Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ಮಹಿಳೆಯರ ಸುರಕ್ಷತೆಗಾಗಿ ಇರುವ ಈ ವಿಶೇಷ ಕಾನೂನುಗಳ ಬಗ್ಗೆ ನಿಮಗೇನಾದರೂ ತಿಳಿದಿದೆಯೇ?ಇಲ್ಲಿದೆ ಸಂಪೂರ್ಣ ವಿವರ
ಅಭಿಪ್ರಾಯ

ಮಹಿಳೆಯರ ಸುರಕ್ಷತೆಗಾಗಿ ಇರುವ ಈ ವಿಶೇಷ ಕಾನೂನುಗಳ ಬಗ್ಗೆ ನಿಮಗೇನಾದರೂ ತಿಳಿದಿದೆಯೇ?ಇಲ್ಲಿದೆ ಸಂಪೂರ್ಣ ವಿವರ

ನ್ಯಾ.ಮಹಾವೀರ ಮ. ಕರೆಣ್ಣವರ
Last updated: January 4, 2026 3:36 am
ನ್ಯಾ.ಮಹಾವೀರ ಮ. ಕರೆಣ್ಣವರ
Share
Mahavira M. Karennavara
SHARE
ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಬಲಿಷ್ಠವಾದ ಕಾನೂನು ಚೌಕಟ್ಟು ಹಾಗೂ ಸಮಿತಿಗಳಿವೆ.  
ಇದರ ಸಮಗ್ರ ವಿವರ ಇಲ್ಲಿದೆ:
​1. ಪ್ರಮುಖ ಕಾನೂನುಗಳು ಮತ್ತು ನಿಬಂಧನೆಗಳು
​ ಭಾರತೀಯ ನ್ಯಾಯ ಸಂಹಿತೆ (BNS) – ಈ ಹಿಂದೆ IPC – ಮತ್ತು ಇತರ ವಿಶೇಷ ಕಾಯ್ದೆಗಳಡಿ ಮಹಿಳೆಯರ ರಕ್ಷಣೆಗಾಗಿ ಈ ಕೆಳಗಿನ ಕಾನೂನುಗಳಿವೆ

​ಲೈಂಗಿಕ ಕಿರುಕುಳ ನಿಷೇಧ (BNS ಸೆಕ್ಷನ್ 74, 75, 78): ಲೈಂಗಿಕವಾಗಿ ಕಿರುಕುಳ ನೀಡುವುದು, ಬೆನ್ನಟ್ಟುವುದು (Stalking), ಮತ್ತು ಮಹಿಳೆಯ ಘನತೆಗೆ ಧಕ್ಕೆ ತರುವಂತಹ ಕೃತ್ಯಗಳನ್ನು ಅಪರಾಧ ಎಂದು ಪರಿಗಣಿಸಲಾಗಿದೆ.

ಇಂತಹ ಪ್ರಕರಣಗಳು ನಡೆದಾಗ ಮೊದಲನೇದಾಗಿ ಒಬ್ಬ ಮಹಿಳಾ ಪೊಲೀಸರು ವಿಚಾರಣೆಯನ್ನು ಮಾಡಬೇಕಾಗುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ಮಹಿಳಾ ಪೊಲೀಸ್ ಅಧಿಕಾರಿಯ ಮೂಲಕ ಪ್ರಕರಣವನ್ನು ತನಿಖೆ ನಡೆಸಬೇಕಾಗುತ್ತದೆ.
ಒಂದು ವೇಳೆ ತನಿಕ ಹಂತದಲ್ಲಿ ಮ್ಯಾಜಿಸ್ಟ್ರೇಟರ್ ಮುಂದೆ ಮಾದಿತ ವ್ಯಕ್ತಿ ಹೇಳಿಕೆ ನೀಡಬೇಕು ಎಂದು ಬಯಸಿದರೆ ಸಾಧ್ಯ ವಾದ ಮಟ್ಟಿಗೆ ಹತ್ತಿರದ ಮಹಿಳಾ ಮ್ಯಾಜಿಸ್ಟ್ರೇಟರ್ ಮುಂದೆ ಅವರನ್ನು ಹಾಜರ ಪಡಿಸಬೇಕಾಗುತ್ತದೆ.
ಪ್ರಕರಣದ ವಿಚಾರಣಾ ಹಂತದಲ್ಲಿ ನ್ಯಾಯಾಲಯದಲ್ಲಿ ಸಂತ್ರಸ್ತೆ ಅಥವಾ ಬಾದೀತ ಮಹಿಳೆಗೆ ಉಚಿತ ಕಾನೂನು ನೆರ ವನ್ನು ನೀಡಲಾಗುತ್ತದೆ. ಸಂತ್ರಸ್ತೆ ಸರ್ಕಾರಿ ಅಭಿಯೋಜಕರಲ್ಲದೆ ತನ್ನ ಪರವಾಗಿ ಸ್ವತಹ ಮತ್ತೊಬ್ಬ ವಕೀಲರನ್ನು ಕೂಡ ಅಭಿ ಯೋಜನೆಗೆ ಸಹಕಾರಿಯಾಗುವಂತೆ ನೇಮಕ ಮಾಡಿಕೊಳ್ಳಬಹುದು.
ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿ ಆರೋಪಿತನಿಗೆ ಶಿಕ್ಷೆ ಆಗಲಿ ಅಥವಾ ಆತನು ಸಂಶಯದ ಆಧಾರದ ಮೇಲೆ ಬಿಡುಗಡೆಯಾದರೂ ಕೂಡ ಮಹಿಳೆಗೆ ಸಂತ್ರಸ್ತರ ಪರಿಹಾರ ಯೋಜನೆ ಅಡಿ ಪರಿಹಾರ ಹಣ ಕೊಡಲು ಅವ ಕಾಶವಿದೆ. ಈ ಬಗ್ಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನಿರ್ಣಯ ಮತ್ತು ಸಂತ್ರಸ್ತ ಪರಿಹಾರ ಮೊತ್ತವನ್ನು ನಿಗದಿಪಡಿಸಲಾಗುತ್ತದೆ.
​POSH ಕಾಯ್ದೆ, 2013: ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳವನ್ನು ತಡೆಯಲು ಇರುವ ವಿಶೇಷ ಕಾಯ್ದೆ. ಇದು ಸಂಘಟಿತ ಮತ್ತು ಅಸಂಘಟಿತ ಎರಡೂ ವಲಯಗಳಿಗೆ ಅನ್ವಯಿಸುತ್ತದೆ.
​ಕೌಟುಂಬಿಕ ಹಿಂಸೆ ತಡೆ ಕಾಯ್ದೆ, 2005: ಮನೆಯೊಳಗೆ ನಡೆಯುವ ಲೈಂಗಿಕ ಮತ್ತು ದೈಹಿಕ ದೌರ್ಜನ್ಯದ ವಿರುದ್ಧ ರಕ್ಷಣೆ ನೀಡುತ್ತದೆ.   ಇದರಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಒಬ್ಬ ರಕ್ಷಣಾಧಿಕಾರಿ ಇರುತ್ತಾರೆ ಅವರ ಮೂಲಕ ಉಚಿತ ದೂರು ದಾಖಲಿಸಲಾಗುವುದು.

Read also : ಹಿರಿಯ ನಾಗರಿಕರ ಗಮನಕ್ಕೆ:ಆಸ್ತಿ ರಕ್ಷಣೆ, ಮಾಸಿಕ ಪಿಂಚಣಿ ಮತ್ತು ಉಚಿತ ಕಾನೂನು ನೆರವು ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಅದಾದ ನಂತರ ಆದಾಯ ಮಿತಿಯ ಅಥವಾ ಇನ್ಯಾ ವುದೇ ನಿಬಂಧನೆಗಳಿಲ್ಲದೆ ಉಚಿತವಾಗಿ ಕಾನೂನು ಸೇವಾ ಪ್ರಾಧಿಕಾರದಿಂದ ವಕೀಲರನ್ನು ನೇಮಕ ಮಾಡಿಕೊಡಲಾಗುವುದು.
​2. ದೂರು ನಿರ್ವಹಣಾ ಸಮಿತಿಗಳು

​ಲೈಂಗಿಕ ಕಿರುಕುಳದ ದೂರುಗಳನ್ನು ವಿಚಾರಣೆ ನಡೆಸಲು ಸರ್ಕಾರವು ಎರಡು ಹಂತದ ಸಮಿತಿಗಳನ್ನು ಕಡ್ಡಾಯಗೊಳಿಸಿದೆ

​ಆಂತರಿಕ ದೂರು ಸಮಿತಿ (Internal Committee – IC): 10 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಪ್ರತಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಇದನ್ನು ರಚಿಸಬೇಕು. ​ಇದರ ಅಧ್ಯಕ್ಷತೆಯನ್ನು ಸಂಸ್ಥೆಯ ಹಿರಿಯ ಮಹಿಳಾ ಉದ್ಯೋಗಿಯೇ ವಹಿಸಬೇಕು.
​ಸ್ಥಳೀಯ ದೂರು ಸಮಿತಿ (Local Committee – LC):

​ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈ ಸಮಿತಿ ಇರುತ್ತದೆ. 10ಕ್ಕಿಂತ ಕಡಿಮೆ ಉದ್ಯೋಗಿಗಳಿರುವ ಸಂಸ್ಥೆಗಳು ಅಥವಾ ಮನೆಗೆಲಸದವರು, ಬೀದಿ ಬದಿ ವ್ಯಾಪಾರಿಗಳಂತಹ ಅಸಂಘಟಿತ ವಲಯದ ಮಹಿಳೆಯರು ಇಲ್ಲಿ ದೂರು ನೀಡಬಹುದು.

​ಸಾಂತ್ವನ ಕೇಂದ್ರಗಳು:  ಕರ್ನಾಟಕ ಸರ್ಕಾರದ ವತಿಯಿಂದ ಪ್ರತಿ ತಾಲ್ಲೂಕಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ‘ಸಾಂತ್ವನ’ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಇವು ದೌರ್ಜನ್ಯಕ್ಕೊಳಗಾದವರಿಗೆ ತಕ್ಷಣದ ಸಹಾಯ ನೀಡುತ್ತವೆ.
​3. ಕಾನೂನು ಸೇವೆಗಳ ಪ್ರಾಧಿಕಾರದ (DLSA) ಪಾತ್ರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (KSLSA) ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಪ್ರಮುಖವಾಗಿ ಕೆಲಸ ಮಾಡುತ್ತದೆ:
​ಉಚಿತ ಕಾನೂನು ನೆರವು: ವಾರ್ಷಿಕ ಆದಾಯದ ಮಿತಿಯಿಲ್ಲದೆ, ಎಲ್ಲಾ ಮಹಿಳೆಯರಿಗೂ ನ್ಯಾಯಾಲಯದಲ್ಲಿ ಹೋರಾಡಲು ಉಚಿತವಾಗಿ ವಕೀಲರನ್ನು ಒದಗಿಸಲಾಗುತ್ತದೆ.
ಲಿಖಿತ ದೂರು ಮತ್ತು ಎಫ್‌ಐಆರ್: ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸಿದರೆ ಅಥವಾ ತನಿಖೆಯಲ್ಲಿ ವಿಳಂಬವಾದರೆ ಪ್ರಾಧಿಕಾರವು ಮಧ್ಯಪ್ರವೇಶಿಸಿ ಸಂತ್ರಸ್ತರಿಗೆ ನೆರವಾಗುತ್ತದೆ.
​ಕಾನೂನು ಅರಿವು: ಕಾರ್ಯಕ್ರಮಗಳ ಮೂಲಕ ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಶಿಬಿರಗಳನ್ನು ನಡೆಸುತ್ತದೆ.

​4. ಪುನರ್ವಸತಿ ಮತ್ತು ಪರಿಹಾರ ಯೋಜನೆಗಳು

 ಲೈಂಗಿಕ ದೌರ್ಜನ್ಯದಿಂದ ಬಾಧಿತರಾದ ಮಹಿಳೆಯರಿಗೆ ಕರ್ನಾಟಕ ಸರ್ಕಾರವು ಆರ್ಥಿಕ ಮತ್ತು ಸಾಮಾಜಿಕ ಬೆಂಬಲ ನೀಡುತ್ತದೆ:

​ಅ) ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ (Victim Compensation Scheme) ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಈ ಪರಿಹಾರ ದೊರೆಯುತ್ತದೆ:

​ಅತ್ಯಾಚಾರ ಸಂತ್ರಸ್ತರಿಗೆ: ಘಟನೆಯ ತೀವ್ರತೆ ಮತ್ತು ಹಾನಿಯ ಆಧಾರದ ಮೇಲೆ 3 ಲಕ್ಷದಿಂದ 10 ಲಕ್ಷ ರೂಪಾಯಿ ಗಳವರೆಗೆ ಪರಿಹಾರ ನೀಡಲಾಗುತ್ತದೆ.

​ಆಸಿಡ್ ದಾಳಿ ಸಂತ್ರಸ್ತರಿಗೆ:  ತಕ್ಷಣದ ಚಿಕಿತ್ಸೆಗಾಗಿ ಮತ್ತು ಪುನರ್ವಸತಿಗಾಗಿ ಗರಿಷ್ಠ ಪರಿಹಾರದ ಜೊತೆಗೆ ಮಾಸಿಕ ಪಿಂಚಣಿ ಸೌಲಭ್ಯವೂ ಇದೆ.
ಮಧ್ಯಂತರ ಪರಿಹಾರ: ಪ್ರಕರಣದ ವಿಚಾರಣೆ ಮುಗಿಯುವ ಮೊದಲೇ ಚಿಕಿತ್ಸೆ ಮತ್ತು ತುರ್ತು ಅಗತ್ಯಗಳಿಗಾಗಿ ಈ ಪರಿಹಾರವನ್ನು ಪಡೆಯಬಹುದು.
​ಆ) ಸಖಿ ಒನ್ ಸ್ಟಾಪ್ ಸೆಂಟರ್ (One Stop Center) ದೌರ್ಜನ್ಯಕ್ಕೊಳಗಾದ ಮಹಿಳೆಗೆ ಒಂದೇ ಸೂರಿನಡಿ ವೈದ್ಯಕೀಯ ನೆರವು, ಪೊಲೀಸ್ ಸಹಾಯ, ಕಾನೂನು ಸಲಹೆ ಮತ್ತು ಮಾನಸಿಕ ಆಪ್ತ ಸಮಾಲೋಚನೆ ನೀಡಲಾಗುತ್ತದೆ.

​ಸಂಕಷ್ಟದಲ್ಲಿರುವ ಮಹಿಳೆಯರಿಗೆ 5 ದಿನಗಳವರೆಗೆ ತಾತ್ಕಾಲಿಕ ಆಶ್ರಯವನ್ನೂ ಇಲ್ಲಿ ನೀಡಲಾಗುತ್ತದೆ.

​ಇ) ಸಾಂತ್ವನ ಯೋಜನೆಯಡಿ ಆರ್ಥಿಕ ನೆರವು ತಕ್ಷಣದ ಅವಶ್ಯಕತೆಗಳಿಗಾಗಿ ಸಂತ್ರಸ್ತ ಮಹಿಳೆಯರಿಗೆ ಸಾಂತ್ವನ ಕೇಂದ್ರಗಳ ಮೂಲಕ 2,000 ದಿಂದ 10,000 ರೂಪಾಯಿಗಳವರೆಗೆ ತುರ್ತು ಆರ್ಥಿಕ ಸಹಾಯ ನೀಡಲಾಗುತ್ತದೆ.

​ತುರ್ತು ಸಹಾಯಕ್ಕಾಗಿ:
​112: ಪೊಲೀಸ್ ತುರ್ತು ಸೇವೆ.
​181: ಮಹಿಳಾ ಸಹಾಯವಾಣಿ.
​1091: ಮಹಿಳಾ ಪೊಲೀಸ್ ಸಹಾಯವಾಣಿ.
ಮಹಾವೀರ ಮ.ಕರೆಣ್ಣವರ
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು
ಸದಸ್ಯ ಕಾರ್ಯದರ್ಶಿಗಳು  
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಾವಣಗೆರೆ.

TAGGED:Davanagere Newsdinamaana.comKannada NewsMahavira M. KarennavaraSafety of womenಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂಮಹಿಳೆಯರ ಸುರಕ್ಷತೆ
Share This Article
Twitter Email Copy Link Print
By ನ್ಯಾ.ಮಹಾವೀರ ಮ. ಕರೆಣ್ಣವರ

ನ್ಯಾ.ಮಹಾವೀರ ಮ. ಕರೆಣ್ಣವರ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸಲಹೆಗಳ ಪ್ರಾಧಿಕಾರ ದಾವಣಗೆರೆ.

ಜನನ 1979 ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಿರೇಹಟ್ಟಿಹೊಳಿ ಗ್ರಾಮ. ತಂದೆ ತಾಯಿ ಹಾಗೂ ಸಹೋದರರೆಲ್ಲ ಕೃಷಿಕರು. ಗೌರವಾನ್ವಿತರು ತಂದೆ ತಾಯಿಯರಿಗೆ 9ನೇ ಮತ್ತು ಕೊನೆಯ ಮಗನಾಗಿರುತ್ತಾನೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಗ್ರಾಮ ಮಟ್ಟದಲ್ಲಿಯೇ ಕನ್ನಡ ಮಾಧ್ಯಮದಲ್ಲಿಯೇ ಪೂರೈಸಿ, ಪಿಯುಸಿ ಇಂದ ಡಿಗ್ರಿವರೆಗೆ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಬೆಳಗಾವಿಯ ಲಿಂಗರಾಜ ಮಹಾವಿದ್ಯಾಲಯದಲ್ಲಿ ಪೂರೈಸಿರುತ್ತಾರೆ. ಕಾನೂನು ಪದವಿಯನ್ನು ಬೆಳಗಾವಿಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಪೂರೈಸಿರುತ್ತಾರೆ. 9 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಮಾಡಿದ ನಂತರ 2014ರಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿ. ಗುಲ್ಬರ್ಗ, ರಾಮನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ಈಗ ದಾವಣಗೆರೆಯಲ್ಲಿ ಕಳೆದ ಎರಡುವರೆ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ
Previous Article Davanagere ದಾವಣಗೆರೆ:ತಜ್ಞ ಸಮಿತಿ ಸದಸ್ಯರಾಗಿ ಡಾ.ಎಸ್.ಮಂಜಪ್ಪ ನೇಮಕ
Next Article Davanagere ಫೈರಸಿಗಿಂತ ಚಿತ್ರಮಂದಿರಗಳ ಮಾಫಿಯಾ ದೊಡ್ಡದು : ನಟ ಝೈದ್ ಖಾನ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ : ಪ್ರೊ.ಸುಚಿತ್ರಾ.

ದಾವಣಗೆರೆ (Davanagere): ವಿದ್ಯಾರ್ಥಿಗಳು ಹಿಂಜರಿಕೆಯ ಮನೋಭಾವದಿಂದ ಹೊರಬಂದು ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಹೊಸ ಹೊಸ ವಿಚಾರಗಳನ್ನು ಅರಿತುಕೊಳ್ಳಲು ಸಾಧ್ಯ ಎಂದು ದಾವಣಗೆರೆ…

By Dinamaana Kannada News

ಶಾಲಾ ಸಂಸತ್ತು ಕೇವಲ ಹಕ್ಕಲ್ಲ ಜವಾಬ್ದಾರಿ : ಎಸ್ಪಿ ಉಮಾ ಪ್ರಶಾಂತ್

ದಾವಣಗೆರೆ : ಶಾಲೆಗಳಲ್ಲಿ ನಡೆಯುವ ವಿದ್ಯಾರ್ಥಿ ನಾಯಕನ ಆಯ್ಕೆ ಪ್ರಕ್ರಿಯೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೆನಪು ಮಾಡುತ್ತದೆ ಎಸ್ಪಿ ಉಮಾ…

By Dinamaana Kannada News

ಮಹಿಳೆಯರು ಸಂಕೋಲೆಗಳನ್ನು ಬದಿಗೊತ್ತಿ ಸಾಧನೆಗಷ್ಟೆ ಗಮನವಿರಲಿ : ರಾಜೇಶ್ವರಿ.ಎನ್ ಹೆಗಡೆ

ದಾವಣಗೆರೆ,ಮಾ.12 (Davanagere) : ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ವಿಶೇಷವಾದ ಸ್ಥಾನಮಾನಗಳಿಗೆ ಪಾತ್ರರಾಗಿದ್ದರೂ ಒದಗಿ ಬರುವ ಸಂಕೋಲೆಗಳನ್ನು ಬದಿಗೊತ್ತಿ ಸಾಧನೆ…

By Dinamaana Kannada News

You Might Also Like

Political analysis
ರಾಜಕೀಯ

Political analysis|ಡೋಂಟ್ ವರಿ ಕಮ್ ಟು ಡೆಲ್ಲಿ

By Dinamaana Kannada News
Davanagere
ತಾಜಾ ಸುದ್ದಿ

ಓಪಿಎಸ್ ಜಾರಿಗಾಗಿ ಯಾವುದೇ ತೆರನಾದ ಹೋರಾಟಕ್ಕೂ ಸಿದ್ಧ : ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ

By Dinamaana Kannada News
Davanagere
ತಾಜಾ ಸುದ್ದಿ

ಆನಗೋಡು ಮೃಗಾಲಯದಲ್ಲಿ ಚುಕ್ಕೆ ಜಿಂಕೆಗಳ ಸಾವು| ಸೂಕ್ತ ಮುನ್ನಚ್ಚರಿಕೆ ಕ್ರಮ : ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ​

By Dinamaana Kannada News
Davanagere
Blog

ಮಕ್ಕಳಲ್ಲಿ ಕನ್ನಡ ಸಾಹಿತ್ಯ ಓದುವ ಅಭಿರುಚಿ ಬೆಳೆಸಿ : ಶಾಸಕ ಕೆ.ಎಸ್.ಬಸವಂತಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?