ಜಗಳೂರು: ಗ್ರಾಮೀಣ ಜನರ ಜೀವನಾಡಿಯಾಗಿರುವಂತಹ ಕೆರೆಗಳು ತುಂಬುವುದರಿಂದ ಅಂತರ್ಜಲ ಅಭಿವೃದ್ಧಿ ಯಾಗುವುದರೊಂದಿಗೆ ಜಲಚರ ಪ್ರಾಣಿಗಳಿಗೂ ಮತ್ತು ಜನಜಾನುವಾರುಗಳಿಗೂ ನೀರು ದೊರೆಯುತ್ತಾದೆ. ಕೆರೆಯನ್ನು ತಮ್ಮ ಮಕ್ಕಳೇ ಎಂದು ರಕ್ಷಿಸಬೇಕು ಎಂದು ಉಜ್ಜಯಿನಿ ಪೀಠದ ಶ್ರೀಮದ್ ಉಜ್ಜಯಿನಿ ಸದ್ದರ್ಮ ಸಿಂಹಾಸನಾದೀಶ್ವರರಾದ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ಗ್ರಾಮಸ್ಥರಿಗೆ ಸಲಹೆ ನೀಡಿದರು.
ಸೋಮವಾರ ತಾಲೂಕಿನ ಮೂಡಲ ಮಾಚಿಕೆರೆ ಗ್ರಾಮದ ಕೆರೆಗೆ ಬಾಗಿನ ಅರ್ಪಿಸಿ ನಂತರ ಆಶೀರ್ವಚನ ನೀಡಿದವರು,
ಜಗಳೂರು ತಾಲೂಕು ಅತಿ ಹಿಂದುಳಿದ ಪ್ರದೇಶವಾಗಿದ್ದು ಕುಡಿಯಲು ನೀರು ಸಹ ದೊರೆಯುತ್ತಿರಲಿಲ್ಲ ಈಗ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯಡಿಕೆರೆಗಳಿಗೆ ನೀರು ಹರಿದು ಬರುತ್ತಿದ್ದು ಕೆಲ ಕೆರೆಗಳು ತುಂಬಿವೆ. ಇದರಿಂದ ಅಂತರ್ಜಲ ವೃದ್ಧಿ ಆಗುತ್ತಿದ್ದು ಪಾಳು ಬಿದ್ದ ಬೋರ್ವೆಲ್ ಗಳಲ್ಲಿಯೂ ಸಹ ನೀರು ಹುಕ್ಕುತ್ತಿವೆ. ನೀರು ಮನುಷ್ಯನಿಗೆ ಅತಿ ಮುಖ್ಯವಾದ ದ್ರವವಾಗಿದ್ದು ಇದನ್ನು , ಹಿತಮಿತವಾಗಿ ಬಳಕೆ ಮಾಡಿಕೊಳ್ಳಬೇಕು.
ಗ್ರಾಮಕ್ಕೊಂದು ಕೆರೆಯನ್ನು ನಿರ್ಮಿಸುವುದರ ಉದ್ದೇಶ ಈ ಭಾಗದ ಜನ ಜಾನುವಾರುಗಳಿಗೆ ನೀರು ದೊರೆಯುವುದರೊಂದಿಗೆ ಅಂತರ್ಜಲ ಅಭಿವೃದ್ಧಿ ಯಾಗಿ ರೈತರ ಬಾಳು ಹಸನಾಗಲಿದೆ ಉಜ್ಜಯಿನಿ ಪೀಠಕ್ಕೂ ಬರದ ನಾಡ ಜಗಳವರೆಗೂ ಅವಿನಾಭಾವ ಸಂಬಂಧವಿದ್ದು ತಾಲೂಕಿನಲ್ಲಿ ಸಾವಿರಾರು ಮಂದಿ ಮಠದ ಭಕ್ತರಿದ್ದು ಅವರ ಕರೆಯ ಮೇರೆಗೆ ತಾಲೂಕಿನಲ್ಲಿ ನಡೆಯುವಂತಹ ಕಾರ್ಯಕ್ರಮಗಳಿಗೆ ಭಾಗವಹಿಸುತ್ತೇವೆ ಎಂದರು.
ಮನುಷ್ಯನಾಗಿ ಹುಟ್ಟಿದ ಮೇಲೆ ನಾವೆಲ್ಲರೂ ಶ್ರಮಜೀವಿಗಳಾಗಿ ಬದುಕಬೇಕು ಶ್ರಮದಲ್ಲಿ ದೊರೆಯುವ ಅಲ್ಪ ಪ್ರಮಾಣವಾದರೂ ದಾನ ಮಾಡುವಂತಹ ಗುಣಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಏಕೆಂದರೆ ಉಳ್ಳವರು ಇಲ್ಲದವರಿಗೆ ದಾನ ಮಾಡಿದರೆ ದೇವರಿಗೆ ಸಮರ್ಪಿಸಿದಂತಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯವು ಮದ್ಯಪಾನ ಧೂಮಪಾನ, ತಂಬಾಕು ಸೇವನೆ ಸೇರಿದಂತೆ ಮೊಬೈಲ್ ಗೆ ದಾಸರಾಗುತ್ತಿದ್ದು ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಈಗಲಾದರೂ ಯುವ ಸಮುದಾಯವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಜೀವನ ಕಷ್ಟಕರವಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ : ಉದ್ಯೋಗ ಮೇಳ|ವಿದ್ಯಾಭ್ಯಾಸದೊಂದಿಗೆ ಕೌಶಲ್ಯತೆಗೂ ಆದ್ಯತೆ ನೀಡಿ:ಡಾ.ಪ್ರಭಾ ಮಲ್ಲಿಕಾರ್ಜುನ್
ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ದಳಪತಿ ವೀರಣ್ಣ, ವಿಎಸ್ಎಸ್ನ ಮಾಜಿ ಅಧ್ಯಕ್ಷರಾದ ಮಂಜುನಾಥ್, ನಿವೃತ್ತ ಮುಖ್ಯೋಪಾಧ್ಯಾಯ ಚನ್ನಬಸಪ್ಪ , ಮುಖಂಡರುಗಳಾದ ತಿಪ್ಪೇಸ್ವಾಮಿ ಬಸವರಾಜ್, ಶರಣಪ್ಪ ,ಜಯಣ್ಣ ಚಂದ್ರಪ್ಪ,, ತಿಪ್ಪೇಸ್ವಾಮಿ ,ಪ್ರಕಾಶ್, ನಿಂಗಪ್ಪ, ಈಶ್ವರಪ್ಪ ,ಬಸವರಾಜಪ್ಪ, ಪ್ರಕಾಶ್ ,ಗಂಗಮ್ಮ ಅಂಗಡಿ, ರತ್ನಮ್ಮ ,ಅನಿತಾ ಗಂಗಾ ,ಸೌಭಾಗ್ಯಮ್ಮ , ಮಹಾಂತೇಶ್, ಮನು ಸೇರಿದಂತೆ ಮತ್ತಿತರರು ಹಾಜರಿದ್ದರು.
ಕೆರೆಗಳಲ್ಲಿ ಒಂದು ಬೊಗಸೆ ನೀರು ದೊರೆಯದಂತಹ ಸ್ಥಿತಿ ತಾಲೂಕಿನಲ್ಲಿ ಈ ಹಿಂದೆ ಇತ್ತು ಈಗ ಕೆರೆಗಳು ತುಂಬಿ ಹರಿದು ಹೋಗುತ್ತಿವೆ ಇದರ ಅರ್ಥ ಭಗವಂತನ ಆಶೀರ್ವಾದವಿದ್ದರೆ ಸಕಲವೂ ದೊರೆಯಲಿದೆ ಎಂಬುದಾಗಿದೆ ಹಾಗಾಗಿ ಗ್ರಾಮಸ್ಥರು ಕೆರೆಗಳನ್ನು ರಕ್ಷಿಸಿ ಉಳಿಸಿ ಬೆಳೆಸುವಂತಹ ಕೆಲಸವನ್ನು ಮಾಡಬೇಕಾಗಿದೆ.
ಉಜ್ಜಯಿನಿ ಪೀಠದ ಶ್ರೀಮದ್ ಉಜ್ಜಯಿನಿ ಸದ್ದರ್ಮಸಿಂಹಾಸನಾದೀಶ್ವರರಾದ ರಾಜ ದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು
