ದಾವಣಗೆರೆ :ಕುಂದವಾಡ ಕೆರೆಯು ದಾವಣಗೆರೆಯ ಹೃದಯ ಭಾಗವಾಗಿದ್ದು, ಅತ್ಯಂತ ಸುಂದರ ಮತ್ತು ಆರೋಗ್ಯಕರ ವಾಯುವಿಹಾರಕ್ಕೆ ಕೆರೆ ತುಂಬಾ ಉಪಯುಕ್ತವಾದ ಸ್ಥಳವಾಗಿದೆ ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ಕುಂದವಾಡ ಕೆರೆಯಲ್ಲಿ ಮಹಾನಗರ ಪಾಲಿಕೆ ಹಾಗೂ ಎಸ್.ಎಸ್.ಕೇರ್ ಟ್ರಸ್ಟ್ ಇವರ ಸಹಯೋಗದಲ್ಲಿ ನಗರದಲ್ಲಿ ಸ್ವಚ್ಚ ಭಾರತ ಅಭಿಯಾನ 2 ಎಸ್.ಬಿ.ಎಮ್ ಅಡಿಯಲ್ಲಿ ಸ್ವಚ್ಚ ಹಾಗೂ ಆರೋಗ್ಯ ಕರ ದಾವಣಗೆರೆಗಾಗಿ ಜನಜಾಗೃತಿ ಮೂಡಿಸಲು ಸ್ವಚ್ಚತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ದಾವಣಗೆರೆ ನಗರವು ಸ್ವಚ್ಚ ಸರ್ವೇಕ್ಷಣೆ-2024 ರಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ, ದೇಶದಲ್ಲಿ 32ನೇ ಸ್ಥಾನ ಪಡೆದಿರುವುದು, ಅತ್ಯಂತ ಹೆಮ್ಮೆಯ ವಿಷಯ. ಕುಂದವಾಡ ಕೆರೆಯ ಗ್ಲಾಸ್‌ಹೌಸ್ ಪ್ರವೇಶ ಧ್ವಾರದ ಬಳಿ ಬಹುದಿನಗಳ ಜನಗಳ ಬೇಡಿಕೆ ಇದ್ದ ಸುಸರ್ಜಿತ ಶೌಚಾಲಯ ನಿರ್ಮಿಸಲು ಶಂಕುಸ್ಥಾಪನೆ ಮಾಡಿ ಮಾತನಾಡಿ, ನಾವು ದೇಶದಲ್ಲಿ ಮೊದಲನೇ ಸ್ಥಾನವನ್ನು ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿ ಸಬೇಕು. ನಮ್ಮ ಎಸ್.ಎಸ್.ಕೇರ್ ಟ್ರಸ್ಟ್ ಮತ್ತು ಬಾಪೂಜಿ ವಿದ್ಯಾಸಂಸ್ಥೆಯ 9 ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಪಾಲಿಕೆ ಜೊತೆಗೂಡಿ ಕುಂದವಾಡ ಕೆರೆಯನ್ನು ಸ್ವಚ್ಚತೆಗೊಳಿಸಿದ್ದಾರೆ. ಎಲ್ಲಾ ಮುಖ್ಯಸ್ಥ ರಿಗೂ ಹಾಗೂ ವಿದ್ಯಾರ್ಥಿಗಳ ಮೆಚ್ಚುವ ಕಾರ್ಯ ಇದಾಗಿದೆ. ಇದೇ ರೀತಿ ಪ್ರತಿ ತಿಂಗಳಿಗೆ ಒಮ್ಮೆ ಸ್ವಚ್ಚತಾ ಕಾರ್ಯಕ್ರಮವನ್ನು ಮುಂದುವರೆಸಿ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಾಲಿಕೆಯ ಆಯುಕ್ತರಾದ ರೇಣುಕಾ ಸ್ವಚ್ಚ ಭಾರತ ಅಭಿಯಾನ 2.0 ರಡಿ ಐ.ಇ.ಸಿ. ಅಡಿಯಲ್ಲಿ ನಾವು ನಗರದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮವನ್ನು ಮಾಡುತ್ತಿದ್ದು, ಅದರಲ್ಲಿ ಎಸ್.ಎಸ್.ಕೇರ್ ಟ್ರಸ್ಟ್ನ ಸಹಯೋಗದಲ್ಲಿ ಸುಮಾರು 4.5 ಕೀಲೋಮೀಟರ್ ಸುತ್ತಳತೆ ಇರುವ ಕುಂದವಾಡ ಕೆರೆಯ ಸ್ವಚ್ಚತೆ ಮಾಡಲಾಗಿದೆ. ಸ್ವಚ್ಚ ದಾವಣಗೆರೆ, ಸ್ವಚ್ಚ ಸುಂದರ ದಾವಣಗೆರೆ ನಿರ್ಮಾಣಕ್ಕಾಗಿ ನಾನು ಪಾಲಿಕೆಯೊಂದಿಗೆ ಕೈಜೋಡಿಸುತ್ತೇನೆ ಎಂದು ಸಹಿ ಸಂಗ್ರಹಣಾ ಅಭಿಯಾನದ ಫಲಕಕ್ಕೆ ಪರಿವರ್ತನಾ ಟ್ರಸ್ಟ್ನ ಮುಖ್ಯಸ್ಥರಾದ ಶಾಂತಭಟ್ ಅವರಿಂದ ಸಹಿ ಪಡೆಯುವ ಮೂಲಕ ಚಾಲನೆ ನೀಡಲಾಯಿತು.
Read also : ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಜೂಜಾಟ ತಡೆಗೆ ಒತ್ತಾಯ
ಪರಿಸರ ಅಭಿಯಂತರಾದ ಬಸವಣ್ಣ ಅವರು ಸ್ವಚ್ಚತಾ ಪ್ರತಿಜ್ಞೆವಿಧಿ ಭೋದಿಸಿದರು. ನಂತರ ಪಾಲಿಕೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದಂತಹ ಪೌರಕಾರ್ಮಿಕರನ್ನು ಮತ್ತು ಆರೋಗ್ಯ ನಿರೀಕ್ಷಕರಿಗೆ ಕೈ ಗಡಿಯಾರ ವಿತರಿಸಿ ಅವರನ್ನು ಸನ್ಮಾನಿಸಿದರು.
ಸ್ವಚ್ಚತೆ ಕಾರ್ಯಕ್ರಮದಲ್ಲಿ ತೊಡಗಿದ 9 ಕಾಲೇಜಿನ ವಿದ್ಯಾರ್ಥಿಗಳಿಗೂ ಉತ್ತಮ ಕಾರ್ಯನಿರ್ವಹಿಸಿದ ಕಾಲೇಜಿಗೆ ಬಹುಮಾನ ವಿತರಿಸಿದರು.
ಕಾರ್ಯಪಾಲಕ ಅಭಿಯಂತರಾದ ಉದಯಕುಮಾರ, ಕಿರಿಯ ಆರೋಗ್ಯ ನಿರೀಕ್ಷಕರು ಮಲ್ಲಿಕಾ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಶ, ಕುಂದವಾಡ ಕೆರೆಯ ವಾಯುವಿಹಾರಿಗಳ ಸಂಘದ ಮುಖ್ಯಸ್ಥರು, ಸದಸ್ಯರು, ಮತ್ತು ಕಾರ್ಯಕ್ರಮ ಆಯೋಜಿಸಿದ ವಾಹಿನಿ ಅಭಿವೃದ್ದಿ ಸಂಸ್ಥೆಯ ಸದಸ್ಯರು, ಮಹಾನಗರ ಪಾಲಿಕೆಯ ಅಧಿಕಾರಿ ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ಹಾಜರಿದ್ದರು.
