ದಾವಣಗೆರೆ : ನಗರದ ಯಾವುದಾದರೂ ಪ್ರಮುಖ ವೃತ್ತಕ್ಕೆ ಶ್ರೀ ಮಡಿವಾಳ ಮಾಚಿದೇವ ಹೆಸರಿಡುವಂತೆ ಆಗ್ರಹಿಸಿ ಶ್ರೀ ಮಡಿವಾಳ ಮಾಚಿದೇವ ಅಭಿವೃದ್ಧಿ ಸೇವಾ ಸಮಿತಿ ಆಶ್ರಯದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಿಂದ ಮೌನ ಮೆರವಣೆಗೆ ನಡೆಸಿ ಮನವಿ ಸಲ್ಲಿಸಲಾಯಿತು.
12 ನೇ ಶತಮಾನದ ಶರಣರ ಅಗ್ರಗಣ್ಯ ಬಳಗದಲ್ಲಿ ಶರಣ ಮಡಿವಾಳ ಮಾಚಿದೇವರ ಹೆಸರು ಪ್ರಕಾಶ ಮಾನವಾಗಿ ಕಂಗೊಳಿಸುತ್ತದೆ. ಬಸವಣ್ಣನವರ ವೈಚಾರಿಕ ಪ್ರಜ್ಞೆಗೆ ಮಾರು ಹೋಗಿ ಕಾಯಕ ಸಿದ್ಧಾಂತದ ಮೌಲ್ಯವನ್ನು ಹೆಚ್ಚಿಸಿದ ಶರಣ ಮಡಿವಾಳ ಮಾಚಿದೇವರು ಶರಣರ ಬಟ್ಟೆಗಳನ್ನು ಮಡಿ ಮಾಡುವ ಮೂಲಕ ಸಮಾಜದ ಒಟ್ಟು ಮೈಲಿಗೆಯನ್ನು ತೊಡೆದು ಹಾಕಿದ ದಿಟ್ಟ ವಚನಕಾರ ‘ವೀರಗಣಾಚಾರಿಯಾಗಿ’ ಕಲ್ಯಾಣ ಕ್ರಾಂತಿಯಲ್ಲಿ ಜೀವನವನ್ನೇ ಪಣಕ್ಕಿಟ್ಟು ವಚನ ಸಾಹಿತ್ಯವನ್ನು ಸಂರಕ್ಷಿಸಿದ ಮಾಚಿದೇವರ ಕೊಡುಗೆ ಅನುಪಮ ಹಾಗೂ ಚಿರಸ್ಮರಣೀಯ ಹಾಗಾಗೀ ದಾವಣಗೆರೆ ನಗರದ ಯಾವುದಾದರೂ ಪ್ರಮುಖ ವೃತ್ತಕ್ಕೆ ಶ್ರೀ ಮಡಿವಾಳ ಮಾಚಿದೇವ “ವೃತ್ತ ಎಂದು ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.
Read also : ವಾರದ ಕಥೆ | ಬಹುಮಾನ : ಜಗದೀಶ ಕೆ. ಬಳಿಗೇರ
ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ ಕುಂದವಾಡ, ಅಧ್ಯಕ್ಷ ರಾಮಪ್ಪ, ಲೋಕೇಶಪ್ಪ, ನಿಂಗಪ್ಪ ಎಂ.ಎನ್, ಮಾರುತಿ, ಮಂಜುನಾಥ, ಮಲ್ಲಪ್ಪ, ಹನುಮಂತಪ್ಪ, ಕೆಂಚಪ್ಪ, ಆನಂದಪ್ಪ, ಪ್ರಕಾಶ್, ಅಜ್ಜಯ್ಯ, ದಿವಾಕರ, ದಿಲೀಪ್, ವಾಸು, ಗುಡ್ಡಪ್ಪ, ಕೆಂಚಪ್ಪ ಸೇರಿದಂತೆ ಇತರರು ಇದ್ದರು.