ಹರಿಹರ (Harihara): ಡಾ.ಅಂಬೇಡ್ಕರ್ ಕುರಿತು ಸಂಸತ್ತಿನಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ಗೃಹ ಸಚಿವಅಮಿತ್ ಶಾ ರಾಜಿನಾಮೆ ನೀಡಬೇಕೆಂದು ಆಮ್ ಆದ್ಮಿ ಪಕ್ಷದ ತಾಲ್ಲೂಕು ಘಟಕ ಅಧ್ಯಕ್ಷ ಬಸವರಾಜ್ ಹಲಸಬಾಳು , ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆಗ್ರಹಿಸಿದ್ದಾರೆ.
ಅಂಬೇಡ್ಕರ್‍ರವರ ಹೆಸರನ್ನು ಸ್ಮರಿಸುವುದನ್ನು ವ್ಯಸನಎಂದು ಶಾ ಜರಿದಿದ್ದಾರೆ. ಶತಮಾನಗಳಿಂದ ಶೋಷಣೆಗೆ ಈಡಾಗಿದ್ದ ಈ ದೇಶದ ಬಹು ಸಂಖ್ಯಾತರರಿಗೆ ಸಮಾನ ಬದುಕುವ ಹಕ್ಕನ್ನು ನೀಡಿದ ಖ್ಯಾತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಶಾರವರು ಸಂಸತ್ತಿನಲ್ಲಿ ಆಡಿದ ಮಾತು ಸಂಘ ಪರಿವಾರದವರು ಅಂಬೇಡ್ಕರ್‍ರವರ ಬಗ್ಗೆ ಇಟ್ಟುಕೊಂಡಿರುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಂಬೇಡ್ಕರ್ ಸಂವಿಧಾನ ರಚಿಸದಿದ್ದರೆ ಈ ದೇಶದ ಶೋಷಿತರೂ ಈಗಲೂ ಕೂಡ ಮೇಲ್ವರ್ಗದವರ ಮನೆಗಳಲ್ಲಿ ಜೀತ ಮಾಡಿಕೊಂಡಿರಬೇಕಿತ್ತು. ಕೆಳ ಜಾತಿಯಲ್ಲಿ ಹುಟ್ಟಿದ್ದರೆ ಶಾರವರಿಗೆ ಶೋಷಣೆ, ಅಸ್ಪøಶ್ಯತೆಗೆ ಈಡಾದ ಜನಾಂಗಗಳ ದುಸ್ಥಿತಿ ಅರಿವಿಗೆ ಬರುತ್ತಿತ್ತು. ದೇಶದ ದಲಿತ, ಶೋಷಿತ, ಹಿಂದುಳಿದವರ ಹಾಗೂ ಮಹಿಳೆಯರ ಪಾಲಿಗೆ ಹಕ್ಕುದಾತರಾದ ಅಂಬೇಡ್ಕರ್ ಬಗ್ಗೆ ಶಾ ಆಡಿದ ಮಾತು ಅಕ್ಷಮ್ಯವಾಗಿದೆ. ಕೂಡಲೇ ಇವರನ್ನು ಕೇಂದ್ರ ಸಚಿವ ಸಂಪುಟದಿಂದ ಕೈಬಿಡಬೇಕೆಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.