ಹುಚ್ಚು ನಾಯಿ ಕಡಿದು ಮನ್ಮಷ್ಯರಿಗೆ ಬರುವ ರೇಬಿಸ್ ಕಾಯಿಲೆ ವೈದ್ಯಕೀಯ ಜಗತ್ತಿಗೆ ಒಂದು ದೊಡ್ಡ ಸವಾಲು. ನಾಯಿ ಕಡಿದು, ಲಸಿಕೆ ಹಾಕಿಸಿಕೊಳ್ಳುದ ವ್ಯಕ್ತಿಯಲ್ಲಿ ಒಮ್ಮೆ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಲ್ಲಿ ಸಾವು ನೂರಕ್ಕೆ ನೂರರಷ್ಟು ಖಚಿತ. ಆದ್ದರಿಂದಲೇ ನಾಯಿ ಕಡಿತ ನಮ್ಮ ನಿಜ ಜೀವನದ ವಿಚಾರಗಳಲ್ಲಿ ಹೆಚ್ಚಿಗೆ ಪ್ರಾಯುಖ್ಯತೆ ಪಡೆಯುತ್ತದೆ.
ಭಾರತ ಸರ್ಕಾರದ ICMR ಹೊರಡಿಸಿದ ಅಂಕಿ -ಅಂಶಗಳ ಪ್ರಕಾರ 2024ರಲ್ಲಿ ಸುಮಾರು 5726 ವ್ಯಕ್ತಿಗಳು ದೇಶದಲ್ಲಿ ರೇಬಿಸ್ ಕಾಯಿಲೆ ಬಂದು ಸಾವನ್ನಪ್ಪಿದಾರೆ. ಸುಮಾರು 37 ಲಕ್ಷ ಜನರು 2024ರಲ್ಲಿ ದೇಶದಲ್ಲಿ ನಾಯಿಯಿಂದ ಕಡಿಸಿಕೊಂಡಿದ್ದಾರೆ. ಪ್ರಪಂಚದ ಸುಮಾರು ಮೂರರ ಒಂದರಷ್ಷು ಜನರೇಬಿಸ್ ಕಾಯಿಲೆ ಯಿಂದ ಭಾರತ ದೇಶದಲ್ಲಿ ಮರಣವನ್ನು ಅಪ್ಪುತ್ತಾರೆ.
ರೇಬಿಸ್ ಒಂದು ಸಾಮಾನ್ಯ ವೈರಾಣುವಿನಿಂದ ಬರತಕ್ಕ ಕಾಯಿಲೆ. ಸಾಮಾನ್ಯವಾಗಿ ನಾಯಿ, ಬೆಕ್ಕು ಕಡಿತ ಮತ್ತು ಕಾಡು ಪ್ರಾಣಿಗಳ ಕಡಿತದಿಂದ ಈ ಕಾಯಿಲೆ ಬರುತ್ತದೆ. ಪ್ರಾಣಿ ಕಡಿದು ವಾರ, ತಿಂಗಳು ಕಳೆದ ನಂತರ ಕಾಯಿಲೆ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ತಲೆಗೆ, ಕುತ್ತಿಗೆಗೆ ನಾಯಿ ಕಡಿದಿದ್ದರೆ, ಬಹಳ ಆಳವಾಗಿ ಕಡಿದಿದ್ದರೆ, ಅಥವಾ ಹುಚ್ಚುನಾಯಿ ಕಡಿದರೆ ರೋಗ ಲಕ್ಷಣ ಕಾಣಿಸಿಕೊಳ್ಳುವುದು ಸಹಜ.
ರೋಗ ಲಕ್ಷಣಗಳು : ಸುಮಾರು ನಾಯಿ ಕಡಿದ 1-3 ತಿಂಗಳ ನಂತರ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಜ್ವರ, ತಲೆನೋವು, ಸುಸ್ತಾ ಗುವುದು ಕಾಣಿಸಿಕೊಳ್ಳುವುದು. ಕ್ರಮೇಣವಾಗಿ ವ್ಯಕ್ತಿಯು ತನ್ನ ನಡವಳಿಕೆಯಲ್ಲಿ ಬದಲಾಗುತ್ತಾನೆ.
ನೀರು ಕಂಡರೆ ಹೆದರುವುದು (Hydrophobia).ಗಾಳಿ ಬಂದರೂ ಹೆದರುವುದು, ರೀತಿಯಲ್ಲಿ ಆರಂಭವಾಗಿ ಮಾಂಸ ಖಂಡಗಳಲ್ಲಿ ಶಕ್ತಿ ಕಡಿಮೆಯಾಗುವುದು, ಕ್ರಮೇಣ ಎಚ್ಚರ ತಪ್ಪುವುದು, ತದನಂತರ ಸಾವನ್ನಪ್ಪುವುದು. ಈ ಎಲ್ಲ ಹಂತಗಳು ಒಂದರಿಂದ ಎರಡು ವಾರಗಳಲ್ಲಿ ಕಾಣಿಸಿಕೊಳ್ಳುತ್ತವೆ.
ನಾಯಿ ಕಡಿದಾಗ ನೀಡತಕ್ಕ ಲಸಿಕೆಗಳ ವಿವರ
ನಾಯಿ ಕಡಿದು ಕೆಲವು ವಾರದಿಂದ ತಿಂಗಳಲ್ಲಿ ಕಾಯಿಲೆಯ ಲಕ್ಷಣಗಳು ಕಾಣಸಿಕೊಳ್ಳುತ್ತದೆ. ಆದಾಗ್ಯೂ ಆದಷ್ಟು ಶೀಘ್ರವಾಗಿ ರೇಬಿಸ್ ಕಾಯಿಲೆಯನ್ನು ತಡೆಗಟ್ಟುವ ಲಸಿಕೆ ನೀಡುವುದು ಸೂಕ್ತ. ನಾಯಿ ಕಡಿದದಿನ ದಿಂದಲೇ ಒಂದರಿಂದ ಐದು ಬಾರಿ ರೇಬಿಸ್ ಲಸಿಕೆಯನ್ನು ನೀಡತಕ್ಕದ್ದು.(Rabipur/ Rabivax/Verorab ಇತ್ಯಾದಿ)ಇತರ ರೋಗ ನಿರೋಧಕ ಲಸಿಕೆಯಂತೆ ಇದನ್ನು ಭುಜದಲ್ಲಿ ನೀಡಲಾಗುವುದು.
ಲಸಿಕೆ ಪಡೆಯುವ ವಿಧಾನ: ಉದಾಹರಣೆ ನಾಯಿಯಿಂದ ಜನವರಿ 1 ರಂದು ಕಡಿಸಿಕೊಂಡಿದ್ದರೆ
1ನೇ ಡೋಸ್,0ನೇ ದಿನ (ಕಚ್ಚಿದ ದಿನದಿಂದ),01.01.2026
2ನೇ ಡೋಸ್,3ನೇ ದಿನ, 04.01.2026
3ನೇ ಡೋಸ್,7ನೇ ದಿನ, 08.01.2026
4ನೇ ಡೋಸ್,14ನೇ ದಿನ,15.01.2026
5ನೇ ಡೋಸ್,28ನೇ ದಿನ,29.01.2026
ಜನವರಿ ತಿಂಗಳ ಅಂತ್ಯದಲ್ಲಿ ಎಲ್ಲಾ ಐದು ಲಸಿಕೆಗಳು ಪೂರ್ಣ ಗೊಳ್ಳುತ್ತದೆ. ಈ ರೀತಿ ಲಸಿಕೆ ಪಡೆದಲ್ಲಿ ರೇಬೀಸ್ ಖಾಯಿಲೆಯನ್ನು 100ಕ್ಕೆ 100ರಷ್ಟು ತಡೆಗಟ್ಟಬಹುದು. ಈ ಲಸಿಕೆಯು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ, ಮಕ್ಕಳ ತಜ್ಞರ ಬಳಿ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಲಭ್ಯವಿರುತ್ತದೆ.
ತೀವ್ರ ಪ್ರಮಾಣದ ಗಾಯಗಳಾಗಿದ್ದರೆ (Grade III,IV and Bite),ತಲೆಗೆ ಹಾಗೂ ಕುತ್ತಿಗೆಗೆ ಕಚ್ಚಿದ್ದರೆ, ನಿಜವಾಗಿಯೂ ಹುಚ್ಚು ನಾಯಿಯೇ ಕಚ್ಚಿದ್ದರೆ ಈ ಲಸಿಕೆಯ ಜೊತೆಯಲ್ಲಿ ರೇಬೀಸ್ ರೋಗ ನಿರೋಧಕ ಇಮ್ಯುನೋಗ್ಲೊಬಲಿನ್ ಅನ್ನು ಕೂಡ ಕೊಡಬೇಕಾಗುತ್ತದೆ (Rabies Immunoglobulin) ಈ ಔಷಧಿಯನ್ನು ಕಡಿದ ಗಾಯದ ಸುತ್ತಲು ಕೊಡಲಾಗುತ್ತದೆ. ಸದ್ಯಕ್ಕೆ ಇದನ್ನು ಹಣ ಪಾವತಿ ಮಾಡಿ ತೆಗೆದು ಕೊಳ್ಳಬೇಕಾಗುತ್ತದೆ.
Read also : ಜಿಲ್ಲೆಯಲ್ಲಿ ಆಡಳಿತ ಯಂತ್ರ ಸತ್ತು ಹೋಗಿದೆ : ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಅಪಾದನೆ
ಒಂದು ವಿಷಯ ನೆನಪಿಸಿಕೊಳ್ಳಬೇಕೆಂದರೆ ಎಷ್ಟೇ ಕಚ್ಚಿದ್ದರೂ, ಈ ಲಸಿಕೆಯನ್ನು ತಪ್ಪದೇ ಪಡೆಯತಕ್ಕದ್ದು. ನಮ್ಮ ಗುರುಗಳು ಕಡೆಗೆ ಕಳ್ಳತನ ಮಾಡಿಯಾದರೂ ಹಣ ತಂದು ತಮ್ಮ ಮಕ್ಕಳಿಗೆ, ನಾಯಿ ಕಡಿದವರಿಗೆ ಈ ಚಿಕಿತ್ಸೆ ನೀಡಿ ಸತಕ್ಕದ್ದು ಎಂದು ಹೇಳುತ್ತಿದ್ದರು. ಏನಾದರೂ ರೇಬೀಸ್ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಲ್ಲಿ, ಆ ವ್ಯಕ್ತಿಯನ್ನು ಯಾರಿಂದಲೂ ಕಾಪಾಡಲು ಸಾಧ್ಯವಾಗುವುದಿಲ್ಲ.
ಪ್ರಾಣಿ ಪ್ರಿಯರಲ್ಲಿ ಕಳಕಳಿಯ ಪ್ರಾರ್ಥನೆ
ಇತ್ತೀಚಿನ ದಿನಗಳಲ್ಲಿ ನಾಯಿ ಹಾಗೂ ಸಾಕು ಪ್ರಾಣಿ ಪ್ರಿಯರು ಹೆಚ್ಚಾಗುತ್ತಿದ್ದಾರೆ. ಆದರೆ ಅವರ ಸಾಕುಪ್ರಾಣಿಗಳನ್ನು ಮನೆಯಲ್ಲಿಯೇ ಇಟ್ಟು ಕಾಪಾಡುವುದು ಒಳ್ಳೆಯದು ಹಾಗೂ ವೆಟರನರಿ ವೈದ್ಯರ ಸಲಹೆ ಪಡೆದು ಅವುಗಳಿಗೆ ಲಸಿಕೆ ಹಾಕಿಸುವುದು ಸೂಕ್ತ.
ಯಾವ ಕಾರಣಕ್ಕೂ ದಾರಿಯಲ್ಲಿ, ಖಾಲಿ ಜಾಗಗಳಲ್ಲಿ ಒಡಾಡುವ ನಾಯಿಗಳಿಗೆ ಆಹಾರ ನೀಡಿ ಸಾಕುವುದನ್ನು ಬಿಡಿ. ಇಷ್ಟವಿದ್ದರೆ ಮನೆಯಲ್ಲಿಯೇ ನಾಯಿ ಹಾಗೂ ಸಾಕು ಪ್ರಾಣಿಗಳನ್ನು ಇಟ್ಟು ಜೋಪಾನ ಮಾಡಿ. ಈ ಸಂಘಟನೆಯವರು ತೀವ್ರವಾಗಿ ನಾಯಿಗಳನ್ನು ದೂರ ಮಾಡುವ ಎಲ್ಲಾ ಕ್ರಮಗಳನ್ನು ವಿರೋಧಿಸುತ್ತಾರೆ. ಅವರಿಗೆ ರೇಬೀಸ್ ಕಾಯಿಲೆ ಹಾಗೂ ತಮ್ಮ ಮಕ್ಕಳ ಅರಿವಿರಲಿ.
ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಸಮಾಜದ ಜವಾಬ್ದಾರಿ
ದೇಶದ ಸರ್ವೋಚ್ಚ ಸುಪ್ರೀಂ ಕೋರ್ಟ್ ನ್ಯಾಯಾಲಯವು ರಾಜ್ಯ ಸರ್ಕಾರಗಳಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ನಾಯಿಗಳ ಮೇಲೆ ಕ್ರಮ ತೆಗೆದುಕೊಂಡು ಅವುಗಳನ್ನು ಊರಿನಿಂದ ದೂರ ಸಾಗಿಸಿ, ಬೇರೆ ಜಾಗಗಳಲ್ಲಿ ಇಟ್ಟು ನೀರು, ಆಹಾರ ನೀಡಿ ಎಂದು ತಿಳಿಸಿದೆ.ಯಾವ ಪ್ರಾಣಿಗಳನ್ನು ನಿರ್ದಾಕ್ಷಣ್ಯವಾಗಿ ಸಾಯಿಸುವದು ಕಾನೂನು ಬಾಹಿರ. ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನೀಡಿ ಊರಿನಿಂದ ದೂರವಿಡಬೇಕಾದ್ದು ಸಂಬಂಧಪಟ್ಟ ಆರೋಗ್ಯ ಅಧಿಕಾರಿಗಳ ಹಾಗೂ ಸಮಾಜದ ಜವಾಬ್ದಾರಿ.
ಈ ದಿಸೆಯಲ್ಲಿ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್ ಮತ್ತು ಲೋಕಸಭಾ ಸದಸ್ಯರಾದ ಡಾ: ಪ್ರಭಾ ಮಲ್ಲಿಕಾರ್ಜುನ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಸರಿಯಷ್ಟೇ ಆದರೆ, ಮಹಾನಗರ ಪಾಲಿಕೆಯ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ದಾರಿಯಲ್ಲಿ ನಡೆದಾಡುವುದು, ದ್ಚಿಚಕ್ರ ವಾಹನಗಳಲ್ಲಿ ಚಲಿಸುವುದು ಇತ್ತೀಚಿನ ದಿನಗಳಲ್ಲಿ ಕಷ್ಟವಾಗುತ್ತಿದೆ. ರಾತ್ರಿ ವೇಳೆಯಲ್ಲಿ ನಾಯಿಗಳು ಕೂಗಾಡುವುದು ನಾಗರಿಕರಿಗೆ ಸ್ಮಶಾನವನ್ನು ಜ್ಞಾಪಿಸುತ್ತದೆ.
ಶರವೇಗದಲ್ಲಿ ಬೆಳೆಯುತ್ತಿರುವ ದಾವಣಗೆರೆ ನಗರಕ್ಕೆ ನಾಯಿಗಳ ಕಾಟ ಒಂದು ಕಪ್ಪು ಚುಕ್ಕೆಯಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಸಂಬಂಧಪಟ್ಟ ಅಧಿಕಾರಗಳು ಸೂಕ್ತಕ್ರಮ ತೆಗೆದುಕೊಳ್ಳಬೇಕೆಂದು ಕಳಕಳಿಯಿಂದ ದಾವಣಗೆರೆ ನಾಗರೀಕರು ಕೈ ಮುಗಿದು ಕೇಳಿಕೊಳ್ಳುತ್ತೇವೆ. ಇದಕ್ಕೆ ಬೇಕಾದ ಎಲ್ಲಾ ಸಲಹೆ ಹಾಗೂ ಸಹಾಯ ನೀಡಲು ನಾವು ನಿಮ್ಮೊಂದಿಗಿದ್ದೇವೆ.
ಡಾ: ಗುರುಪ್ರಸಾದ.ಜಿ
ನಿರ್ದೇಶಕರು
ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ
ಹಾಗೂ ಸಂಶೋಧನಾ ಕೇಂದ್ರ
ದಾವಣಗೆರೆ
