Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಮಣ್ಣು ಗಣಿಗಾರಿಕೆ : ಪ್ರಾಣ ಹಾನಿಯಾದರೆ ಅಧಿಕಾರಿಗಳೇ ಹೊಣೆಗಾರರನ್ನಾಗಿಸಿ : ಡಿಎಸ್‌ಎಸ್‌
ತಾಜಾ ಸುದ್ದಿ

ಮಣ್ಣು ಗಣಿಗಾರಿಕೆ : ಪ್ರಾಣ ಹಾನಿಯಾದರೆ ಅಧಿಕಾರಿಗಳೇ ಹೊಣೆಗಾರರನ್ನಾಗಿಸಿ : ಡಿಎಸ್‌ಎಸ್‌

Dinamaana Kannada News
Last updated: January 3, 2025 5:15 pm
Dinamaana Kannada News
Share
Karnataka Dalit Sangharsa Samiti Harihar
Karnataka Dalit Sangharsa Samiti Harihar
SHARE

ಹರಿಹರ (Harihara): ಜಮೀನುಗಳಲ್ಲಿನ ಮಣ್ಣು ಗಣಿಗಾರಿಕೆಯಿಂದ ವಿದ್ಯುತ್ ಪ್ರಸಾರದ ಟವರ್‍ಗಳು ಉರುಳಿ ಬಿದ್ದು ಜನ, ಜಾನವಾರುಗಳ ಪ್ರಾಣಕ್ಕೆ ಆಸ್ತಿ, ಪಾಸ್ತಿಗಳಿಗೆ ಹಾನಿಯಾದರೆ ಸಂಬಂಧಿತ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆಗ್ರಹಿಸಿದ್ದಾರೆ.

ಕೃಷಿ ಕಾರ್ಯಕ್ಕೆ ಅನುಕೂಲವಾಗಲೆಂದು ಜಮೀನುಗಳ ಸಮತಟ್ಟ ಮಾಡಲು ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಮತ್ತು ಕೃಷಿ ಇಲಾಖೆಯವರು ಅನುಮತಿ ನೀಡುತ್ತಾರೆ. ಅಂತಹ ಅನುಮತಿ ಪಡೆದವರು 10 ರಿಂದ 15 ಅಡಿ ಆಳದವರೆಗೆ ಜಮೀನುಗಳನ್ನು ಅಗೆದು ರೂ.10 ಸಾವಿರಕ್ಕೊಂದು ಲಾರಿ ಲೋಡಿನಂತೆ ಮಣ್ಣನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

4000 ವೋಲ್ಟೇಜ್ ಪ್ರಮಾಣದ ವಿದ್ಯುತ್ ಪ್ರವಾಹ ಇರುವ ಟವರ್ ಗಳು ನೆಲಕ್ಕುರುಳಿದರೆ ಊಹಿಸಲಾಗದಷ್ಟು ಹಾನಿಯಾಗುವ ಸಾಧ್ಯತೆ ಇರುತ್ತದೆ. ಟವರ್‍ಗಳ ಅಕ್ಕಪಕ್ಕದಲ್ಲೆ ಮಣ್ಣು ಅಗೆಯುವುದನ್ನು ತಡೆಯುವಲ್ಲಿ ಕೆಪಿಟಿಸಿಎಲ್ ಸೇರಿದಂತೆ ಜಮೀನು ಸಮತಟ್ಟ ಮಾಡಲು ಅನುಮತಿ ನೀಡುವ ಅಧಿಕಾರಿ ವಿಫಲರಾಗಿರುವುದು ರುಜುವಾತು ಆಗಿದೆ ಎಂದು ತಿಳಿಸಿದ್ದಾರೆ.

ಕೆಪಿಟಿಸಿಎಲ್ ಅಧಿಕಾರಿಗಳ ಭೇಟಿ: ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಗಮನಿಸಿ ಗುರುವಾರದಂದು ಕೆಪಿಟಿಸಿಎಲ್‍ನ ಟಿಎಲ್‍ಎಂ (ಪ್ರಸರಣ ಮಾರ್ಗ ನಿರ್ವಹಣೆ ಶಾಖೆ) ಎಇಇ ರೂಪ ಹಾಗೂ ಇತರೆ ಸಿಬ್ಬಂದಿ ತಾಲ್ಲೂಕಿನ ಗುತ್ತೂರು ಗ್ರಾಮದ ಸರ್ವೆ ನಂ.156/6 ನ ಜಮೀನಿನಲ್ಲಿರುವ ಟವರ್ ಭದ್ರತೆಯನ್ನು ಪರಿಶೀಲಿಸಿದರು.

ಮಣ್ಣು ಅಗೆದಿರುವುದರಿಂದ ಟವರ್ ಭದ್ರತೆಗೆ ಎದುರಾಗಿರುವ ಅಪಾಯವನ್ನು ವಿವರಿಸಿ, ಆ ಭಾಗದಲ್ಲಿ ಮಣ್ಣು ಅಗೆಯುವುದನ್ನು ತಡೆಗಟ್ಟಲು ಸೂಕ್ತ ಗಮನಹರಿಸಬೇಕೆಂದು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರರಿಗೆ ಶುಕ್ರವಾರ ಪತ್ರ ರವಾನಿಸಲಾಗಿದೆ ಎಂದು ಕೆಪಿಟಿಸಿಎಲ್‍ನ ಎಇಇ ರೂಪ ತಿಳಿಸಿದ್ದಾರೆ.

Read also : ಶಾಲಾ ಸಬಲೀಕರಣ ಸಮಿತಿಯ ವರದಿ ಯಥಾವತ್ತಾಗಿ ಜಾರಿಗೆ ಪ್ರಜಾ ಪರಿವರ್ತನಾ ವೇದಿಕೆ ಒತ್ತಾಯ

TAGGED:Davangere District.dinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davangere ಶಾಲಾ ಸಬಲೀಕರಣ ಸಮಿತಿಯ ವರದಿ ಯಥಾವತ್ತಾಗಿ ಜಾರಿಗೆ ಪ್ರಜಾ ಪರಿವರ್ತನಾ ವೇದಿಕೆ ಒತ್ತಾಯ
Next Article bhima koregaon ಭೀಮ ಕೋರೆಗಾಂವ್ ಒಂದು ಸ್ವಾಭೀಮಾನದ ಯುದ್ಧ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಜಿಲ್ಲಾಧಿಕಾರಿಗೆ ಜ್ವಲಂತ ಸಮಸ್ಯೆಗಳ ದರ್ಶನ : ಶಾಸಕ ಕೆ.ಎಸ್.ಬಸವಂತಪ್ಪ ಅವರೊಂದಿಗೆ ಮಾಯಕೊಂಡಕ್ಕೆ ತೆರಳಿ ವಾಸ್ತವ ಸಮಸ್ಯೆಗಳ ಪರಿಶೀಲನೆ

ದಾವಣಗೆರೆ: ‘ಅಧಿಕಾರಿಗಳಿಗೆ ಹಳ್ಳಿಗಳ ಸಮಸ್ಯೆ ದರ್ಶನ ಆಗಬೇಕು. ಆಗ ಮಾತ್ರ ಆ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ’ ಎಂಬ ನಿಟ್ಟಿನಲ್ಲಿ…

By Dinamaana Kannada News

Crime News:ತಾಳೆ ಬೆಳೆಯೊಂದಿಗೆ ಸುಟ್ಟು ಕರಕಲಾದ ರೈತ

ನ್ಯಾಮತಿ: ತಾಳೆ ತೋಟಕ್ಕೆ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ರೈತನೊಬ್ಬ ಬೆಂಕಿಗೆ ಆಹುತಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ…

By Dinamaana Kannada News

ದಾವಣಗೆರೆ: ಆಧುನಿಕ ಹೈನುಗಾರಿಕೆ ಸಾಕಾಣಿಕೆ ತರಬೇತಿ

ದಾವಣಗೆರೆ :  ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಅಕ್ಟೋಬರ್ 27 ಮತ್ತು 28 ರಂದು ಆಧುನಿಕ ಹೈನುಗಾರಿಕೆ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ನಿಮ್ಮ ಮೇಲೆ ನಂಬಿಕೆ ಇಡಿ,ಕಠಿಣ ಸತ್ಯ ಎದುರಿಸಿ ಅವಕಾಶ ಸೃಷ್ಟಿಸಿಕೊಳ್ಳಬೇಕು : ಸೈಯದ್ ಖಾಲಿದ್ ಅಹ್ಮದ್ ಕರೆ

By Dinamaana Kannada News
Applications invited
ತಾಜಾ ಸುದ್ದಿ

ಖಾಲಿ ಇರುವ ಕರ್ನಾಟಕ ಒನ್ ಫ್ರಾಂಚೈಸಿ ಕೇಂದ್ರಗಳಿಗೆ ಅರ್ಜಿ ಆಹ್ವಾನ

By Dinamaana Kannada News
Harihara
ತಾಜಾ ಸುದ್ದಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಎಸ್‌ಎಸ್‌ ಸಿಎಂಗೆ ಮನವಿ

By Dinamaana Kannada News
Jagalore
ತಾಜಾ ಸುದ್ದಿ

ಜಗಳೂರು:ರಾಗಿಯ ನಂತರ ಶೇಂಗಾ ಬೆಳೆಗೆ ಒತ್ತು ನೀಡಿದ ರೈತರು

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?