ದಾವಣಗೆರೆ.ಮಾ.18: ದಿವ್ಯಾಂಗ ಮಕ್ಕಳು ಮತ್ತು ವಿದ್ಯಾರ್ಥಿಗಳ ಡಿಜಿಟಲ್ ಕಲಿಕೆ ಹಾಗೂ ವಿದ್ಯಾಭ್ಯಾಸಕ್ಕಾಗಿ ದಾವಣಗೆರೆ ಮೂಲದ ಬೆಂಗಳೂರಿನ ಐಡಾ ಲವ್ ಲೇಸ್ ಸಾಪ್ಟ್ ವೇರ್ ಕಂಪನಿ ತಯಾರಿಸಿರುವ ಸಾಫ್ಟ್‍ವೇರ್ ವಿಶ್ವಸಂಸ್ಥೆಗೆ ನಾಮನಿರ್ದೇಶನಗೊಂಡಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ನಿರ್ಧೆಶಕ ಡಾ.ಎಲ್ .ರಾಕೇಶ್ ತಿಳಿಸಿದ್ದಾರೆ.
ಕೃತಕ ಬುದ್ಧಿಮತ್ತೆ ತಂತ್ರವಾದ ನೈಸರ್ಗಿಕ ಭಾಷಾ ಸಂಸ್ಕರಣೆ ತಾಂತ್ರಿಕತೆಯನ್ನು ಈ ಸಾಪ್ಟ್ ವೇರ್ ನಲ್ಲಿ ಆಳವಡಿಸಲಾಗಿದ್ದು, ಸ್ವಿಜರ್ ಲ್ಯಾಂಡ್ ನ ಜಿನಿವಾದಲ್ಲಿರುವ ವಿಶ್ವ ಸಂಸ್ಥೆಯ ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್ (ITU) ಈ ಯೋಜನೆಯನ್ನು ಅಂಗೀಕರಿಸಿದೆ.
ಐಟಿಯು ಗೆ ನಾಮನಿರ್ದೇಶನಗೊಂಡಿರುವ ವಿಶ್ವದ 194 ದೇಶಗಳು ಈ ಯೋಜನೆಯ ಉತ್ಪನ್ನವನ್ನು ಆಯ್ಕೆಮಾಡಲು ಇದೇ ಮಾರ್ಚ್ 31 ರ ವರೆಗೂ ಮತ ಚಲಾಯಿಸಲಿವೆ ಎಂದು ಡಾ.ಎಲ್.ರಾಕೇಶ್ ತಿಳಿಸಿದ್ದಾರೆ.
ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಡಾ.ಎಲ್.ರಾಕೇಶ್ ಸದ್ಯದಲ್ಲಿಯೇ ಸ್ವಿಜರ್ಲ್ಯಾಂಡ್ ಗೆ ತೆರಳಲಿದ್ದಾರೆ.
ಯುರೋಪ್, ದುಬೈ ಸೇರಿದಂತೆ ಅಭಿವೃದ್ಧಿಶೀಲ ದೇಶಗಳಲ್ಲಿ ವ್ಯಾಪಾರೋದ್ಯಮ ಹೆಚ್ಚಿಸಲು ದಾವಣಗೆರೆ ಮೂಲದ ಬೆಂಗಳೂರಿನ ಐಡಾ ಲವ್ ಲೇಸ್ ಸಾಪ್ಟ್ ವೇರ್ ಕಂಪನಿ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಇತ್ತೀಚೆಗೆ ದೊಡ್ಡ ಮೊತ್ತದ ನಗದು ಮತ್ತು ಪ್ರಶಂಸನಾ ಪತ್ರಕ್ಕೆ ಪಾತ್ರವಾಗಿತ್ತು. ಡಾ.ಎಲ್.ರಾಕೇಶ್ ಅವರು 2024- 2026 ರ ಅವಧಿಗೆ ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ತಜ್ಞ–ಅಸಿಸ್ಟಿವ್ ಟೆಕ್ನಾಲಜಿ. ಮುಖ್ಯ ಆಕಾಂಕ್ಷಿಯಾಗಿದ್ದಾರೆ.