ದಾವಣಗೆರೆ (Davanagere): ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ದೇವದಾಸಿ ಪುನರ್ ವಸತಿ ಯೋಜನೆಯಡಿ ನಿವೇಶನ ಹೊಂದಿದ ಅರ್ಹ ಮಾಜಿ ದೇವದಾಸಿ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿ ಉಪಯೋಜನೆಯಡಿ ಬಳಕೆಯಾಗದ ಅನುದಾನದಡಿ ಜಿಲ್ಲೆಗೆ ಭೌತಿಕ 19, ಆರ್ಥಿಕ ರೂ.34 ಲಕ್ಷಗಳ ಗುರಿ ಸೇರಿದಂತೆ ಒಟ್ಟು 67 ಭೌತಿಕ ಗುರಿ ನಿಗದಿಪಡಿಸಿದ್ದು, ಗ್ರಾಮೀಣ ಪ್ರದೇಶದ ಘಟಕ ವೆಚ್ಚ ರೂ.1.75 ಲಕ್ಷ ಹಾಗೂ ನಗರ ಪ್ರದೇಶದ ರೂ.2 ಲಕ್ಷಗಳ ಘಟಕ ವೆಚ್ಚದಲ್ಲಿ ರಾಜೀವಗಾಂಧಿ ವಸತಿ ನಿಗಮದಿಂದ ವಸತಿ ಸೌಲಭ್ಯವನ್ನು ಒದಗಿಸಲಾಗುವುದು.
ಅರ್ಹರು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ 1 ಜನವರಿ 2025 ರೊಳಗೆ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ:08192-222117 ಗೆ ಸಂಪರ್ಕಿಸಲು ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.
Read also : ಅಪ್ರಾಪ್ತ ಬಾಲಕಿ ಅಪಹರಿಸಿ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ