ದಾವಣಗೆರೆ: ಅಂತಾರಾಷ್ಟ್ರೀಯ ಮಾನದಂಡಗಳನ್ನು ಹೊಂದಿರುವ ಭಾರತದ ಅತಿದೊಡ್ಡ ಫರ್ಟಿಲಿಟಿಚೈನ್‍ಗಳಲ್ಲಿ ಒಂದಾದ ನೋವಾ ಐವಿಎಫ್ ಫರ್ಟಿಲಿಟಿ ದಾವಣಗೆರೆಯಲ್ಲಿ ತೆರೆದಿದೆ.
ಜೀವನಶೈಲಿಯ ಬದಲಾವಣೆಗಳು ಮತ್ತು ಹಾರ್ಮೋನುಗಳ ಅಸಮತೋಲನದಂತಹ ವಿವಿಧ ಕಾರಣಗಳಿಂದಾಗಿ ಹೆಚ್ಚು ದಂಪತಿಗಳು ಗರ್ಭಧರಿಸಲು ಸಮಸ್ಯೆ ಎದುರಿಸುತ್ತಿರುವುದರಿಂದ ಈ ಪ್ರದೇಶದಲ್ಲಿ ಬಂಜೆತನ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಕರ್ನಾಟಕದಲ್ಲಿ ಒಟ್ಟು ಫರ್ಟಿಲಿಟಿ ದರ ಪ್ರತಿ ಮಹಿಳೆಗೆ 2.1 ಮಕ್ಕಳ ರಿಪ್ಲೇಸ್ಮೆಂಟ್ ಲೆವೆಲ್‍ಗಿಂತ ಕಡಿಮೆಯಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ ಸಂತಾನೋತ್ಪತ್ತಿ ದರ 1.6 ರಷ್ಟಿದೆ.
ದಾವಣಗೆರೆ ಮತ್ತು ಶಿವಮೊಗ್ಗದ ನೋವಾ ಐವಿಎಫ್ ಫರ್ಟಿಲಿಟಿ ತಜ್ಞೆ ಡಾ. ಅರ್ಪಿತಾ ದೇಬ್ ಮಾತನಾಡಿ, ಪಿಸಿಓಎಸ್ ಬಂಜೆತನದ ಸಮಸ್ಯೆಗಳಿಗೆ ಕಾರಣವಾಗಬಹುದು. ಪಿಸಿಓಎಸ್, ಋತುಚಕ್ರ ಮತ್ತು ಅಂಡಾಣು ಉತ್ಪತ್ತಿಗೆ ಅಡ್ಡಿಪಡಿಸುವ ಹಾರ್ಮೋನುಗಳ ಅಸಹಜತೆಗಳನ್ನು ಉಂಟುಮಾಡುವ ಹಾರ್ಮೋನುಗಳ ಸ್ಥಿತಿ. ಹೆಚ್ಚಾಗಿ ಪಿಸಿಓಎಸ್ ಇರುವ ಮಹಿಳೆಯರು ಅನಿಯಮಿತ ಋತುಚಕ್ರ ಹೊಂದಿರುತ್ತಾರೆ. ಫರ್ಟಿಲಿಟಿಯ ಮೇಲೆ ಪರಿಣಾಮ ಬೀರುವ ಮತ್ತೊಂದು ಅಂಶವೆಂದರೆ ಗರ್ಭಾಶಯದಲ್ಲಿನ ಅಸಹಜತೆಗಳಿಂದಾಗಿ ಆಗಾಗ್ಗೆ ವೈದ್ಯಕೀಯ ಆರೈಕೆ ಮತ್ತು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ಹೆಚ್ಚಾಗಿ ನಾವು, 25-26 ರ ವಯಸ್ಸಿನ ಮಹಿಳೆಯರು ಪಿಸಿಓಎಸ್ ಸಮಸ್ಯೆಯಿಂದ, ಮತ್ತು 38-39 ರ ನಡುವಿನ ವಯಸ್ಸಿನ ಮಹಿಳೆಯರು ವಯಸ್ಸಿಗೆ ಸಂಬಂಧಿಸಿದ ಬಂಜೆತನದ ಸಮಸ್ಯೆಗಳಿಂದ ಬಳಲುವುದನ್ನು ಗಮನಿಸುತ್ತೇವೆ ಎಂದರು.
ದಾವಣಗೆರೆ ಜನಸಂಖ್ಯೆಯ ಒಂದು ಭಾಗ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಕೀಟನಾಶಕಗಳು ಮತ್ತು ಇತರ ರಾಸಾಯನಿಕಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಅದು ವೀರ್ಯದ ಗುಣಮಟ್ಟದ ಮೇಲೆ ಮತ್ತು ಮಹಿಳೆಯರಲ್ಲಿ ಫರ್ಟಿಲಿಟಿಯ ಮೇಲೂ ಪರಿಣಾಮ ಬೀರಬಹುದು ಎಂದರು.
ದಾವಣಗೆರೆ, ಶಿವಮೊಗ್ಗದ ನೋವಾ ಐವಿಎಫ್ ಫರ್ಟಿಲಿಟಿ ತಜ್ಞ ಡಾ. ದೀಪಕ್ ಶೆಟ್ಟಿ, ಬಂಜೆತನದ ಸಮಸ್ಯೆಯಿಂದ ಬಳಲುವ ಪುರುಷರಲ್ಲಿ ಬಹುಪಾಲು ಜನರು, ವೀರ್ಯದಲ್ಲಿ ವೀರ್ಯಾಣುವಿನ ಕೊರತೆ ಅನುಭವಿಸುತ್ತಾರೆ. ಆಧುನಿಕ ಚಿಕಿತ್ಸಾ ವಿಧಾನಗಳ ಮೂಲಕ ಇದನ್ನು ಗುಣಪಡಿಸಬಹುದು. ಆಹಾರ, ವ್ಯಾಯಾಮ, ಒತ್ತಡಗಳು ನಮ್ಮ ಫರ್ಟಿಲಿಟಿಯ ಆರೋಗ್ಯದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಫರ್ಟಿಲಿಟಿ ತಜ್ಞರೊಂದಿಗೆ ಸಮಯೋಚಿತ ಸಮಾಲೋಚನೆಗಾಗಿ ಬರುವುದು ಮತ್ತು ಮುಂದಿನ ಹಂತಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ ಎಂದರು.
ನೋವಾ ಐವಿಎಫ್ ಫರ್ಟಿಲಿಟಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿದೆ. ದಾವಣಗೆರೆಯಲ್ಲಿರುವ ನೋವಾ ಐವಿಎಫ್ ಫರ್ಟಿಲಿಟಿ, ಸಮಗ್ರ ಫರ್ಟಿಲಿಟಿ ಚಿಕಿತ್ಸಾ ಕೇಂದ್ರವಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಸುಸಜ್ಜಿತ ಪ್ರಯೋಗಾಲಯ ಹೊಂದಿದೆ. ಅಲ್ಲದೆ, ಫರ್ಟಿಲಿಟಿ ಚಿಕಿತ್ಸೆಗಳಲ್ಲಿ ಅಂತರರಾಷ್ಟ್ರೀಯ ಮಾನದಂಡ ಅನುಸರಿಸುತ್ತದೆ.