ದಾವಣಗೆರೆ (Davangere): ಮಾನವನ ಮನಸ್ಸು ಚಂಚಲ. ಅದನ್ನು ಹತೋಟಿಗೆ ತರಲು ಶಿವಯೋಗವನ್ನು ಮಾಡಬೇಕು. ಶಿವಯೋಗವು ನಮ್ಮ ಮನಸ್ಸಿನ ಚಂಚಲತೆಯನ್ನು ನಿವಾರಣೆ ಮಾಡಿ ಅದನ್ನು ಜೀವನ ಸಾಧನೆಗಾಗಿ ಸಾಧನವನ್ನಾಗಿ ಮಾಡಿದವರು ಬಸವಾದಿ ಶರಣರು. ಅವರು ನೀಡಿದ ದಾರಿಯಲ್ಲಿ ನಡೆದು ಮಹಾತ್ಮರಾಗಿ ಬೆಳೆದುಬಂದವರು ಅಥಣಿ ಶಿವಯೋಗಿಗಳು ಎಂದು ಡಾ.ಬಸವಪ್ರಭು ಸ್ವಾಮೀಜಿಯವರು ನುಡಿದರು.
ನಗರದ ಶಿವಯೋಗಿ ಮಂದಿರದಲ್ಲಿ ನಡೆದ ಅಥಣಿ ಮುರುಘೇಂದ್ರ ಶಿವಯೋಗಿಗಳವರ 191 ನೇ ಜಯಂತ್ಯುತ್ಸವ ಸಮಾರಂಭದ ನೇತೃತ್ವವನ್ನು ವಹಿಸಿ ಆಶೀರ್ವಚನ ನೀಡಿದರು.
Read also : ಯೋಗಗುರು ಡಾ|| ರಾಘವೇಂದ್ರ ಗುರೂಜಿಯವರಿಗೆ “ಯೋಗ ರತ್ನಾಕರ’ ಬಿರುದು ಪುರಸ್ಕಾರ ಪ್ರದಾನ
ಶಿವಯೋಗ ಸಾಧನೆಯಿಂದ ನಮ್ಮ ದೇಹ, ಬುದ್ದಿ , ಮನಸ್ಸನ್ನು ಹತೋಟಿಗೆ ತರಲು ಸಾಧ್ಯ. ನಮ್ಮ ಮನಸ್ಸು ಹೇಳಿದಂತೆ ನಾವು ಕೇಳಿದರೆ ಬದುಕು ಬಂಧನವಾಗುತ್ತದೆ. ಹೊರಗಿನ ವೈರಿಯನ್ನು ಗೆಲ್ಲುವುದು ಸುಲಭ. ನಮ್ಮ ಒಳಗಿನ ವೈರಿಯಾದ ಮನಸ್ಸನ್ನು ನಾವು ಗೆಲ್ಲುವುದು ಮುಖ್ಯ ಅದನ್ನು ನಾವು ಶಿವಯೋಗ ಸಾಧನೆಯಿಂದ ನಮ್ಮ ಮನಸ್ಸನ್ನು ಗೆಲ್ಲಲು ಸಾಧ್ಯ. ಶಿವಯೋಗ ಸಾಧನೆಯನ್ನು ಮಾಡಿ ಭಕ್ತರ ಬದುಕನ್ನು ಉದ್ದಾರ ಮಾಡಿದವರು ಅಥಣಿ ಶಿವಯೋಗಿಗಳು . ಸ್ವಾತಂತ್ರ್ಯ ಹೋರಾಟಗಾರರಾದ ಬಾಲಗಂಗಾಧರ ತಿಲಕರು ಶಿವಯೋಗಿಗಳ ಆಶೀರ್ವಾದ ಪಡೆದು ದೇಶಕ್ಕೆ ಸ್ವಾತಂತ್ರ್ಯ ಸಿಗುವುದು ಯಾವಾಗ ಎಂದು ಕೇಳುವರು. ಶಿವಯೋಗಿಗಳು ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತದೆ ಅದನ್ನು ಅನುಭವಿಸಲು ನಾವು ನೀವು ಇರುವುದಿಲ್ಲ ಮುಂದಿನ ಜನರು ಅನುಭವಿಸುವರು ಎಂದು ಹೇಳುತ್ತಾರೆ . ತಿಲಕರು ತುಂಬಾ ಸಂತೋಷವಾಗಿ ನಮಗೆ ಸಿಗದಿದ್ದರೂ ಪರವಾಗಿಲ್ಲ ನಮ್ಮ ಮಕ್ಕಳಿಗೆ ದೊರಕುತ್ತದೆ ಎಂದು ಸಂತೋಷಪಡುತ್ತಾರೆ ಎಂದರು.
ಶಿವಯೋಗಾಶ್ರಮ ಟ್ರಸ್ಟ್ ನ ಕಾರ್ಯದರ್ಶಿ ಅಂದನೂರು ಮುಪ್ಪಣ್ಣ , ಎಂ.ಜಯಕುಮಾರ್ , ಎಸ್.ಓಂಕಾರಪ್ಪ , ಚಿಗಟೇರಿ ಜಯದೇವ , ಸರ್ಫಭೂಷಣ ಇತರರು ಇದ್ದರು.