ಜಗಳೂರು : ಶಿಕ್ಷಣ, ಆರೋಗ್ಯ ಮತ್ತು ಅನ್ನದಾನದ ಮೂಲಕ ಸಮಾಜೋನ್ನತಿ ಸಾಧಿಸಬಹುದು ಎಂದು ಉಜ್ಜಯಿನಿ ಪೀಠದ ಶ್ರೀಮದ್ ಉಜ್ಜಯಿನಿ ಸದ್ದರ್ಮ ಸಿಂಹಾಸನಾದೀಶ್ವರರಾದ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಗಡಿಮಾಕುಂಟಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರೀಗಳು ಆಗಮಿಸಿ ರಥದ ಒಳಗಡೆ ಹಾಸಿನರಾಗಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮಸ್ಥರು ಹೇಳಿದಂತೆ ಉಜ್ಜಿನಿ ತೇರಿನಲ್ಲಿ ಬಿಟ್ಟರೆ ತಾವು ಗಡಿಮಾಕುಂಟೆ ಗ್ರಾಮದಲ್ಲಿ ರಥದಲ್ಲಿ ಮಾತ್ರ ಆಸಿನರಾಗುತ್ತೇವೆ. ಕಾರಣ ಗಡಿ ಮಾಕುಂಟೆ ಗ್ರಾಮವು ನಮಗೆ ತವರು ಮನೆ ಇದ್ದಂತೆ ಹಾಗಾಗಿ ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳಿಗೂ ಆ ನಾವು ತಪ್ಪದೆ ಭಾಗವಹಿಸಿ ಆಶೀರ್ವಚನ ನೀಡುತ್ತೇವೆ ಎಂದು ನುಡಿದರು.
ಗ್ರಾಮೀಣ ಭಾಗಗಳಲ್ಲಿ ಜಾತ್ರೆ ಮತ್ತು ರಥೋತ್ಸವಗಳನ್ನು ಮಾಡುವುದು ಉದ್ದೇಶ ಪ್ರತಿಯೊಬ್ಬರು ಸಾಮರಸ್ಯ ಮತ್ತು ಹೊಂದಾಣಿಕೆಯಿಂದ ಜೀವನ ನಡೆಸಬೇಕು, ಉಳ್ಳವರು ಇಲ್ಲದವರಿಗೆ ಸಹಾಯ ಮಾಡಬೇಕು ಎಂಬುದು ನಮ್ಮ ಹಿರಿಕರು ಮಾಡಿರುವ ಪದ್ಧತಿಗಳು ಇಂದು ಜೀವಂತವಾಗಿದ್ದು ನಮ್ಮ ಕಣ್ಣ ಮುಂದೆ ಕಾಣುತ್ತಿವೆ ಎಂದರು.
Read also : ವಿವಿಧ ಬೇಡಿಕೆ ಈಡೇರಿಸುವಂತೆ ಶಾಸಕ ಬಸವಂತಪ್ಪಗೆ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮನವಿ
ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಸಹ ನಮ್ಮ ಆಚಾರ ವಿಚಾರ ಕಲೆ ಸಾಹಿತ್ಯ ಸಂಸ್ಕೃತಿ ಒಂದೇ ರೀತಿಯಾಗಿರುತ್ತದೆ ಭಾರತ ದೇಶದ ಸಂಸ್ಕೃತಿಯು ಇತರೆ ದೇಶಗಳಿಗೆ ಮಾದರಿಯಾಗಿದೆ. ಯುವ ಸಮುದಾಯದವರು ಭಾರತದ ಇತಿಹಾಸವನ್ನು ಅರಿತು ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಜರಿದ್ದರು.
ರಥೋತ್ಸವವು ಭಕ್ತಿ, ಸಂಪ್ರದಾಯ ಮತ್ತು ಸಾಮಾಜಿಕ ಏಕತೆಯ ಪ್ರತೀಕವಾಗಿದೆ.ಇದು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಜನರ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬವೂ ಆಗಿದೆ.
ಉಜ್ಜಯಿನಿ ಪೀಠದ ಶ್ರೀಮದ್ ಉಜ್ಜಯಿನಿ ಸದ್ದರ್ಮ ಸಿಂಹಾಸನಾದೀಶ್ವರರಾದ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು
