ದಾವಣಗೆರೆ (Davanagere) : ಪತ್ನಿ ಸಾವಿನಿಂದ ಮನನೊಂದು ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನು ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವ ಘಟನೆ ಗುರುವಾರ ಸಂಜೆ ಎಸ್‍ಪಿಎಸ್ ನಗರದ 2 ನೇ ಹಂತದಲ್ಲಿ ನಡೆದಿದೆ.
ಉದಯಕುಮಾರ (35) ಹಿಂದೂಶ್ರೀ (6) ಶ್ರೀಜಯ (3.5) ಮೃತಪಟ್ಟ ರ್ದುದೈವಿಗಳು.
6 ತಿಂಗಳ ಹಿಂದೆ ಪತ್ನಿಯೂ ಹೃದಯಘಾತದಿಂದ ಮೃತಪಟ್ಟಿದ್ದರು. ಅದೇ ನೋವಿನಿಂದ ಬಳಲುತ್ತಿದ್ದ ಉದಯಕುಮಾರ ಹಲವು ಬಾರಿ ಸಾವಿಗೆ ಯೋಚಿಸಿದ್ದಾನೆ.ಅದರೆ, ಮಕ್ಕಳನ್ನು ಬಿಟ್ಟು ಹೋದರೆ ಅವರನ್ನು ನೋಡಿಕೊಳ್ಳುವವರು ಯಾರು ಎಂಬ ಉದ್ದೇಶದಿಂದ ತನ್ನ ಮಕ್ಕಳನ್ನು ಕೊಂದು ಕಡೆಗೆ ತಾನು ಸಾವಿಗೆ ಶರಣಾಗಿದ್ದಾನೆ. ಪುಟ್ಟ ಕಂದಮ್ಮಗಳ ಸಾವಿನಿಂದ ಎಲ್ಲರೂ ಕಣ್ಣುಗಳು ಒದ್ದೆಯಾಗಿದ್ದವು.
Read also : Harihara | ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ವಂಚನೆ : ಪೌರಾಯುಕ್ತ, ಕಂದಾಯ ನಿರೀಕ್ಷಕರ ವಿರುದ್ಧ ಪ್ರಕರಣ ದಾಖಲು