ಶಿವಮೊಗ್ಗ : ಕೋಟಕ್ ಮಹೀಂದ್ರಾ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (“ಕೋಟಕ್ ಲೈಫ್”) ಕೋಟಕ್ ಸಿಗ್ನೇಚರ್ ಟರ್ಮ್ ಪ್ಲಾನ್ ಪ್ರಾರಂಭಿಸುವುದಾಗಿ ಘೋಷಿಸಿದೆ.
ಇದು ಉದಯೋನ್ಮುಖ ಶ್ರೀಮಂತ ಸಂಬಳ ಪಡೆಯುವ ವೃತ್ತಿಪರರು ಮತ್ತು ಉದ್ಯಮಿಗಳಿಗಾಗಿ ರಚಿಸಲಾದ ಶುದ್ಧ ರಕ್ಷಣಾ ಅವಧಿ ವಿಮಾ ಸೌಲಭ್ಯವಾಗಿದೆ. ಈ ಯೋಜನೆಯು ಸ್ಪರ್ಧಾತ್ಮಕ ಪ್ರೀಮಿಯಂಗಳಲ್ಲಿ ಗಣನೀಯ ಕವರೇಜ್ ಅನ್ನು ನೀಡುತ್ತದೆ, ಕುಟುಂಬಗಳು ತಮ್ಮ ಜೀವನಶೈಲಿಯನ್ನು ಉಳಿಸಿಕೊಳ್ಳಲು ಮತ್ತು ಅವರ ಪರಂಪರೆಯನ್ನು ನಿರ್ಮಿಸುವುದನ್ನು ಮುಂದುವರಿಸಲು ಅನುವು ಮಾಡಿಕೊಡುವ ಬಲವಾದ ಆರ್ಥಿಕ ರಕ್ಷಣೆಯನ್ನು ಖಚಿತಪಡಿಸುತ್ತದೆ.
ಕೋಟಕ್ ಲೈಫ್ನ MD ಮತ್ತು CEO ಮಹೇಶ್ ಬಾಲಸುಬ್ರಮಣಿಯನ್ ಅವರು ಮಾತನಾಡುತ್ತಾ, “ಕೋಟಕ್ ಲೈಫ್ನಲ್ಲಿ, ನಮ್ಮ ಗಮನವು ಯಾವಾಗಲೂ ಪ್ರಸ್ತುತ ಮತ್ತು ದೂರದೃಷ್ಟಿಯ ಪರಿಹಾರಗಳನ್ನು ತಲುಪಿಸುವುದರ ಮೇಲೆ ಇರುತ್ತದೆ. ಕೋಟಕ್ ಸಿಗ್ನೇಚರ್ ಟರ್ಮ್ ಪ್ಲಾನ್ ಅನ್ನು ವಿಶೇಷವಾಗಿ ಭಾರತದ ಬೆಳೆಯುತ್ತಿರುವ ಶ್ರೀಮಂತ ವೃತ್ತಿಪರರು ಮತ್ತು ಉದ್ಯಮಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
ಇದು ಅವರ ಗುರಿಗಳಿಗೆ ಹೊಂದಿಕೆಯಾಗುವ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು, ನಾವೀನ್ಯತೆಯನ್ನು ಪ್ರೋತ್ಸಾಹಿಸುವುದು ಮತ್ತು ಜನರು ತಮ್ಮ ಭವಿಷ್ಯವನ್ನು ವಿಶ್ವಾಸದಿಂದ ಭದ್ರಪಡಿಸಿಕೊಳ್ಳಲು ಸಹಾಯ ಮಾಡುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದರು.
Read also : ಯುವತಿಯ ಜೀವ ಉಳಿಸಿದ ನಂಜಪ್ಪ ಲೈಫ್‌ಕೇರ್‌ನ ತಜ್ಞರು: ಮೆದುಳಿನ ರಕ್ತಸ್ರಾವ ತಪ್ಪಿಸಿದ ಸುಧಾರಿತ ಚಿಕಿತ್ಸೆ
ಭಾರತವು ಹೊಸ ಪೀಳಿಗೆಯ ಮಹತ್ವಾಕಾಂಕ್ಷೆಯ ಮತ್ತು ಸ್ವ-ಚಾಲಿತ ವ್ಯಕ್ತಿಗಳ ಏರಿಕೆಯನ್ನು ಕಾಣುತ್ತಿದೆ, ಅವರು ಕೇವಲ ಗಳಿಸುವುದಲ್ಲದೆ ಸಕ್ರಿಯವಾಗಿ ಹೂಡಿಕೆ ಮಾಡುತ್ತಾರೆ, ಉಳಿತಾಯ ಮಾಡುತ್ತಾರೆ ಮತ್ತು ತಮ್ಮ ಕುಟುಂಬಗಳ ಭವಿಷ್ಯವನ್ನು ರಕ್ಷಿಸಲು ಪರಂಪರೆಯನ್ನು (ವಿರಾಸತ್) ರಚಿಸುತ್ತಾರೆ. ಅವರು ವಿವಿಧ ಸಾಧನಗಳನ್ನು ಬಳಸಿಕೊಂಡು ತಮ್ಮ ಆರ್ಥಿಕ ಭವಿಷ್ಯವನ್ನು ನಿರ್ಮಿಸುತ್ತಿದ್ದಾರೆ. ಆದಾಗ್ಯೂ, ಈ ಆರ್ಥಿಕ ಬೆಳವಣಿಗೆಯು ಸಾಮಾನ್ಯವಾಗಿ ಸರಿಯಾದ ರಕ್ಷಣಾ ಯೋಜನೆಯೊಂದಿಗೆ ಹೊಂದಿಕೆಯಾಗುವುದಿಲ್ಲ.
ಈ ಅಂತರವನ್ನು ನೀಗಿಸಲು, ಕೋಟಕ್ ಲೈಫ್ ವಿವಿಧ ಜೀವನ ಹಂತಗಳು ಮತ್ತು ಆರ್ಥಿಕ ಆದ್ಯತೆಗಳಿಗೆ ಸರಿಹೊಂದುವAತೆ ವಿನ್ಯಾಸಗೊಳಿಸಲಾದ ವ್ಯಾಪಕ ಶ್ರೇಣಿಯ ಟರ್ಮ್ ವಿಮಾ ಪರಿಹಾರಗಳನ್ನು ಒದಗಿಸುತ್ತದೆ.
ಕೋಟಕ್ ಸಿಗ್ನೇಚರ್ ಟರ್ಮ್ ಪ್ಲಾನ್ ಉದಯೋನ್ಮುಖ ಶ್ರೀಮಂತರ ಮಹತ್ವಾಕಾಂಕ್ಷೆಗಳು ಮತ್ತು ಬದಲಾಗುತ್ತಿರುವ ಅಗತ್ಯಗಳಿಗೆ ಹೊಂದಿಕೆಯಾಗುವ ವೈಯಕ್ತಿಕಗೊಳಿಸಿದ ಪ್ರಯೋಜನಗಳನ್ನು ಒದಗಿಸುವ ಮೂಲಕ ಈ ಪೋಟ್ಫೋðಲಿಯೊವನ್ನು ಬಲಪಡಿಸುತ್ತದೆ ಮತ್ತು ಅವರು ನಿರ್ಮಿಸಲು ಶ್ರಮಿಸುತ್ತಿರುವ ಪರಂಪರೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.