ಹರಿಹರ (Harihara ): ನಾವು ಮಾಡಿದ ಆಸ್ತಿಯನ್ನು ಅಪಹರಿಸಲು ಅನೇಕರು ಪ್ರಯತ್ನಿಸಬಹುದು ಆದರೆ ನಾವು ಗಳಿಸಿದ ವಿದ್ಯೆಯನ್ನು ಯಾರೂ ಅಪಹರಿಸಲು ಸಾಧ್ಯವಿಲ್ಲ ಎಂದು ಧಾರವಾಡದ ಅಕ್ಷರ ತಾಯಿ ಲೂಸಿ ಸಾಲ್ಡಾನ ಅಭಿಪ್ರಾಯಪಟ್ಟರು.
ತಾಲೂಕಿನ ದೊಗ್ಗಳ್ಳಿಯ ಪಿ ಎಂ ಶ್ರೀ ಶಾಲೆಯಲ್ಲಿ ನಡೆದ ಕಲಿಕೆಯ ಪರಿಣಾಮಗಳು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು ತಮ್ಮ ಅನುಭವದಲ್ಲಿ ವಿದ್ಯೆಯಿಂದ ಆದ ಉಪಯೋಗದ ಕುರಿತು ಮನವರಿಕೆ ಮಾಡಿದರು.
ಮಕ್ಕಳಿಗೆ ವಿದ್ಯಾದಾನ ನೀಡುವ ಜೊತೆಗೆ ಸರಕಾರಿ ಶಾಲೆಗಳಿಗೆ ಲಕ್ಷಾಂತರ ರೂಪಾಯಿ ದತ್ತಿ ನೀಡುವ ಮೂಲಕ ಧಾರವಾಡ ಜಿಲ್ಲೆಯಲ್ಲಿ ಮನೆ ಮಾತಾಗಿರುವ ಲೂಸಿ ಸಾಲ್ಡಾನ ಅವರು ದೊಗ್ಗಳ್ಳಿ ಶಾಲೆಗೆ ದತ್ತಿ ನೀಡುವ ಯೋಜನೆ ಹೊಂದಿದ್ದು ಹರಿಹರ ತಾಲೂಕಿಗೆ ದತ್ತಿ ಉದ್ಘಾಟಿಸುತ್ತಿದ್ದಾರೆ ಎಂದು ಧಾರವಾಡ ಜಿಲ್ಲೆಯ ಶಿಕ್ಷಕ ಲಕ್ಕಮ್ಮನವರ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ರೋಹನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹರಿಹರ ತಾಲೂಕಿನ ಶಾಲೆಗಳಿಗೆ ಶೌಚಾಲಯ, ಆಟೋಪಕರಣಗಳು , ಪೀಠೋಪಕರಣಗಳು ಸೇರಿದಂತೆ ಅನೇಕ ಸೌಲಭ್ಯ ನೀಡಲು ಸಿದ್ಧವಿರುವುದಾಗಿ ಲಕ್ಕಮ್ಮನವರ್ ತಿಳಿಸಿದರು.
ಮುಖ್ಯೋಪಾಧ್ಯಾಯರಾದ ಹೆಚ್ ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆ ವಹಿಸಿದ್ದರು. ಧಾರವಾಡದ ಸಮಾಜಸೇವಕ ಮಲ್ಲಪ್ಪ, ಶಿಕ್ಷಕರಾದ ಸುಶೀಲಮ್ಮ, ಸಬಿಯಾಪರ್ವಿನ್, ನಾಗರತ್ನಮ್ಮ, ಶರತ್ ಬಾಬು, ಶಿಲ್ಪಾ, ಪುಷ್ಪಾವತಿ , ಅಡುಗೆ ಸಿಬ್ಬಂಧಿಗಳಾದ ಜ್ಯೋತಿ, ನೇತ್ರಾವತಿ, ಮಂಜಮ್ಮ ಆಯಾ ನಾಗಮ್ಮ ಸೇರಿದಂತೆ ಅನೇಕರು ಹಾಜರಿದ್ದರು.
Read also : Davanagere | ಕೆ-ಸೆಟ್-2024 ಪರೀಕ್ಷೆಗೆ ಸಕಲ ಸಿದ್ದತೆ : ಡಿಸಿ