ದಾವಣಗೆರೆ (Davanagere): ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜ.25 ಹಾಗೂ 26ರಂದು ಬೆಳಗ್ಗೆ 10ಕ್ಕೆ ಹರಿಹರ ಹೊರವಲಯದ ಬಿ.ಕೃಷ್ಣಪ್ಪನವರ ಸಮಾಧಿ ಸ್ಥಳ ಮೈತ್ರಿವನದ ಸ್ಮಾರಕಭವನದಲ್ಲಿ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ಮತ್ತು ಸರ್ವಸದಸ್ಯರ ಸಭೆ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿ ಜಿಲ್ಲಾ ಸಂಚಾಲಕ ಡಿ. ಹನುಮಂತಪ್ಪ ಮಾತನಾಡಿ, ಹರಿಹರದ ರೈಲು ನಿಲ್ದಾಣಕ್ಕೆ ಮಹಾತ್ಮ ಪ್ರೋ. ಬಿ. ಕೃಷ್ಣಪ್ಪನವರ ಹೆಸರನ್ನು ನಾಮಕರಣ ಮಾಡಬೇಕೆಂದು ಕೇಂದ್ರ ಸರ್ಕಾರ ಹಾಗೂ ಜಿಲ್ಲೆಯ ಸಂಸದರು ಹಾಗೂ ರಾಜ್ಯದ ಸಂಸದರಿಗೆ ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಗುವುದು ಮತ್ತು ಕ.ದ.ಸಂ.ಸ ನೂತನ ರಾಜ್ಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಸರ್ವ ಸದಸ್ಯರ ಸಭೆ ಏರ್ಪಡಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆರ್ ಶ್ರೀನಿವಾಸ್, ಟಿ.ರುದ್ರಪ್ಪ,ತಿಪ್ಪೇಸ್ವಾಮಿ, ಕರಿಬಸಪ್ಪ, ಹರೀಶ್, ಜೆ.ಡಿ ಕೃಷ್ಣಮೂರ್ತಿ, ಡಿ.ಎನ್ ಗಣೇಶ್ ಇದ್ದರು.
Read also : ಬಸವನಗೌಡ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷರಾಗಬೇಕು : ಶಾಸಕ ಬಿ.ಪಿ. ಹರೀಶ್