ದಾವಣಗೆರೆ : ಬೇಕರಿಯಲ್ಲಿ ಕೆಲಸ ಮಾಡುತ್ತ ಮಾಲೀಕನ ಓಮಿನಿ ವಾಹನ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಮಲೇಬೆನ್ನೂರು ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಕೊಣನೂರು ಗ್ರಾಮದ ರಾಮಚಾರಿ ಬಂಧಿತ ಆರೋಪಿ . ಮಲೇಬೆನ್ನೂರು ವ್ಯಾಪ್ತಿಯ ಕೊಕ್ಕನೂರು ಗ್ರಾಮದಲ್ಲಿ ಆಶೋಕ ಎಂಬುವರ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ರಾಮಚಾರಿ ಓಮಿನಿ ವಾಹನ ಕಳ್ಳತನ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಎಸ್ಪಿ ಜಿ. ಮಂಜುನಾಥ, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ಬಿ.ಎಸ್ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ & ಹಾರುನ್ ಅಖ್ತರ್. ಪಿ.ಎಸ್.ಐ(ಕಾ&ಸು) ಹಾಗೂ ಚಿದಾನಂದಪ್ಪ.ಎಸ್.ಬಿ. ಪಿಎಸ್‌ಐ(ತನಿಖೆ) ಮಲೇಬೆನ್ನೂರು ರವರ ನೇತೃತ್ವದಲ್ಲಿ ಆರೋಪಿಯ ಪತ್ತೆ ಮಾಡಿ ಕಳುವು ಮಾಡಿದ್ದ 1,25,000/- ರೂ ಬೆಲೆಯ ಒಮಿನಿ ವಾಹನ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Read also : ದಾವಣಗೆರೆ | ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಪ್ರಕರಣವನ್ನು ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಮಲೇಬೆನ್ನೂರು ಪೊಲೀಸ್ ಠಾಣೆಯ ಹಾರುನ್ ಅಖ್ತರ್ ಪಿ.ಎಸ್.ಐ (ಕಾ.ಸು), ಚಿದಾನಂದಪ್ಪ, ಪಿ.ಎಸ್.ಐ (ತನಿಖೆ) ಸಿಬ್ಬಂದಿಯವರಾದ ನಾಗೇಂದ್ರಪ್ಪ ಎಸ್.ಎಂ. ಎಎಸ್‌ಐ, ಮಲ್ಲಿಕಾರ್ಜುನ್.ಲಕ್ಷ್ಮಣ , ಫೈರೋಜ್‌ಖಾನ್, ವೆಂಕಟರಮಣ, ಮಹೇಶ್ವರಪ್ಪ, ಶಿವಕುಮಾರ್, ವಿರೇಶಪ್ಪ, ಅನ್ಸರ್ ಅಲಿ, ಹಾಗೂ ಜೀಪ್ ಚಾಲಕರಾದ ರಾಜಪ್ಪ, ಮುರುಳಿಧರ ರವರ ತಂಡವು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್ಪಿ ಉಮಾ ಪ್ರಶಾಂತ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.