ.ವಿ.ಕಮಲಮ್ಮ ಮಹಿಳಾ ಕಾಲೇಜ್ : ತಂಬಾಕು ಸೇವನೆ ಜಾಗೃತಿ ಕಾರ್ಯಕ್ರಮ

By Dinamaana Kannada News
Darshan Kurubas
ಅಭಿಪ್ರಾಯ

ನೀಟ್|ವೈದ್ಯಕೀಯ ಆಕಾಂಕ್ಷಿಗಳ ಸಾವು ನೋವು: ಲೇಖನ ದರ್ಶನ್ ಕುರುಬಾಸ್

By Dinamaana Kannada News
Davanagere
ತಾಜಾ ಸುದ್ದಿ

ಶಿಕ್ಷಣದ ಜೊತೆಗೆ ವ್ಯವಸಾಯಕ್ಕೆ ಆದ್ಯತೆ ನೀಡಿ: ಶಾಸಕ ಬಿ.ದೇವೇಂದ್ರಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?