ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪಡಿತರ ಚೀಟಿ ವಿತರಣೆ ಕಾರ್ಯ ಸ್ಥಗಿತಗೊಂಡಿದೆ. 3,22,000 ಕುಟುಂಬಗಳು ರೇಷನ್ ಕಾರ್ಡ್‌ಗಾಗಿ ಕಾದು ಕುಳಿತಿವೆ. ಪಡಿತರ ಚೀಟಿ ಇಲ್ಲದ ಕಾರಣ ಈ ಕುಟುಂಬಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಲಭಿಸುತ್ತಿಲ್ಲ. ಸರ್ಕಾರ ಗೃಹಿಣಿಯ ರಿಗೆ ಪ್ರತಿ ತಿಂಗಳು ₹2,000 ಹಣ ನೀಡುತ್ತಿದ್ದು, ಆರ್ಥಿಕ ಹೊರೆ ತಗ್ಗಿಸಲು ಪಡಿತರ ಚೀಟಿ ವಿತರಣೆ ವಿಳಂಬ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ರೇಷನ್ ಕಾರ್ಡ್ ಯಾವಾಗ ವಿತರಿಸಲಾಗುವುದು ಎಂಬ ಸ್ಪಷ್ಟತೆ ಇನ್ನೂ ದೊರೆತಿಲ್ಲ.
Read also : ಭದ್ರಾ ಜಲಾಶಯ | ತುಂಬಲು 8.6 ಅಡಿ ಬಾಕಿ