ದಾವಣಗೆರೆ (Davanagere): ಚರಂಡಿಗಳಿಗೆ ಸ್ಲಾಬ್ ಅಳವಡಿಸಬೇಕು, ಚರಂಡಿಯಲ್ಲಿ ತುಂಬಿಕೊಂಡಿರುವ ಹೂಳು ತೆಗೆಸುವ ಮೂಲಕ ಜನರ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ದ ಆಜಾದ್ ನಗರ ಬ್ರಾಂಚ್ ಸಮಿತಿ ಕಾರ್ಯಕರ್ತರು ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಮನವಿ ಸಲ್ಲಿಸಿದರು.
ನಗರದ 12ನೇ ವಾರ್ಡಿನ ಆಜಾದ್ ನಗರದ ಮಾಗನಹಳ್ಳಿ ರಸ್ತೆಯ ಸರ್ಕಾರಿ ಶಾಲೆ ಪಕ್ಕದಲ್ಲೇ ಇರುವ ಒಳಚರಂಡಿ ಮತ್ತು ಚರಂಡಿಯಿಂದ ಸದಾ ರಸ್ತೆಯ ಮೇಲೆ ನೀರು ಉಕ್ಕಿ ಹರಿಯುವುದರಿಂದ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಜನರು, ಶಾಲಾ ಮಕ್ಕಳು ಮತ್ತು ವಾಹನ ಸವಾರರಿಗೆ ನಿತ್ಯ ಕಿರಿಕಿರಿಯಾಗುತ್ತಿದೆ. ಮಳೆ ಬಂದಾಗ ಸಮಸ್ಯೆ ಹೇಳಲು ಸಾಧ್ಯವಿಲ್ಲದಷ್ಟು ವಿಪರೀತ ಎನಿಸುವಷ್ಟು ಭಾಸವಾಗುತ್ತದೆ.
Read Also : Davanagere | ಒಳಮೀಸಲಾತಿ ಜಾರಿಗೆ ವಕೀಲರ ಆಗ್ರಹ
2 ನೇ ಮುಖ್ಯ ರಸ್ತೆಯಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ಚರಂಡಿಗಳಿಗೆ ಸ್ಲಾಬ್ ಗಳನ್ನು ಅಳವಡಿಸದ ಕಾರಣ, ಚರಂಡಿಗಳಲ್ಲಿ ಹೂಳು ತುಂಬಿರುವ ಕಾರಣದಿಂದ ರಸ್ತೆಯಲ್ಲಿ ಕೊಳಚೆ ನೀರು ಹರಿದು ಜನರಿಗೆ ಸಮಸ್ಯೆ ಉಂಟು ಮಾಡುತ್ತಿದೆ, ಮಕ್ಕಳು ಬಿದ್ದಿರುವ ಘಟನೆಗಳು ಕೂಡ ಸಂಭವಿಸಿವೆ. ಎಲ್ಲಿ ಬೇಕೆಂದರಲ್ಲಿ ಕೊಳಚೆ ನೀರು ನಿಂತುಕೊಂಡು ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ನಾಯಿಗಳ ಹಾವಳಿ ಸಹ ಜಾಸ್ತಿಯಾಗಿದೆ. ಈ ಎಲ್ಲ ಸಮಸ್ಯೆಗಳ ಪರಿಹರಿಸಲು ಆಗ್ರಹಿಸಿ ಮನವಿ ನೀಡಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಜಬಿಉಲ್ಲ, ಸಹ ಕಾರ್ಯದರ್ಶಿ ಮೊಹಮ್ಮದ್ ಖುಬೈಬ್ ಆಜಾದ್ ನಗರ ಬ್ರಾಂಚಿನ ಉಪಾಧ್ಯಕ್ಷ ಆದಿಲ್, ಕೋಶಾಧಿಕಾರಿ ಅಲ್ತಾಫ್ ಹುಸೈನ್, ಅಸ್ಲಾಂ ಮತ್ತು ಇತರರು ಉಪಸ್ಥಿತರಿದ್ದರು.