ದಾವಣಗೆರೆ : ಗುಂಡಿ ವೃತ್ತದಲ್ಲಿ ಜಗದೀಶ ಎಂಬುವವರನ್ನು ದರೋಡೆ ಮಾಡಿದ್ದ ಐವರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.
ಸೆ, 24 ರಂದು ಜಗದೀಶ ಎಂಬುವವರು ಬೆಳಗಿನ ಜಾವ 1.40 ರ ಸಮಯದಲ್ಲಿ ಗುಂಡಿ ಸರ್ಕಲ್ ಹತ್ತಿರ ಶಾಮನೂರು ರಸ್ತೆಯಲ್ಲಿ ತಮ್ಮೂರಾದ ಜರೆಕಟ್ಟೆ ಗ್ರಾಮಕ್ಕೆಂದು ನಡೆದುಕೊಂಡು ಹೋಗುವ ವೇಳೆ ಯಾರೋ ಅಪರಿಚಿತ ವ್ಯಕ್ತಿಗಳು ಎರಡು ಸ್ಕೂಟಿಗಳಲ್ಲಿ ಬಂದು ಅಡ್ಡಗಟ್ಟಿ ಅವರಿಗೆ ಕೈಕಾಲುಗಳಿಂದ ಹಲ್ಲೆ ಮಾಡಿ ಹತ್ತಿರವಿದ್ದ ಮೊಬೈಲು, 4300/- ರೂ ನಗದು ಹಣ, ಕೊರಳಲ್ಲಿದ್ದ 25 ಗ್ರಾಂ ತೂಕದ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿತರ ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಪರಮೇಶ್ವರ ಹೆಗಡೆ & ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ ಮಾರ್ಗದರ್ಶನದಲ್ಲಿ ಬಡಾವಣೆ ಪೊಲೀಸ್ ಠಾಣೆಯ ಪಿಐ ಎಂ.ಆರ್ ಚೌಬೆ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಕೃತ್ಯದಲ್ಲಿ ಭಾಗಿಯಾಗಿದ್ದ 05 ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಅಭಿರಕ್ಷೆಗೊಳಪಡಿಸಿ ಬಾಲಕರಿಂದ ಒಟ್ಟು 2400/- ನಗದು ಹಣ, ಮೊಬೈಲ್ ಫೋನ್ ಮತ್ತು ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಬಾಲನ್ಯಾಯಮಂಡಳಿ ಮುಂದೆ ಹಾಜರುಪಡಿಸಿದಾಗ ಬಾಲಕರನ್ನು ಸರ್ಕಾರಿ ಬಾಲಕರ ವೀಕ್ಷಣಾಲಯದಲ್ಲಿರಿಸಲು ಆದೇಶ ಮಾಡಿದೆ.
Read also : ದಾವಣಗೆರೆ:ಕೆನರಾ ಬ್ಯಾಂಕ್ ಎಸ್‌ಸಿ/ಎಸ್‌ಟಿ ನೌಕರರಿಂದ ವಾಲ್ಮೀಕಿ ಮಠಕ್ಕೆ ಸೇವೆ
ಪ್ರಕರಣದಲ್ಲಿ ಉಳಿದ ಆರೋಪಿತರು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ.
ಪ್ರಕರಣದಲ್ಲಿ ಬಡಾವಣೆ ಠಾಣೆ ಪಿಐ ಎಂ.ಅರ್.ಚೌಬೆ ನೇತೃತ್ವದಲ್ಲಿ ಅಧಿಕಾರಿಗಳಾದ ಸಿಬ್ಬಂದಿಗಳಾದ ಲತಾ ವಿ ತಾಳೇಕರ್, ಪಿಎಸ್.ಐ, ತಿಪ್ಪೇಸ್ವಾಮಿ ಎಎಸ್.ಐ ಹಾಗು ಸಿಬ್ಬಂದಿಗಳಾದ ದಾಸಪ್ಪರ ಬಸವರಾಜ, ದಿದ್ದಿಗೆ ಬಸವರಾಜ, ದೃವ, ಹರೀಶ ಕೆಬಿ ರವರನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸನೆ ವ್ಯಕ್ತಪಡಿಸಿರುತ್ತಾರೆ.