ದಾವಣಗೆರೆ: ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲುದ್ದೇಶಿಸಿರುವ ಸಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ)ಯನ್ನು ಮುಂದೂಡಬೇಕೆಂದು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಸಚಿವರು ಒತ್ತಡ ಹಾಕಿದ್ದರೂ ಯಾವುದೇ ಒತ್ತಡಕ್ಕೆ ಮಣಿಯದೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಮೀಕ್ಷೆಯನ್ನು ಸೆ.22ರಿಂದಲೇ ನಡೆಸುವಂತೆ ಆದೇಶಿಸಿರುವುದು ಸ್ವಾಗತಾರ್ಹ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ದಾವಣಗೆರೆ ದಕ್ಷಿಣ ವಲಯದ ಅಧ್ಯಕ್ಷ ಬಿ.ಲಿಂಗರಾಜ್ ತಿಳಿಸಿದ್ದಾರೆ.
ಹಿಂದೆ ನ್ಯಾ.ಕಾಂತರಾಜ್ ಆಯೋಗ ನಡೆಸಿದ ಸಮೀಕ್ಷೆಯ ವರದಿ ಅವೈಜ್ಞಾನಿಕ ಎಂದು ಹುಯಿಲೆಭ್ಬಿಸಿ, ಆ ವರದಿ ಅನುಷ್ಠಾನಗೊಳ್ಳದಂತೆ ತಡೆದ, ಅಹಿಂದ ವರ್ಗದ ಏಳಿಗೆಯನ್ನು ಕಡೆಗಣಿಸುವ ಪ್ರಬಲ ಸಮುದಾಯದ ಸಚಿವರುಗಳೇ ಈಗಲೂ ಸಮೀಕ್ಷೆಯನ್ನು ಮುಂದೂಡುವಂತೆ ಒತ್ತಡ ಹಾಕುತ್ತಿದ್ದಾರೆ. ಆದರೆ, ಸಂವಿಧಾನದ ಆಶಯದಂತೆ ಜನಸಂಖ್ಯೆಗೆ ಅನುಗುಣವಾಗಿ ಸರಕಾರದ ಸೌಲಭ್ಯ ಕಲ್ಪಿಸಲು, ಎಲ್ಲಾ ಸಮುದಾಯಗಳ ಜನರ ಸ್ಥಿತಿಗತಿ ಅವಶ್ಯಕತೆ ಅರಿತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾರ ಒತ್ತಡಕ್ಕೂ ಮಣಿಯದೇ ಸಮೀಕ್ಷೆ ನಡೆಸಲು ಆದೇಶಿಸಿ ದಿಟ್ಟ ನಿರ್ಧಾರ ಪ್ರದರ್ಶಿಸಿರುವುದು ಸ್ವಾಗತಾರ್ಹವಾಗಿದೆ. ಅಹಿಂದ ನಾಯಕ ಸಿದ್ದರಾಮಯ್ಯರ ಬೆನ್ನಿಗೆ ಇಡೀ ಅಹಿಂದ ಸಮುದಾಯ ಇರಲಿದೆ ಎಂದು ಹೇಳಿದರು.
