ದಾವಣಗೆರೆ (Davanagere): ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಜೂನ್ 16 ರಿಂದ 18 ರವರೆಗೆ ಹಮ್ಮಿಕೊಂಡಿರುವ ಮಾವು, ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಕಾರ್ಯಕ್ರಮದ ಪೋಸ್ಟರ್ ಅನ್ನು ಸಚಿವ ಎಸ್.ಎಸ್ ಮಲ್ಲಿಕಾರ್ಜನ ಅವರು ಜಿಲ್ಲಾ ಪಂಚಾಯತ್ ಆವರಣದಲ್ಲಿ ಶುಕ್ರವಾರ ಪೋಸ್ಟರ್ ಬಿಡುಗಡೆ ಗೊಳಿಸಿದರು.
ದಾವಣಗೆರೆಯ ವಿನೋಬನಗರದ 1ನೇ ಮುಖ್ಯರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆ ಆವರಣದಲ್ಲಿ ತೋಟಗಾರಿಕಾ ಬೆಳೆಗಾಗರರ ಅನುಕೂಲಕ್ಕಾಗಿ ಹಾಗೂ ತೋಟಗಾರಿಕಾ ಬೆಳೆಗಳ ವ್ಯಾಪಾರೋದ್ಯಮ ಉತ್ತೇಜನಕ್ಕಾಗಿ ಮೇಳವನ್ನು ಆಯೋಜಿಸಲಾಗಿದೆ. ಮಾವು, ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟದ ವಿಭಾಗದಲ್ಲಿನ ಕಾರ್ಯಕ್ರಮವನ್ನು ಸರ್ವರೂ ಸದುಪಯೋಗ ಪಡೆಯುವುದರ ಮೂಲಕ ತೋಟಗಾರಿಕಾ ಬೆಳೆಗಳು ಹಾಗೂ ಉತ್ಪನಗಳ ಅಭಿವೃದ್ಧಿಗೆ ಪ್ರೋತ್ಸಾಯಿಸುವಂತೆ ಕರೆಯನ್ನು ನೀಡಿದರು.
Read also : Power outage | ಜೂ. 14 ರಂದು ವಿದ್ಯುತ್ ವ್ಯತ್ಯಯ
