ದಾವಣಗೆರೆ: ಮಳೆಗಾಗಿ ಪ್ರಾರ್ಥಿಸಿ ತಾಲ್ಲೂಕಿನ ಕೊಗ್ಗನೂರು ಗ್ರಾಮದಲ್ಲಿ ಯುವಕರು ಮತ್ತು ರೈತರು ಗ್ರಾಮದಲ್ಲಿರುವ ದೇವಸ್ಥಾನಗಳ ದೇವರುಗಳಿಗೆ ನೀರಿನ ಅಭಿಷೇಕ ಮಾಡಿದರು.
ಬಿತ್ತನೆ ಮಾಡಿ ಹದಿನೈದು ದಿನಗಳಾದರೂ ಮಳೆ ಬಾರದೇ ಬೆಳೆಗಳು ಸಂಪೂರ್ಣ ನಾಶವಾಗುವ ಹಂತಕ್ಕೆ ತಲುಪಿದ್ದು, ಬಿತ್ತನೆಗಾಗಿ ಮಾಡಿದ ಗೊಬ್ಬರ, ಬೀಜದ ವೆಚ್ಚ ಮಾಡಲಾಗಿದ್ದು, ಮಳೆ ಬಾರದೆ ಇರುವುದರಿಂದ ಆರ್ಥಿಕ ನಷ್ಟವಾಗುವ ಸಂಭವವಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.
ಆದ್ದರಿಂದ ವರುಣದೇವ ಕೃಪೆ ತೋರಬೇಕೆಂದು ಗ್ರಾಮದ ಪ್ರಮುಖ ದೇವತೆಗಳಾದ ಶ್ರೀ ಆಂಜನೇಯ, ಬೀರಲಿಂಗೇಶ್ವರ ದುರ್ಗಾಂಬಿಕಾ ದೇವಿ, ಕರಗಲ್ಲ, ದುಂಡಿದುರ್ಗಮ್ಮ, ದೇವರುಗಳಿಗೆ ಬಿಂದಿಗೆಯಲ್ಲಿ ನೀರು ಹಾಕುವುದರ ಮುಖಾಂತರ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ರೈತರಾದ ಕೆ.ಹನುಮಂತ, ಕೆ.ಪಿ. ಆಕಾಶ್, ಎಂ. ಸಿದ್ದೇಶ್, ಎಂ. ದರ್ಶನ್, ಆರ್. ಶಿವು ಸೆರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.