ದಾವಣಗೆರೆ (Davanagere) : ವಕ್ಪ್ ತಿದ್ದುಪಡಿ ಕಾಯ್ದೆನ್ನು ರದ್ದು ಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಜಾಗೃತಿ ವೇದಿಕೆ ನೇತೃತ್ವದಲ್ಲಿ ದೇವರಾಜ ಅರಸ್ ಬಡಾವಣೆಯ ಮಸ್ಜಿದ್ ಬಳಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಅಬ್ದುಲ್ ಘನಿ ತಾಹೀರ ಮಾತನಾಡಿ, ವಕ್ಪ್ ಬಿಲ್ ಅದನ್ನು ಈ ದೇಶದ ಮುಸ್ಲಿಂ ಸಮುದಾಯ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಬಿಲ್ ಸಂಸತ್ತಿನಲ್ಲಿ ಪಾಸ್ ಆಗಿದೆ. ಇದನ್ನು ಒಪ್ಪಲೇಬೇಕು ಎಂದು ಹೇಳಿದ್ದಾರೆ. ಅದರೆ, ಜ್ಞಾನಪಕ ಶಕ್ತಿ ಕಡಿಮೆಯಾಗಿರಬಹುದು. 1992 ರಲ್ಲಿ ವರ್‍ಸಿಫ್ ಕಾಯ್ದೆಯನ್ನು ಪರಿಪೂರ್ಣವಾಗಿ ಜಾರಿ ಮಾಡಿವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದೀರಿ. ಅದರೂ ಸಹ ವಕ್ಪ್ ತಿದ್ದುಪಡಿಗೆ ಏಕೆ ತರಾತುರಿ. ಇಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಅನ್ಯಾಯ ಮಾಡುವ ಹುನ್ನಾರ ಅಡಗಿದೆ. ವಕ್ಪ್ ತಿದ್ದುಪಡಿ ಒತ್ತಾಯ ಪೂರ್ವಕವಾಗಿ ತರುವುದು ಸೂಕ್ತವಲ್ಲ. ಅಲ್ಪಸಂಖ್ಯಾತ ಸಮುದಾಯಗಳಿಗೆ ಆಗಿರುವ ಅನ್ಯಾಯ ಸರಿಪಡಿಸಿ ಎಂದು ಒತ್ತಾಯಿಸಿದರು.
Read also : Crime news | ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಂದೆ
ಕೆ.ಅನೀಫ ಸಾಬ್, ಶಕೀಲ ಅಹಮದ್, ಸಾದತ್ ಆಲಿ, ಗುಬ್ಬಿ ರಹಮತುಲ್ಲಾ, ಮಸೀದಿ ಗುರುಗಳು ಇತರರು ಇದ್ದರು.