ದಾವಣಗೆರೆ.ಮೇ.5: ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು ಮತದಾನ ಮಾಡಿ ಶಾಹಿ ಹಚ್ಚಿದ ಎಡಗೈ ತೋರು ಬೆರಳು ತೋರಿಸುತ್ತಾ ಕನಿಷ್ಠ 20 ಜನರು ಗರಿಷ್ಠ 100 ಜನರು ಸೇರಿ ಸೆಲ್ಫಿ ತೆಗೆದು 9731016999 ಮೊಬೈಲ್‍ಗೆ ಕಳುಹಿಸಿ ಬಹುಮಾನ ಪಡೆಯಬಹುದೆಂದು ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್.ಬಿ.ಇಟ್ನಾಳ್ ತಿಳಿಸಿದ್ದಾರೆ.
100 ಕ್ಕಿಂತ ಹೆಚ್ಚು ಜನರು ಒಂದೇ ವೇದಿಕೆಯಲ್ಲಿ ನಿಂತು ಶಾಹಿ ಹಚ್ಚಿದ ತೋರು ಬೆರಳಿನೊಂದಿಗೆ ಸೆಲ್ಫಿ ತೆಗೆದು ಕಳುಹಿಸಿದಲ್ಲಿ ಇವರಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ. ಕಳುಹಿಸಿದ ಸೆಲ್ಫಿಗಳಲ್ಲಿ ಆಕರ್ಷಕ ಫೋಟೋಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.