ದಾವಣಗೆರೆ : ಯುವ ಸಮುದಾಯ ಜೀವ ರಕ್ಷಣಾ ಕೌಶಲ್ಯವನ್ನು ಕಲಿತು ಜೀವ ಉಳಿಸಬೇಕು ಎಂದು ಸುಭಾನ್ ಸಾಬ್ ನದಾಫ್ ಕರೆ ನೀಡಿದರು.
ನಗರದ ಎವಿ ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಯೂಥ್ ರೆಡ್ ಕ್ರಾಸ್ ಸಮಿತಿ ವತಿಯಿಂದ ಆಯೋಜಿಸಿದ್ದ “ಜೀವ ರಕ್ಷಣಾ ಕೌಶಲ್ಯಗಳು” ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೀವ ಉಳಿಸುವ ಕೌಶಲ್ಯಗಳು ಕೇವಲ ವೈದ್ಯಕೀಯ ವೃತ್ತಿಪರರಿಗೆ ಮಾತ್ರವಲ್ಲ ಪ್ರತಿಯೊಬ್ಬ ನಾಗರೀಕನ ಮೂಲಭೂತ ಜವಾಬ್ದಾರಿಯಾಗಬೇಕು. ಪ್ರಥಮ ಚಿಕಿತ್ಸೆ , ಸುಟ್ಟ ಗಾಯಗಳು ಮತ್ತು ಸಾಮಾನ್ಯ ಗಾಯಗಳನ್ನು ಹೇಗೆ ನಿರ್ವಹಿಸುವುದು. ಹೃದಯಘಾತದ ಲಕ್ಷಣಗಳನ್ನು ಗುರುತಿಸುವುದು ಮತ್ತು ತ್ವರಿತ ಪ್ರತಿಕ್ರಿಯೆ ನೀಡುವುದು ಹೇಗೆ ಮತ್ತು ಎಷ್ಟು ನಿರ್ಣಾಯಕ ಎಂದು ವಿವರಿಸಿದರು.
ತುರ್ತು ಸೇವೆಗಳಿಗೆ ಸರಿಯಾದ ರೀತಿಯಲ್ಲಿ ಯಾವ ಸೇವೆಗೆ ಯಾವ ಸಂಖ್ಯೆಗೆ ಕರೆ ಮಾಡುವುದು ಜೊತೆಗೆ ಸಹಾಯ ಬರುವವರೆಗೆ ವ್ಯಕ್ತಿಯನ್ನು ಶಾಂತವಾಗಿ ಇಡುವುದು ಹೇಗೆ ಎಂದು ಅವರು ಪ್ರದರ್ಶಿಸಿದರು.
ತಾಂತ್ರಿಕ ಕೌಶಲ್ಯಗಳ ಜೊತೆಗೆ ತುರ್ತು ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಮಾನಸಿಕ ಸ್ಥಿತಿಯನ್ನು ಚಂಚಲತೆಗೆ ಒಳಗಾಗದೆ ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ರತಿಯೊಬ್ಬರು ಈ ಅಮೂಲ್ಯ ಕೌಶಲ್ಯಗಳನ್ನು ಕಲಿಯಲು ಮುಂದಾಗಬೇಕೆಂದು ಅವರು ವಿನಂತಿಸಿದರು.
Read also : ದಾವಣಗೆರೆ|ರಕ್ತದಾನ ಶಿಬಿರದ ಉದ್ಘಾಟನೆ
ಸಹಾಯಕ ಪ್ರಾಧ್ಯಾಪಕರಾದ ಸೂರ್ಯಪ್ರಸಾದ ಎಂ ಬಿ, ಡಾ. ರಣಧೀರ್, ಅನ್ವರ್ ಅಹಮದ್ ಬೆಟಗೇರಿ , ಡಾ ಗುರುರಾಜ್ ಕೆ ಉಪಸ್ಥಿತರಿದ್ದರು.
ಕು.ಇಂದ್ರಮ್ಮ ಮತ್ತು ಶ್ವೇತ ಪ್ರಾರ್ಥಿಸಿದರು. ಕು. ಚಂದನ ಎಂ ವಂದಿಸಿದರು, ಕು. ಛಾಯಾ ಎಂ ನಿರೂಪಿಸಿದರು.