ದಾವಣಗೆರೆ : ಮಾನವನ ಆರೋಗ್ಯ ಹಾಗೂ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಮಾರಕವಾಗಿವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ,ಮಂಜುನಾಥ ಹೇಳಿದರು.
ಸುಯೆಜ್ ಕಂಪನಿಯ ವತಿಯಿಂದ ವಿಶ್ವ ಪ್ರಕೃತಿ ಸಂರಕ್ಷಣಾ ದಿನಾಚರಣೆಯ ಅಂಗವಾಗಿ ಸುಯೇಜ್ ಉದ್ಯೋಗಿಗಳಿಗಾಗಿ ಮೈಕ್ರೋ ಪ್ಷಾಸ್ಟಿಕ್ ದುಷ್ಪರಿಣಾಮಗಳು ಹಾಗೂ ಅದರ ತೊಂದರೆಗಳನ್ನು ಪರಿಹರಿಸುವ ಸಾಧನಗಳ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೈಕ್ರೋ ಪ್ಲಾಸ್ಟಿಕ್‍ನಿಂದ ಮಾನವನ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಆಹಾರ ಹಾಗೂ ಶುದ್ದ ಕುಡಿಯವ ನೀರಿನಲ್ಲಿ ಮೈಕ್ರೋ ಪ್ಲಾಸ್ಟಿಕ್ ಬೆರೆಯುತ್ತಿದೆ. ದಿನನಿತ್ಯದ ಬದುಕಲ್ಲಿ ಉಪಯೋಗಿಸುವ ಮೈಕ್ರೋ ಪ್ಲಾಸ್ಟಿಕ್ ನಿಂದ ತಯಾರಗಿರುವ ವಸ್ತುಗಳನ್ನು ತ್ಯಜಿಸುವ ಪರಿಹಾರಗಳ ಬಗ್ಗೆ ಮಾಹಿತಿ ನೀಡಿದರು.
Read also : ದಾವಣಗೆರೆ ತಾಲ್ಲೂಕಿನ ರಸಗೊಬ್ಬರ ಅಂಗಡಿಗಳಿಗೆ ಎಸಿ.ತಹಶಿಲ್ದಾರ್ ಭೇಟಿ
ಸುಯೆಜ್‍ನ ಜಂಟಿ ವ್ಯವಸ್ಥಾಪಕ ಅಭಿಯಂತರ ಸೋಮಶೇಖರ್ “ಸುಯೆಜ್ ಕಂಪನಿಯು ಪರಿಸರ ಸಂರಕ್ಷಣೆಯ ಕುರಿತು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಸ್ಥಳೀಯ ಮಟ್ಟದಲ್ಲಿ ಹಮ್ಮಿಕೊಳ್ಳುತ್ತಿದ್ದು ವಿಶ್ವ ಪ್ರಕೃತಿ ಸಂರಕ್ಷಣಾ ದಿನಾಚರಣೆಯ ಅಂಗವಾಗಿ ಸುಯೆಜ್ ನ ಉದ್ಯೋಗಿಗಳಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಜಂಟಿ ವ್ಯವಸ್ಥಾಪಕ ಅಭಿಯಂತರ ವಿದ್ಯಾಧರ ಬೆಟಗೇರಿ ಮಾತನಾಡಿ, ಮೈಕ್ರೋ ಪ್ಲಾಸ್ಟಿಕ್‍ನ ಬಳಕೆಯಿಂದ ಮಾನವನ ಬದುಕು ದಿನದಿಂದ ದಿನಕ್ಕೆ ದುಸ್ತರಗೊಳ್ಳುತ್ತಿದೆ ಎಂದರು.
ಸುಯೆಜ್ ಕಂಪನಿಯ ಹಿರಿಯ ಅಧಿಕಾರಿಗಳಾದ ಕಿರಣ್, ನಿಖಿಲ್‍ಮ ಸಿಬ್ಬಂದಿಗಳಾದ ಸೂರಜ್, ರವಿಚಂದ್ರ, ರೇಖಾ, ತಾರಾ, ವೆಂಕಟೇಶ್, ಮನೋಜ್, ಅನಿಲ್, ಲಲಿತೇಶ್, ಸುಮಂತ್,ಶಿವಕುಮಾರ್, ಶ್ರೀಕಾಂತ ಗೌಡ, ಸುಮ, ಸ್ಪೂರ್ತಿ, ಶ್ರೇಯಸ್ ಹಾಗೂ ರಾಜೇಶ್ ಚಾಗಂಟಿ ಮುಂತಾದವರು ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ವಿ.ಕೆ.ಎನ್.ಮೂರ್ತಿ ನೇರವೇರಿಸಿದರು.