ದಾವಣಗೆರೆ : ಇ-ಸ್ವತ್ತು ಮಾಡಿಕೊಡಲು ಲಂಚ ಸ್ವೀಕಾರ ಮಾಡುತ್ತಿದ್ದ ಇಬ್ಬರು ಪಾಲಿಕೆ ನೌಕರರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಹಾನಗರ ಪಾಲಿಕೆಯ ವಲಯ ಕಚೇರಿ -1 ರ ಕಂದಾಯಾಧಿಕಾರಿ ಅನ್ನಪೂರ್ಣ ಮತ್ತು ಎಸ್ಡಿಎ ಲಕ್ಕಪ್ಪ ಬಲೆಗೆ ಬಿದ್ದ ಅಧಿಕಾರಿಗಳು.
ಬೇತೂರು ಇಮಾಂ ನಗರದ ಚಂದ್ರಶೇಖರ ಎಂಬುವವರು ತಮ್ಮ ಮನೆಯ ಖಾಲಿ ಜಾಗದ ತಿದ್ದು ಪಡಿ ಮಾಡಿಕೊಡುವಂತೆ ಮಹಾನಗರ ಪಾಲಿಕೆಯ ವಲಯ ಕಚೇರಿ – 1 ಕ್ಕೆ ಅರ್ಜಿ ಸಲ್ಲಿಸಿದ್ದರು. ಅದರೆ ಜಾಗದ ಅಳತೆ ತಿದ್ದುಪಡಿ ಮತ್ತು ಇ-ಸ್ವತ್ತು ಮಾಡಿಕೊಡಲು ಹಣ ನೀಡುವಂತೆ ಅಧಿಕಾರಿಗಳಿ ಕೇಳಿದ್ದರು. ಅದರೆ ಹಣ ಕೊಡಲು ಇಷ್ಷವಿಲ್ಲದ ಕಾರಣದಿಂದ ಬೇತೂರು ಇಮಾಂ ನಗರದ ಚಂದ್ರಶೇಖರ ಲೋಕಾಯುಕ್ತಕ್ಕೆ ದೂರ ಸಲ್ಲಿಸಿದ್ದರು.
ಅದರಂತೆ ಅಧಿಕಾರಿಗಳು ಗುರುವಾರ ಸಂಜೆ ಚಂದ್ರೇಶೇಖರ ಅವರ ಮನೆಗೆ ಜಾಗದ ಅಳತೆ ಮಾಡಲು ತೆರಳಿದ್ದಾರೆ. ಆ ವೇಳೆ 15 ಸಾವಿರ ಹಣವನ್ನು ಎಸ್‌ಡಿಎ ಲಕ್ಕಪ್ಪ ಅವರಿಗೆ ನೀಡಿದ್ದಾರೆ. ಅದರೆ, 15 ಸಾವಿರ ರೂ ಗೆ ಬದಲಾಗಿ 25 ಸಾವಿರ ನೀಡುವಂತೆ ಕಂದಾಯಾಧಿಕಾರಿ ಅನ್ನಪೂರ್ಣ ಹೇಳಿದ್ದಾರೆ. ಈ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಸದರಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಮುಂದಿನ ವಿಚಾರಣೆ ಕೈಗೊಂಡಿದ್ದಾರೆ. ಶುಕ್ರವಾರ ನ್ಯಾಯಾಂಗಕ್ಕೆ ಒಳಪಡಿಸಲಿದ್ದಾರೆ.
ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪೂರೆ,ಉಪಾಧೀಕ್ಷಕರಾದ ಕಲಾವತಿ,ಪೋಲೀಸ್ ನಿರೀಕ್ಷಕರಾದ ಮಧುಸೂಧನ, ಎಚ್.ಎಸ್.ರಾಷ್ಟ್ರಪತಿ,ಪ್ರಭು ಸೂರಿನ , ಸಿಬ್ಬಂದಿಗಳಾದ ಅಂಜನೇಯ, ಸುಂದರೇಶ್, ಆಶಾ, ಲಿಂಗೇಶ್, ಧನರಾಜ, ಮಂಜುನಾಥ ಸೇರಿದಂತೆ ಇತರೆ ಸಿಬ್ಬಂದಿಗಳು ಭಾಗವಹಿಸಿದ್ದರು.