Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಕಳಪೆ ಕಾಮಗಾರಿ ಕಂಡ ಶಾಸಕ ಬಸವಂತಪ್ಪ ಗರಂ
ತಾಜಾ ಸುದ್ದಿ

ಕಳಪೆ ಕಾಮಗಾರಿ ಕಂಡ ಶಾಸಕ ಬಸವಂತಪ್ಪ ಗರಂ

Dinamaana Kannada News
Last updated: July 23, 2024 3:23 am
Dinamaana Kannada News
Share
Mayakonda
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಹೂವಿನಮಡು, ಗಿಡ್ಡೆನಹಳ್ಳಿ ನೂತನ ಅಂಗನವಾಡಿ ಕೇಂದ್ರಗಳ ಕಟ್ಟಡವನ್ನು ಶಾಸಕ ಕೆ.ಎಸ್.ಬಸವಂತಪ್ಪ ಪರಿಶೀಲನೆ ನಡೆಸಿದರು.
SHARE

ದಾವಣಗೆರೆ:  ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಿಸಿ ಎರಡು ತಿಂಗಳು ಕಳೆದಿಲ್ಲ. ಉದ್ಘಾಟನೆ ಪೂರ್ವದಲ್ಕಿ ಕಳಪೆ ಕಾಮಗಾರಿಯಿಂದ ಕಟ್ಟಡಗಳು ಸೊರುತ್ತಿವೆ. ನೀವು ನಿರ್ಮಿಸಿರುವ ಕಟ್ಟಡ ಐದು ವರ್ಷ ಬಾಳಿಕೆ ಬಾರದಂತಾಗಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಹೂವಿನಮಡು, ಕಂದಗಲ್ಲು ಗ್ರಾಪಂ ವ್ಯಾಪ್ತಿಯ ಗಿಡ್ಡೆನಹಳ್ಳಿ ಗ್ರಾಮದಲ್ಲಿ ತಲಾ 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಪೂರ್ವದಲ್ಲಿ ಅಂಗನವಾಡಿ ಕೇಂದ್ರಗಳ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿದರು.

ಬಳಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಿಸಲಾಗಿದೆ. ಅಡುಗೆ ಕೊಠಡಿ, ದಾಸ್ತಾನು ಕೊಠಡಿ ಕಳಪೆಯಾಗಿವೆ. ಸರಿಯಾಗಿ ಪ್ಲಾಸ್ಟಿಂಗ್ ಮಾಡಿಲ್ಲ. ಮಳೆ ನೀರಿನಿಂದ ಸೊರುತ್ತಿವೆ. ಕಿಟಿಕಿಗಳು ಸರಿಯಿಲ್ಲ, ಸುಣ್ಣಬಣ್ಣ ಸರಿಯಾಗಿ ಬಳಿದಿಲ್ಲ, ಕಟ್ಟಡದಿಂದ ನೀರು ತೊಟ್ಟಿಕುತ್ತಿವೆ. ಇಲ್ಲಿ ಕಲಿಯುವ ಮಕ್ಕಳ ಭವಿಷ್ಯದ ಕತೆ ಏನು ಎಂದು ಕಿಡಿಕಾರಿದರು.

ದೂರವಾಣಿ ಮೂಲಕ ಜಿಪಂ ಸಿಇಒ ಸುರೇಶ್ ಇಟ್ನಾಳ್ ಅವರನ್ನು ಸಂಪರ್ಕಿಸಿದ ಶಾಸಕರು, ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಹೊಸದಾಗಿ ನಿರ್ಮಿಸಿರುವ ಅಂಗನವಾಡಿ ಕೇಂದ್ರಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ನಿರ್ಮಿಸಿರುವ ಕಟ್ಟಡಗಳು ಐದು ವರ್ಷ ಬಾಳಿಕೆ ಬರುವುದಿಲ್ಲ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ಸರ್ಕಾರ ಅಂಗನವಾಡಿ ಕೇಂದ್ರಗಳ ಕಟ್ಟಡವಾಗಲಿ ಅಥವಾ ಯಾವುದೇ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಲಿ. ಅದು ನೀವು ತೆರಿಗೆ ಕಟ್ಟಿದ ಹಣದಿಂದ ನಿರ್ಮಿಸಲಾಗುತ್ತದೆ. ನೀವು ಗುಣಮಟ್ಟದ ಕಟ್ಟಡ ನಿರ್ಮಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ಕಳಪೆ ಕಾಮಗಾರಿ ಕಂಡು ಬಂದರೆ ಕೂಡಲೇ ನಮ್ಮ ಗಮನ ತಂದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಿಡಿಪಿಒ ಅಭಿಕುಮಾರ್, ತಾಪಂ ಇಒ ರಾಮ್‍ಭೋವಿ, ಪಿಡಿಒ ವನಿತಾ, ಪಿಎಸ್‍ಐ ಸಂಜೀವ್‍ಕುಮಾರ್, ಜಾಗ ದಾನಿ ಡಾ.ಮಲ್ಲಿಕಾರ್ಜುನ್, ಗ್ರಾಪಂ ಸದಸ್ಯ ಅಂಜಿನಪ್ಪ, ಸುರೇಶ್, ಅಂಜಿನಪ್ಪ ಡಾ.ಪುಷ್ಪ ಮಲ್ಲಿಕಾರ್ಜುನ್, ಇಂದ್ರಮ್ಮ, ಮಾಲಾ ರವಿ, ವಿಜಯ್‍ಕುಮಾರ್ ಸೇರಿದಂತೆ ಇನ್ನಿತರರಿದ್ದರು.

TAGGED:Davangere District.dinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Karnataka Dalit Conflict Committee ಅಂಬೇಡ್ಕರ, ಗಾಂಧೀಜಿಯವರ ಭಾವಚಿತ್ರಗಳಿಗೆ ಅವಮಾನ : ಪ್ರತಿಭಟನೆ
Next Article honnalli ತುಂಗಭದ್ರಾ ನದಿಯಲ್ಲಿನ ಪ್ರವಾಹ ನಿರೀಕ್ಷೆ :  ಸನ್ನದ್ದವಾಗಿರಲು ಡಿಸಿ ಸೂಚನೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Harihara | ಹಿಂದೂ ಮಹಾಗಣಪತಿ ವಿಸರ್ಜನೆ: ಅಂಬೇಡ್ಕರ್ ಭಾವಚಿತ್ರ ಬಳಕೆಗೆ ಡಿಎಸ್‍ಎಸ್ ವಿರೋಧ

ಹರಿಹರ (Davanagere news): ನಗರದಲ್ಲಿ ಭಾನುವಾರ ಹಿಂದೂ ಜಾಗರಣ ವೇದಿಕೆ ಹಾಗೂ ಸಂಘ, ಪರಿವಾರದವರು ಸೇರಿ ನಡೆಸಿದ ಹಿಂದೂ ಮಹಗಣಪತಿ…

By Dinamaana Kannada News

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 47 :  ಸಾಮಾಜಿಕ ಅಪಮೌಲ್ಯದ ಒಂದು ಉದಾಹರಣೆ

Kannada News | Sanduru Stories | Dinamaana.com | 07-06-2024 ಒಂದು ಕಾಲದ ಸುವರ್ಣಯುಗ (Sanduru Stories) ಹೊಸಪೇಟೆಯ…

By Dinamaana Kannada News

Davanagere | ನಮ್ಮ ದೇಶದಲ್ಲಿ ಮಹಿಳೆಯರಿಗೆ ಮೊದಲ ಆದ್ಯತೆ : ಕೇಂದ್ರ ಸಚಿವ ಪ್ರಹ್ಲಾದ ಜೋಷಿ

ದಾವಣಗೆರೆ (Davanagere) :  ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉದ್ಯೋಗ ಸೃಷ್ಟಿಸಿ ಬದುಕು ಕಟ್ಟಿಕೊಡುತ್ತಿರುವ ಶಿಕ್ಷಣ ಸಂಸ್ಥೆಯಾಗಿರುವ ಜಿಎಂಐಟಿ ಪ್ರಸ್ತುತ ಜಿಎಂ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ದಿವ್ಯಾಂಗರನ್ನು ಮುಖ್ಯವಾಹಿನಿಗೆ ತರಲು ಕಾರ್ಯಕ್ರಮ: ಸಕ್ಷಮ ಅಧ್ಯಕ್ಷ ಕೇಶವ್

By Dinamaana Kannada News
Davanagere
ತಾಜಾ ಸುದ್ದಿ

ಆದಾಯವಿಲ್ಲ. ಆಹಾರವಿಲ್ಲ, ಭವಿಷ್ಯವಿಲ್ಲ: ದಾವಣಗೆರೆಯಿಂದ  ಬೈಕ್ ಟ್ಯಾಕ್ಸಿ ರೈಡರ್ ಗಳು  ಸರ್ಕಾರದ ಬೆಂಬಲಕ್ಕಾಗಿ ವಿಧಾನಸೌಧಕ್ಕೆ  

By Dinamaana Kannada News
Davanagere
ತಾಜಾ ಸುದ್ದಿ

ವಸತಿ ಶಾಲೆ : ಖಾಲಿ ಇರುವ 7,8 ಮತ್ತು 9ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

JOB NEWS | ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?