ಜಗಳೂರು : ರಾಜ್ಯದಲ್ಲಿ 15 ಜನ ಶಾಸಕರಿದ್ದರು ಇವರಿಗೆ ಸಮುದಾಯದ ಮೇಲೆ ಕಾಳಜಿ ಇಲ್ಲ ಸಮುದಾಯದ ಮೇಲೆ ಹಲ್ಲೆಗಳು ಸಹ ಅತ್ಯಾಚಾರವಾದರೂ ಸಹ 15 ಜನ ತಲೆ ಕೆಡಿಸಿಕೊಳ್ಳುತ್ತಿಲ್ಲ ಜೊತೆಗೆ 5 ಲಕ್ಷಕ್ಕೂ ಅಧಿಕ ನಕಲಿ ಜಾತಿ ಪ್ರಮಾಣ ಪತ್ರವನ್ನು ಅನ್ಯ ಸಮುದಾಯದವರು ಪಡೆದುಕೊಂಡಿದ್ದಾರೆ. ಇದರಿಂದಾಗಿ ನಾಯಕ ಸಮುದಾಯದವರು ಉದ್ಯೋಗ ಶಿಕ್ಷಣ, ಬಡ್ತಿಯಿಂದ ವಂಚಿತರಾಗುತ್ತಿದ್ದಾರೆ ಎಂದು ರಾಜ್ಯ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರು ಹಾಗೂ ಅಧ್ಯಕ್ಷರು ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಮಾರಪ್ಪ ನಾಯಕ ಮಗದಂಪೂರ ಅಸಮಾಧಾನ ವ್ಯಕ್ತಪಡಿಸಿದರು.
ಭಾನುವಾರ ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿ ಮುಂಭಾಗದಲ್ಲಿ ಪರಿಶಿಷ್ಟ ಪಂಗಡದ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಹೋರಾಟ ,ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಲ್ಲಿ ಗೆದ್ದಿರುವ ಶಾಸಕರುಗಳ ಮನೆಯ ಮುಂದೆ ಪ್ರತಿಭಟನೆ ಧರಣಿ ಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇದರ ಬಗ್ಗೆ ಅಧಿವೇಶನದಲ್ಲಿ ಮಾತನಾಡಬೇಕು ಎಂಬ ಆಸಕ್ತಿ ಕೂಡ ಈ ಶಾಸಕರಿಗೆ ಇಲ್ಲದೇ ಇರುವುದರಿಂದ ಎಸ್ಟಿ ಸಮುದಾಯದ ಮೇಲೆ ಒಂದಲ್ಲ ಒಂದು ರೀತಿಯ ದೌರ್ಜನ್ಯಗಳ ನಡೆಯುತ್ತಲೇ ಇವೆ ಎಂದರು.
ರಾಜ್ಯದಲ್ಲಿ 75 ಲಕ್ಷಕ್ಕೂ ಅಧಿಕ ನಾಯಕ ಸಮಾಜದವರಿಂದ ಇವರು 15 ಜನ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಆಯ್ಕೆಯಾದ ಶಾಸಕರು ಸಮುದಾಯದ ಅಭಿವೃದ್ಧಿಯ ಬಗ್ಗೆ ಮರೆತು ಹೋಗಿದ್ದಾರೆ. 2ಕ್ಕೂ ಅಧಿಕ ದಿನಗಳ ಕಾಲ ವಾಲ್ಮೀಕಿ ಶ್ರೀಗಳು ಹೋರಾಟದ ಫಲವಾಗಿ ಮೂರರಷ್ಟಿದ್ದ ಮೀಸಲಾತಿಯನ್ನು ಏಳಕ್ಕೆ ಏರಿಕೆಯಾಗಿದೆ. ಆದರೆ, ರಾಜ್ಯ ಸರ್ಕಾರ ಹಳೇ ಮೀಸಲಾತಿ ಪ್ರಕಾರ ನೇಮಕಾತಿ ಮಾಡಲು ಹೊರಟಿರುವುದು ನಾಯಕ ಸಮುದಾಯಕ್ಕೆ ಮರಣ ಶಾಸನವಾಗಲಿದೆ ಎಂದು ಕಿಡಿಕಾರಿದರು.
5 1/2 ಲಕ್ಷಕ್ಕೂ ಅಧಿಕ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವಂತಹ ಅನ್ಯ ಸಮುದಾಯದವರು ನಾಯಕ ಸಮಾಯನ ಸಮುದಾಯದ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ನಕಲಿ ಜಾತಿ ಪ್ರಮಾಣ ಪತ್ರ ಪಡೆದಂತವರು ವೈದ್ಯಕೀಯ ಇಂಜಿನಿಯರಿಂಗ್ ಸೇರಿದಂತೆ ಇತರೆ ಪದವಿಗಳಲ್ಲಿ ಸ್ಥಾನಗಿತ್ತಿಸಿಕೊಳ್ಳುತ್ತಿದ್ದಾರೆ ಹಾಲಿ ಉದ್ಯೋಗದಲ್ಲಿರುವ ಸಮುದಾಯದವರು ಬಡ್ತಿ ಇಲ್ಲದೆ ಅದೇ ಹುದ್ದೆಯಲ್ಲಿ ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ನಿಗಮದಲ್ಲಿದ್ದ ಸಾವಿರ ಕೋಟಿ ರೂಗಳನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಂಡಿದ್ದು ಕೂಡಲೇ ಸರ್ಕಾರವು 15 ಸಾವಿರ ಕೋಟಿ ರೂಗಳನ್ನು ಮೀಸಲಿಡಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು.
ನಾಯಕ ಸಮಾಜದ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ 15 ಜನ ಶಾಸಕರು ಮುಂಬರುವ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಬನ್ನಿ ಎಂದು ಸೂಚನೆ ನೀಡಿದರು.
ರಾಜ್ಯ ಎಸ್ಸಿ ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರಗಳ ತಡೆ ಸಮಿತಿಯ ರಾಜ್ಯಾಧ್ಯಕ್ಷ ಶ್ರವಣಕುಮಾರ ಡಿ ನಾಯಕ ಮಾತನಾಡಿ, ನಕಲಿ ಜಾತಿ ಪ್ರಮಾಣ ಪತ್ರಗಳ ಹಾವಳಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದಲ್ಲಿ ತಾಂಡವಾಡುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ 5,000ಕ್ಕೂ ಹೆಚ್ಚು ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ. ಇದು ತನಿಖೆ ಯಾಗಬೇಕು ಸರ್ಕಾರ 56 ಸಾವಿರ ಹುದ್ದೆಯನ್ನು ತುಂಬುವ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದ್ದು ಎಸ್ಸಿ ಸಮುದಾಯದ ಒಳ ಮೀಸಲಾತಿಯಂತೆ ಮತ್ತು ಎಸ್ಟಿ ಸಮುದಾಯದ ಮೀಸಲಾತಿಯಂತೆ ನೇಮಕಾತಿಯನ್ನು ಮಾಡಿಕೊಳ್ಳಬೇಕು. ಎಂದು ಒತ್ತಾಯಿಸಿದರು.
Read also : ಒಳ ಮೀಸಲಾತಿ ವರ್ಗೀಕರಣ ಜಾರಿಗೆ ವಿಳಂಬ:ದಾವಣಗೆರೆ ಬಂದ್ಗೆ ಮಾದಿಗ ಸಂಘಟನೆಗಳ ಕರೆ
ಈ ವೇಳೆ ಎಸ್ ಕೆ ಪಿ ಸಿ ಸಿ ಎಸ್ ಟಿ ಪ್ರಧಾನ ಕಾರ್ಯದರ್ಶಿ ಎಂಡಿ ಕೀರ್ತಿ ಕುಮಾರ್ ಮನವಿ ಸ್ವೀಕರಿಸಿ ಮಾತನಾಡಿ, ಸಮಾಜಕ್ಕೆ ಆಗುತ್ತಿರುವಂತ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿರುವುದು ಶ್ಲಾಘನೀಯ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇರುವುದು ಸಮುದಾಯದ ಶಾಸಕರುಗಳು ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದಾಗ ಸಮುದಾಯದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ತುಮಕೂರಿನ ಹಿರಿಯ ಮುಖಂಡ ಮಾರಣ್ಣ ಪಾಳೆಗಾರ, ರಾಜ್ಯ ಉಪಾಧ್ಯಕ್ಷ ನಿಜಲಿಂಗಪ್ಪ, ಯಾದಗಿರಿ ಜಿಲ್ಲಾ ಕಾರ್ಯದರ್ಶಿ ಸಿದ್ದಲಿಂಗಪ್ಪ ನಾಯಕ, ಯುವ ಹೋರಾಟಗಾರರಾದ ನಿಂಗಣ್ಣ ಎಂ ಚಿಗರಹಳ್ಳಿ, ಜಗಳೂರು ತಾಲೂಕಿನ ಅಧ್ಯಕ್ಷ ಬುಳ್ಳೆನಳ್ಳಿ ನಾಗರಾಜ್ , ಉಪಾಧ್ಯಕ್ಷ ಸಿಡಿ ಹನುಮಂತಪ್ಪ, ಕಾರ್ಯದರ್ಶಿ ಸೂರಲಿಂಗಪ್ಪ ಮುಖಂಡರಾದ ಲಕ್ಷ್ಮಣ ಸೇರಿದಂತೆ ಮತ್ತಿತರರು ಹಾಜರಿದ್ದರು.
