ದಾವಣಗೆರೆ : ಸಿರಿಧಾನ್ಯವನ್ನು ಬಳಿಸಿ, ಜೀವವನ್ನು ಉಳಿಸಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಅವರು ತಿಳಿಸಿದರು.
ಕೃಷಿ ಇಲಾಖೆ ಗುಂಡಿ ಸರ್ಕಲ್ ಬಳಿ ಏರ್ಪಡಿಸಿದ್ದ ಸಿರಿಧಾನ್ಯ ನಡಿಗೆ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಸಿರಿಧಾನ್ಯದ ಮಹತ್ವ ದೊಡ್ಡದು, ಇಂದಿನ ಆಧುನಿಕ ಬೆಳೆಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಸಿರಿಧಾನ್ಯದಿಂದ ಯಾವುದೇ ಪರಿಣಾಮ ಬೀರದೆ ನಮಗೆ ಆರೋಗ್ಯವನ್ನು ವೃದ್ಧಿಸುತ್ತದೆ. ಮತ್ತು ಅನಾರೋಗ್ಯವಿದ್ದರು ಸಹ ಸಿರಿಧಾನ್ಯವನ್ನು ಸೇವಿಸಿದರೆ ಆರೋಗ್ಯವಂತರಾಗುತ್ತಾರೆ, ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಸಿರಿಧಾನ್ಯದ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು, ಸಿರಿಧಾನ್ಯ ಎಂದರೆ ಮೊದಲು ಬಡವರ ಧಾನ್ಯವೆಂದು ಆಗಿತ್ತು, ಆದರೆ ಈಗ ಸಿರಿಧಾನ್ಯವೆ ಜೀವನವಾಗುತ್ತಿದೆ. ಇತರೆ ಬೆಳೆಗಳಾದ ಅಡಿಕೆ, ಕಬ್ಬು ,ಭತ್ತ , ಮೆಕ್ಕಜೋಳಕ್ಕೆ ಹೆಚ್ಚಿನ ನೀರಿನ ಅಗತ್ಯವಿದೆ. ಆದರೆ ಸಿರಿಧಾನ್ಯಕ್ಕೆ ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ, ಕಡಿಮೆ ನೀರಿನಲ್ಲಿ ಬೆಳೆಯಬಹುದು. ಸಿರಿಧಾನ್ಯವನ್ನು ಪ್ರೋತ್ಸಾಹಿಸಲು ಎಲ್ಲರೂ ಮುಂದೆ ಬರಬೇಕು ಎಂದರು.
Read also : ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವೃತ್ತಿ ಆಧಾರಿತ ಕೌಶಲ್ಯ ತರಬೇತಿ
ಕೃಷಿ ಜಂಟಿ ನಿರ್ದೇಶಕ ಜಿಯಾವುಲ್ಲಾ, ಕೃಷಿ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ , ಕೃಷಿ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕೃಷಿಕರು ಉಪಸ್ಥಿತರಿದ್ದರು.
