ಕೋಲಾರ :
ಹಿರಿಯ ಸಾಹಿತಿ ,ಚಿಂತಕ ಕೋಟಗಾನಹಳ್ಳಿ ರಾಮಯ್ಯ ಅವರ ಮೇಲೆ ಹಲ್ಲೆ ನಡೆದಿತ್ತು. ಅವರು ಚಿಕಿತ್ಸೆಗಾಗಿ ಅಸ್ಪತ್ರೆ ದಾಖಲಾಗಿದ್ದರು.
ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರನ್ನು ಹಿರಿಯ ದಲಿತ ಸಂಘಟನೆ ನಾಯಕ ಮಾವಳ್ಳಿ ಶಂಕರ್, ಕಲಾವಿದ ಪಿಚ್ಚಳ್ಳಿ ಸೇರಿದಂತೆ ಹತ್ತಾರು ದಲಿತ ಹಾಗೀ ಪ್ರಗತಿಪರ ಸಂಘಟನೆಗಳ ನಾಯಕರು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಆರೋಗ್ಯ ಸ್ಥಿತಿ ಹಾಗೂ ಘಟನೆ ಕುರಿತು ಮಾಹಿತಿ ಪಡೆಯಲಾಯಿತು.. ಕಣ್ಣಿಗೆ ಸ್ವಲ್ಪ ಪೆಟ್ಠಾಗಿದ್ದು ಅದನ್ನು ಹೊರತುಪಡಿಸಿ ಅವರು ಸಂಪೂರ್ಣ ಆರೋಗ್ಯವಾಗಿದ್ದಾರೆ.