ಮಲೇಬೆನ್ನೂರು (Davanagere): ಪಟ್ಟಣ ಶ್ರೀ ಹಿಂದೂ ಮಹಾಗಣಪತಿ ವಿಸರ್ಜನೆಯು ಸೆ. 21-09-2024 ರಂದು ಬೆಳಿಗ್ಗೆ 10-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಮಲೇಬೆನ್ನೂರು ಪಟ್ಟಣದ ಶಿವಮೊಗ್ಗ-ಹರಿಹರ ರಸ್ತೆಯಲ್ಲಿ ನಡೆಯಲಿದ್ದು, ಈ ನಿಟ್ಟಿನಲ್ಲಿ ವಾಹನ ಸಂಚಾರ ಮಾರ್ಗಗಳಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. (ದಿನಾಂಕ:-21-09-2024 ರಂದು ಬೆಳಿಗ್ಗೆ 10-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ)
ಮಾರ್ಗ ಬದಲಾವಣೆ :- ಹೊನ್ನಾಳಿಯಿಂದ ಹರಿಹರಕ್ಕೆ ಹೋಗುವ ವಾಹನಗಳು ಕೊಮಾರನಹಳ್ಳಿ ಚಾನಲ್ ಮೂಲಕ, ಗುಡ್ಡದ ಬೇವಿನಹಳ್ಳಿ ಗ್ರಾಮ- ಜಿಗಳಿ – ಕುಂಬಳೂರು ಮಾರ್ಗವಾಗಿ ಹರಿಹರಕ್ಕೆ ಹೋಗುವುದು.
Read also : Davanagere | ಸತೀಶ್ ಪೂಜಾರಿ ಬಂಧಿಸಲು ಆಗ್ರಹಿಸಿ ಎಸ್ ಡಿ ಪಿ ಐಯಿಂದ ಮನವಿ
ಮಾರ್ಗ ಬದಲಾವಣೆ :- ಹರಿಹರದಿಂದ ಹೊನ್ನಾಳಿಗೆ ಹೋಗುವ ವಾಹನಗಳು ಕುಂಬಳೂರು ಗ್ರಾಮದ ಮೂಲಕ ನಿಟ್ಟೂರು – ಹರಳಹಳ್ಳಿ ಹಾಲಿವಾಣ ಕೊಮಾರನಹಳ್ಳಿ ಕೆರೆ ಏರಿಯ ಮೂಲಕ ಹೊನ್ನಾಳಿ ಕಡೆಗೆ ಹೋಗಲು ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.