ಹರಿಹರ (Harihara) : ನಾವು ಕಷ್ಟಪಟ್ಟು ಮುಂದೆ ಬಂದವರು. ಯಾರು ಶ್ರೀಮಂತರಾಗಿ ನಾವು ಮುಂದೆ ಬಂದಿಲ್ಲ. ಆದ್ದರಿಂದ ನಾವು ಸಂಘಟಿತ ರಾದರೆ ಅವರು ನಮ್ಮ ಹತ್ತಿರ ಬರುತ್ತಾರೆ. ನಾವು ಜಾಗೃತರಾಗಬೇಕು. ನಮ್ಮ ನಡೆ ನ್ಯಾಯಯುತವಾಗಿರಲಿ ಮತ್ತು ಹೋರಾಟಗಳು ನಿರಂತರವಾಗಿರಲಿ. ಯುವಕರು ಮುಂದೆ ಬರಬೇಕು. ಸಂಘಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅಹಿಂದ ಜಿಲ್ಲಾಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿಗಳಾದ ಎನ್. ರುದ್ರಮುನಿ ಅವರು ತಿಳಿಸಿದರು.
ಅಹಿಂದ ಹಾಗೂ ಶೋಷಿತ ಸಮುದಾಯಗಳ ವೇದಿಕೆ ಹರಿಹರ ತಾಲ್ಲೂಕು ಘಟಕ ಹಾಗೂ ಜಿಲ್ಲಾ ಹಾಗೂ ಶೋಷಿತ ಸಮುದಾಯಗಳ ವೇದಿಕೆ ಇವರುಗಳ ಸಂಯುಕ್ತಾಶ್ರಯ ದಲ್ಲಿ, ಹರಿಹರದ ಹೈಸ್ಕೂಲ್ ಬಡಾವಣೆಯ ಡಾ. ಅಂಬೇಡ್ಕರ್ ಭವನದಲ್ಲಿ ನಡೆದ ಕಾಂತ ರಾಜ್ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಬಿಡುಗಡೆ ಹಾಗೂ ಅನುಷ್ಠಾನಕ್ಕಾಗಿ ಆಗ್ರಹಿಸಿ ಅಹಿಂದ ಹಾಗೂ ಶೋಷಿತ ವರ್ಗಗಳ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂಘಟನೆಗಳನ್ನು ಯಾರ ಪರವಾಗಿಯೂ ಇಲ್ಲ. ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಬಡವರ ಹಿತಕ್ಕಾಗಿ ಈ ಸಂಘಟನೆ ಅತ್ಯವತ್ಯಶಕವಾಗಿದೆ. ನಮ್ಮ ಹಕ್ಕು, ನಮ್ಮ ಹೋರಾಟ ಎಂದು ಎನ್. ರುದ್ರಮುನಿ ಅವರು ಹೇಳಿದರು.
ನಾವು ಸಭೆಗೆ ಕೆಲವು ಮುಖಂಡರಿಗೆ ಆಹ್ವಾನ ನೀಡಿದ್ದೆವು, ಆದರೆ ಅವರು ಬರಲಿಲ್ಲ. ಕಾರಣ, ನಾನು ಎಂಎಲ್‌ಎ ಆಗುತ್ತೇನೆ, ಮಿನಿಸ್ಟರ್ ಆಗುತ್ತೇನೆ ಎಂಬ ಅವರ ತಪ್ಪು ತಿಳುವಳಿಕೆಯಿಂದ ಅವರು ಬಂದಿಲ್ಲ. ಆದರೆ, ಆ ತಪ್ಪು ತಿಳುವಳಿಕೆ ಇದ್ದರೆ ನಿಮ್ಮ ಮನಸ್ಸಿನಿಂದ ತೆಗೆದುಹಾಕಿ ಎಂದು ಹೇಳಿದರು. ಒಂದಾಗಿ ಹೋಗೋಣ ಸಂಘಟನೆ ಬಲಪಡಿಸೋಣ. ಪ್ರತಿ ಜಿಲ್ಲೆಯಲ್ಲಿ ಅಹಿಂದ ಸಂಘಟನೆಯನ್ನು ಕಟ್ಟೋಣ ಎಂದು ಯುವಕರಿಗೆ ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಮಾತನಾಡಿ, ಈ ಸಂವಿಧಾನವು ಕೈ ತಪ್ಪುವ ಮುಂಚಿತವಾಗಿ ನಾವು ಎಚ್ಚರ ವಹಿಸಬೇಕು. ಕಾಂತರಾಜ ವರದಿ ಜಾರಿಗೆ ತಂದರೆ ಕೆಲವರಿಗೆ ತೊಂದರೆ ಆಗುತ್ತದೆ. ಕಾರಣ ಶೇ. 80% ಇರುವ ಇರುವುದರಲ್ಲಿ, 20 ಭಾಗ ಬೇರ್ಪಡೆ ಯಾಗುತ್ತದೆ ಎಂಬ ತಪ್ಪು ತಿಳುವಳಿಕೆಯಿಂದ ಕೆಲವರು ಕಾಂತರಾಜ ವರದಿಯನ್ನು ವಿರೋಧ ಮಾಡುತ್ತಿ ದ್ದಾರೆ. ಕಾಂತರಾಜ್ ಬಗ್ಗೆ ಯಾರೂ ಓದಿಲ್ಲ, ನೋಡಿಲ್ಲ ಆದರೂ ಕೂಡ ಕೆಲವರು ಇದರ ಬಗ್ಗೆ ವಿನಾಕಾರಣ ಸಿಎಂ ಅವರ ಬಳಿ ಹೋಗಿ ಇದನ್ನು ಜಾರಿಗೆ ತರಕೂಡದು ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ? ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯನವರಿಗೆ ಬಡವರ ಮೇಲೆ ಕಾಳಜಿ ಅನುಕಂಪ ಇದೆ. ಆದರೆ ಅದನ್ನು ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಅದರಿಂದ ಕಾಂತರಾಜ್ ವರದಿಯು ಜಾರಿಗೆ ತರುವಲ್ಲಿ ವಿಳಂಬವಾಗುತ್ತಿದೆ. ನಮ್ಮ ದಾವಣಗೆರೆ ಜಿಲ್ಲೆಯಲ್ಲಿ ಕೆಲವು ಹಿಂದೆ ಹಿಂದುಳಿದ ನಾಯಕರು ಎಂಎಲ್ಎ, ಎಂಎಲ್ಸಿಗಳು ಆಗಿದ್ದರು. ಆದರೆ ಈಗ ಎರಡು ಪಂಗಡಗಳು ಮಾತ್ರ ಎಮ್ಎಲ್ಎ. ಎಂಎಲ್ಸಿಗಳಾಗುತ್ತಿದ್ದಾರೆ ಎಂದರೆ ಇದು ಶೋಚನೀಯ ಸಂಗತಿ ಎಂದು ಮನನೊಂದು ಹೇಳಿಕೊಂಡರು.
ನಾವು ವೋಟು ಕೊಟ್ಟು ಅವರನ್ನು ನಾವು ಉನ್ನತ ಮಟ್ಟಕ್ಕೆ ಕಳಿಸಿದ್ದೇವೆ. ಆದರೆ ಮುಂಬರುವ ಚುನಾವಣೆಗಳಲ್ಲಿ ಎಚ್ಚರವಹಿಸಬೇಕು.
ಅಹಿಂದ ಎಲ್ಲಾ ಜಾತಿಗಳಿಗೆ ನಾವು ನ್ಯಾಯ ಒದಗಿಸಬೇಕು. ಎಲ್ಲಾ ಜಿಲ್ಲಾ, ತಾಲ್ಲೂಕುಗಳಲ್ಲಿ ಸಂಘಟನೆಯಾಗಬೇಕು ಹಾಗೂ ಯುವಕರಿಗೆ ಪ್ರತಿ ವಾರ್ಡ್‌ನಂತೆ ಹತ್ತು ಜನರನ್ನು ಆಯ್ಕೆ ಮಾಡಿ, ಪ್ರೊ. ಬಿ. ಕೃಷ್ಣಪ್ಪ ಸಮುದಾಯ ಭವನದಲ್ಲಿ ಅಹಿಂದ ಬಗ್ಗೆ ತರಬೇತಿ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲ ರಾಮಚಂದ್ರ ಕಲಾಲ್, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ರವಿನಾರಾಯಣ, ನಿವೃತ್ತ ಪ್ರೊ. ಡಾ.ಎ.ಬಿ.ರಾಮಚಂದ್ರಪ್ಪ, ದಾವಣಗೆರೆ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸಿರಾಜ್ ಅಹಮದ್, ಕೃಷ್ಣಮೂರ್ತಿ, ನಗರಸಭೆ ಮಾಜಿ ಸದಸ್ಯ ಬಿ. ರೇವಣಸಿದ್ದಪ್ಪ, ಹೆಚ್.ಕೆ.ಕೊಟ್ರಪ್ಪ, ಹೆಚ್. ಮಲ್ಲೇಶ್, ಡಿಎಸ್ಎಸ್ ಸಂಚಾಲಕ ಪಿ. ಜೆ.ಮಹಾಂತೇಶ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಇಲಿಯಾಸ್ ಅಹ್ಮದ್, ಆಶಿಶ್ ಅಹ್ಮದ್, ಸಿ.ಎನ್. ಹುಲುಗೇಶ್, ಬಿ.ಎನ್. ರಮೇಶ್, ಮಹಮ್ಮದ್ ಫೈರೋಜ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.
ಸ್ವಾಗತವನ್ನು ಆಶಿಫ್ ಅಹಮದ್, ನಿರೂಪಣೆಯನ್ನು ಸಿ.ಎನ್. ಹುಲುಗೇಶ್ ಅವರು ನೆರವೇರಿಸಿದರು. ಜಿ.ಹೆಚ್.ಮರಿಯೋಜಿರಾವ್ ಪ್ರಾಸ್ತವಿಕ ನುಡಿಗಳನ್ನಾಡಿದರು.