ದಾವಣಗೆರೆ (Davangere District) : ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ಮನೆಗಳ್ಳತನ ಮಾಡಿ ಜನರ ನಿದ್ದೆಗೆಡಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಪ್ರಕರಣಗಳಿಂದ ಭಯಗೊಂಡಿದ್ದ ಜನರು ಆರೋಪಿ ಬಂಧನದ ಹಿನ್ನಲೆಯಲ್ಲಿ ನಿಟ್ಟುಸಿರು ಬಿಟ್ಟಿದ್ದಾರೆ.
ರಾಮ , ಸಂತೋಷ ಬಂಧಿತ ಆರೋಪಿಗಳು. ಆರೋಪಿತರಿಂದ 08 ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ ಸುಮಾರು 6.20.000/- ರೂ ಮೌಲ್ಯದ ಒಟ್ಟು 80.740 ಗ್ರಾಂ ಚಿನ್ನ ಹಾಗೂ 810 ಗ್ರಾಂ ಬೆಳ್ಳಿ ಆಭರಣಗಳನ್ನು ಅಮಾನತ್ತುಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ರಾಮ ಮತ್ತು ಸಂತೋಷ ಹಾಲಿ ನ್ಯಾಯಾಂಗ ಬಂಧನದಲ್ಲಿದ್ದು, ಉಳಿದ ಆರೋಪಿತರ ಪತ್ತೆಕಾರ್ಯ ಮುಂದುವರೆದಿದೆ.
Read also : Davanagere | ಒಳ ಮೀಸಲಾತಿಗೆ ಆಗ್ರಹಿಸಿ: ಸೆ.12 ರಂದು ತಮಟೆ ಚಳುವಳಿ
ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯಾಮತಿಟೌನ್, ಸುರಹೊನ್ನೆ ಗಂಜೇನಹಳ್ಳಿ, ಚಟ್ನಹಳ್ಳಿ ಗ್ರಾಮಗಳಲ್ಲಿ ಕಳೆದ ಜುಲೈ-ಆಗಸ್ಟ್ ತಿಂಗಳಿನಲ್ಲಿ ಸರಣಿ ಮನೆಗಳ್ಳತನಗಳು ನಡೆದಿದ್ದವು. ಈ ಹಿನ್ನಲೆಯಲ್ಲಿ ಪ್ರಕರಣಗಳ ಪತ್ತೆಗಾಗಿ ಎಸ್ಪಿ ಉಮಾಪ್ರಶಾಂತ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ ಸಂತೋಷ & ಜಿ. ಮಂಜುನಾಥ ಹಾಗೂ ಚನ್ನಗಿರಿ ಡಿವೈಎಸ್ಪಿ ರುದ್ರಪ್ಪ ಉಜ್ಜಿನಕೊಪ್ಪ ಮಾರ್ಗದರ್ಶನದಲ್ಲಿ ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವಿ ಎನ್.ಎಸ್ ನ್ಯಾಮತಿ ಪೊಲೀಸ್ ಠಾಣೆ ನೇತೃತ್ವದಲ್ಲಿ, ಪಿಎಸ್ಐ ಜಯಪ್ಪನಾಯ್ಕ ಬಿ.ಎಲ್. ಮತ್ತು ಸಿಬ್ಬಂದಿ ಉಮೇಶ, ಮಂಜಪ್ಪ ಕೆ, ಮಹೇಶನಾಯ್ಕ, ಆನಂದ, ಪ್ರವೀಣ್ ಕುಮಾರ, ದೇವರಾಜ್ ಡಿ.ಎನ್, ಪ್ರಶಾಂತ ಇ.ಎಸ್ ಇವರ ತಂಡ ರಚನೆ ಮಾಡಿ, ತನಿಖೆ ನಡೆಸಲಾಗಿತ್ತು. ಆರೋಪಿತರ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿತ ರಾಮ ಮೇಲೆ ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು, ಹೊಳಲ್ಕೆರೆ, ಚಿತ್ರದುರ್ಗ ಗ್ರಾಮಾಂತರ ಠಾಣೆ, ಶಿವಮೊಗ್ಗ ಜಿಲ್ಲೆಯ ಆನವಟ್ಟಿ, ಭದ್ರಾವತಿ ಟೌನ್, ದಾವಣಗೆರೆ ಜಿಲ್ಲೆಯ ದಾವಣಗೆರೆ ಗ್ರಾಮಾಂತರ, ಹದಡಿ, ಹರಿಹರ ಗ್ರಾಮಾಂತರ, ಮಲೇಬೆನ್ನುರು, ಮಾಯಕೊಂಡ, ಚನ್ನಗಿರಿ, ಸಂತೇಬೆನ್ನುರು, ಪೊಲೀಸ್ ಠಾಣೆಗಳಲ್ಲಿ ಒಟ್ಟು 25 ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಎಸ್ಪಿ ಮತಿ ಉಮಾ ಪ್ರಶಾಂತ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ, ಎಂ ಸಂತೋಷ ಮಂಜುನಾಥ , ನ್ಯಾಮತಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಪತ್ತೆ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.