ಅಮ್ಮ ಅಮ್ಮಎನ್ನುವ ಪದವು
ಮನಸ್ಸಿಗೆ ನೀಡುವುದು ಸಂತಸವು
ಅಮ್ಮನದು ನಿರ್ಮಲ ಪ್ರೀತಿ
ಬದುಕಲು ಅದುವೇ ಸ್ಫೂರ್ತಿ
ಮಗುವನ್ನು ಹೊತ್ತುವಳು ನವಮಾಸ
ಅದುವೇ ಅವಳ ಬದುಕಿನ ಸಂತಸ
ಅವಳಿಗದು ಪುನರ್ಜನ್ಮ
ನಮಗದು ಪ್ರಥಮ ಜನ್ಮ
ಅಮ್ಮ ನೀನೊಂದು ಪ್ರಕೃತಿ
ನಿನ್ನಲ್ಲಿ ಇಲ್ಲ ಯಾವುದೇ ವಿಕೃತಿ
ಪ್ರಕೃತಿಯು ಕೆಲವೊಮ್ಮೆ ಮುನಿಯುವುದು
ನಿನ್ನ ಮನ ಮಕ್ಕಳ ತಪ್ಪನ್ನು ಮನ್ನಿಸುವುದು
ತಾಯಿಯ ಪ್ರೀತಿ ಹೋಲಿಕೆಗೆ ನಿಲುಕದ್ದು
ಎಷ್ಟು ಸಿಕ್ಕರೂ ಸಾಕೆನಿಸದ್ದು
ತನ್ನ ಕಷ್ಟಗಳನ್ನು ಮುಚ್ಚಿಟ್ಟು
ನೀಡುವಳು ಪ್ರೀತಿ ಸಾಕಷ್ಟು
ತಾಯಿ ಎನ್ನುವ ಪದವೇ ಸುಂದರ
ಅವಳನ್ನು ಬಣ್ಣಿಸಲು ಸಾಲದು ಪದಗಳ ಹಂದರ
ಅವಳ ಗುಣ ಆದರ್ಶಗಳು ಅಪಾರವಾದವು
ಇದರಿಂದಲೇ ಮಹಾನ್ ವ್ಯಕ್ತಿಗಳ ಜನನವು
ಮಕ್ಕೆಳೆಂದರೆ ಅವಳಿಗೆ ಮಮತೆ
ಮಕ್ಕಳ ಸಂತೋಷವೇ ಅವಳ ಘನತೆ
ಅಮ್ಮ ನಿನಗೆ ಯಾರಿಲ್ಲ ಸಾಟಿ
ನಿನಗೆ ನನ್ನ ನಮನಗಳು ಕೋಟಿ ಕೋಟಿ….
ಸುವಿ (ಸುಚಿತ್ರ)
ದಾವಣಗೆರೆ