ಶಿವಮೊಗ್ಗ : ಕೇಂದ್ರ ಸರ್ಕಾರದಿಂದ ಅನುಮೋದನೆಯಾಗಿರುವ ಉಮ್ಮೀದ್ ವಕ್ಪ್ ಅಸ್ತಿಗಳ ದಾಖಲೆಗಳನ್ನು ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡುವ ಕುರಿತು ಶಿವಮೊಗ್ಗದ ಮುತವಲ್ಲಿಗಳಿಗೆ ಅಕ್ಟೋಬರ್ 23 ರಂದು ಬೆಳಗ್ಗೆ 11 ಗಂಟೆಗೆ ಸರ್ ಎಂ ವಿ ರಸ್ತೆಯ ಮುಸ್ಲಿಂ ಹಾಸ್ಟೆಲ್ ಸಭಾಂಗಣದಲ್ಲಿ ಜಿಲ್ಲಾ ವಕ್ಸ್ ಇಲಾಖೆಯಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸೈಯದ್ ಮೆಹತಾಬ್ ಸರ್ವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ವಕ್ಪ್ ಕಾಯಿದೆ 1995 ತಿದ್ದುಪಡಿ ಮಾಡಿ ಉಮ್ಮೀದ್ ಕಾಯಿದೆ 2025 ಅನುಮೋದನೆ ಮಾಡಿದೆ. ಈ ಕಾಯಿದೆ ಅನ್ವಯ ಪ್ರತಿಯೊಂದು ವಕ್ಪ್ ಸಂಸ್ಥೆಗಳ ಮುತವಲ್ಲಿಗಳ, ಅಧ್ಯಕ್ಷರು, ಕಾರ್ಯದರ್ಶಿ, ಆಡಳಿತಾಧಿಕಾರಿಗಳು ಮತ್ತು ಉಸ್ತುವಾರಿ ಅಧಿಕಾರಿಗಳು ಉಮ್ಮಿದ್ ಪೋರ್ಟಲ್ ನಲ್ಲಿ http;//umeed.minorityaffairs. gov.in/sign/in ಲ್ಲಿ ಮೇಕರ್ ಆಗಿ 5ನೇ ಡಿಸೆಂಬರ್ 2025 ರೊಳಗೆ ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕಾಗಿದೆ.
Read also : ದಾವಣಗೆರೆ|ಅ.23 ರಂದು ಮುತವಲ್ಲಿಗಳಿಗೆ ಜಿಲ್ಲಾ ವಕ್ಪ್ ಇಲಾಖೆಯಿಂದ ಕಾರ್ಯಾಗಾರ
ಈ ಹಿನ್ನಲೆಯಲ್ಲಿ ಉಮ್ಮೀದ್ ಪೋರ್ಟಲ್ ಬಗ್ಗೆ ಮಾಹಿತಿ ನೀಡಲು ಸರ್ ಎಂ ವಿ ರಸ್ತೆಯ ಮುಸ್ಲಿಂ ಹಾಸ್ಟೆಲ್ ಸಭಾಂಗಣದಲ್ಲಿ ದಿನಾಂಕ 23/10/2025 ರಂದು ಕಾರ್ಯಾಗಾರವನ್ನು ಅಯೋಜಿಸಲಾಗಿದೆ.
ಈ ಕಾರ್ಯಾಗಾರಕ್ಕೆ ಹಾಜರಾಗಿ ಮಾಹಿತಿ ಪಡೆದುಕೊಳ್ಳಲು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಜಿಲ್ಲಾ ವಕ್ಪ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.
