Kannada News | Dinamaana.com | 24-10-2024
ನೀಲಾ ಮುದ್ದಾದ ಹೆಣ್ಣು ಮಗಳು. ಚಿಕ್ಕಂದಿನಿAದ ಸಾಕಷ್ಟು ನೋವು ಕಷ್ಟ ಕಂಡುಕೊAಡು ಬೆಳೆದವಳು. ಪ್ರತಿದಿನ ಪ್ರತಿಕ್ಷಣ ಪ್ರೀತಿಗಾಗಿ ಹಂಬಲಿಸುತ್ತಿದ್ದ ಮುಗ್ಧ ಹುಡುಗಿ.
ನೇರ ಮಾತು ದಿಟ್ಟ ನಿರ್ಧಾರ, ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ ಎಲ್ಲಾ ಗುಣಗಳನ್ನು ಒಳಗೊಂಡ ಒಬ್ಬ ಸುಂದರ ಬೆಡಗಿ. ಅವಳಿಗೆ ಇದ್ದ ಒಂದು ಲೋಪವೆಂದರೆ ಮುಂಗೋಪ. ವಿದ್ಯಾವಂತೆ ಬುದ್ಧಿವಂತೆ. ಅವಳಿಗೆ ಸಹೋದರಿ ಇದ್ದಳು ಜೊತೆಗೆ ಒಬ್ಬ ಸಹೋದರನು ಇದ್ದನು.
ಸಹೋದರಿ ಅವರ ತಂದೆ ತಾಯಿಗೆ ನಂಬಿಕೆ ದ್ರೋಹ ಮಾಡಿದಳು ಅದರ ಪರಿಣಾಮ ನೀಲಾಳ ಮೇಲೆ ಆಯಿತು. ಇಷ್ಟೆಲ್ಲಾ ಒಳ್ಳೆಯ ಗುಣಗಳನ್ನು ಹೊಂದಿದ್ದ ನೀಲಾ ಮನೆಯಲ್ಲಿ ಪ್ರೀತಿಯ ಕೊರತೆ ಅನುಭವಿಸುತ್ತಿದ್ದಳು. ಪ್ರೀತಿಗಾಗಿ ಸದಾ ಹಂಬಲಿಸುತ್ತಿದ್ದವಳು. ಪ್ರೀತಿಗೆ ಬಹಳ ಬೇಗ ಕರಗಿ ಹೋಗುತ್ತಿದ್ದವಳು. ಅವಳಿಗೆ ಪ್ರತಿದಿನ ಕಾಡುತ್ತಿದ್ದ ವಿಷಯವೆಂದರೆ ನನ್ನನ್ನು ಪ್ರೀತಿಸುವ ಜನರು ಯಾರು ಇಲ್ಲ ಎಂಬುದು.
ಹೊಸ ಪರಿಚಯದಲ್ಲಿ ಹೊಸ ಜನರೊಂದಿಗೆ ತನ್ನ ಭಾವನೆಗಳನ್ನು ಹಂಚಿಕೊAಡು ತನ್ನ ಜೀವನವನ್ನು ಸದಾ ಲವಲವಿಕೆಯಿಂದ ಖುಷಿಯಿಂದ ಇಟ್ಟುಕೊಂಡಿದ್ದಳು.ಮದುವೆಯಾಯಿತು ,ಮಕ್ಕಳು ಆದವು .ಸ್ವಲ್ಪ ದಿನ ಎಲ್ಲವೂ ಖುಷಿಯಿಂದ ನಡೆಯುತ್ತಿತ್ತು ತನ್ನನ್ನು ಪ್ರೀತಿಸುವ ಜೀವಗಳು ಗಂಡ ಮತ್ತು ಮಕ್ಕಳು ಎಂದು ಭಾವಿಸಿದ್ದಳು. ಬರ ಬರುತ್ತಾ ಗಂಡನ ಪ್ರೀತಿ ಕಡಿಮೆಯಾಯಿತು . ಮಕ್ಕಳ ಮೇಲಿನ ವ್ಯಾಮೋಹ ಕಡಿಮೆಯಾಯಿತು.
ಜೀವನ ಉತ್ಸಾಹ ಕಳೆದುಕೊಂಡು ಯಾಂತ್ರಿಕ ಜೀವನ ನಡೆಸುತ್ತಿದ್ದ ನೀಲಾಳಿಗೆ ಚೈತನ್ಯ ತುಂಬುವ ಒಂದು ಜೀವದ ಅವಶ್ಯಕತೆ ಇತ್ತು. ಅವಳು ಅಡುಗೆ ಮನೆಗೆ ಹೋದಾಗ ನಾನು ಒಂಟಿ ನಾನು ಕೆಲಸ ಮಾಡಲು ಮಾತ್ರ ಇರುವವಳು ಎಂಬ ಭಾವ ಇತ್ತು . ಒಂದು ದಿನ ಅಡಿಗೆ ಮನೆಯ ಕಿಟಕಿಯಿಂದ ಒಂದು ಶಬ್ದ ಕೇಳಿಸಿತು . ಸುಂದರ ಶಬ್ದ ಕಿವಿಗೆ ಇಂಪನ್ನು ನೀಡಿದ್ದು , ಯಾರು ಅವಳನ್ನು ಶಬ್ದ ಸಂಜ್ಞೆ ಮೂಲಕ ಕರಿಯುತ್ತಿರುವಂತೆ ಅವಳಿಗೆ ಭಾಸವಾಯಿತು. ಹೊರಗೆ ಹೋಗಿ ಎಲ್ಲಾ ಕಡೆ ನೋಡಿದಾಗ ಯಾರು ಕಾಣಿಸಲಿಲ್ಲ ಭ್ರಮೆ ಎಂದು ತಿಳಿದಳು. ಮತ್ತೆ ಮರುದಿನ ಆ ಸಮಯಕ್ಕೆ ಇದೇ ಘಟನೆ ಮರುಕಳಿಸಿತು.
Read also : poem | ತಾಯಿಯ ಪ್ರೀತಿ…
ಅವಳಿಗೆ ಒಂದು ಕಡೆ ಖುಷಿ ಒಂದು ಕಡೆ ಆತಂಕ ಗೊಂದಲ ಖುಷಿಯ ಪ್ರಮಾಣವೇ ಜಾಸ್ತಿ ಆಯ್ತು. ನನ್ನನ್ನು ಯಾರು ನೋಡುತ್ತಿದ್ದಾರೆ. ಪ್ರತಿ ದಿನ ನನಗೆ ಕಾಯುತ್ತಾರೆ. ಸಮಯಕ್ಕೆ ಬಂದು ನನಗೆ ಸಂಜ್ಞೆ ಮಾಡುತ್ತಾರೆ ಎಂದು ಖುಷಿಯಿಂದ ಪ್ರೀತಿಯಿಂದ ಅಡುಗೆ ಮಾಡಲು ಶುರು ಮಾಡಿದಳು.
ಮೊದಲು ಅಡಿಗೆ ಮನೆಯೆಂದರೆ ಬೇಸರಗೊಳ್ಳುತ್ತಿದ್ದ ನೀಲಾ ಇಂದು ಅಡುಗೆ ಮನೆಗೆ ಹೋಗಲು ಕಾತುರಳಾದಳು. ಆ ಶಬ್ದ ಅವಳಿಗೆ ನೀಡುತ್ತಿದ್ದ ಉತ್ಸಾಹ ಸಂತೋಷ ಅಷ್ಟಿಷ್ಟಲ್ಲ ಚೈತನ್ಯದ ಚಿಲುಮೆಯದಳು. ಸದಾ ಲವಲವಿಕೆಯಿಂದ ಇರಲು ಶುರು ಮಾಡಿದಳು. ಮನೆ ನಂದಗೋಕುಲವಾಯಿತು.
ಗಂಡನ ತಿರಸ್ಕಾರ ಅತ್ತೆ ಮಾವರ ದಬ್ಬಾಳಿಕೆ ಮಕ್ಕಳ ಕಿರಿಕಿರಿ ಯಾವುದು ಈ ಕಾಣದ ಶಬ್ದದ ಪ್ರೀತಿಯ ಮುಂದೆ ದೊಡ್ಡದೇನಿಸಲಿಲ್ಲ. ಹೆಣ್ಣು ಬಯಸುವುದು ಅಷ್ಟೇ ಅಲ್ಲವೇ ತನಗಾಗಿ ಸ್ವಲ್ಪ ಸಮಯ ಕೊಡುವ ಪ್ರೀತಿ ನೀಡುವ ಜೀವ ಬೇಕೆಂಬುದು ನನಗಾಗಿ ಯಾರೋ ಇರುವರು ಅನ್ನುವ ನಂಬಿಕೆ ಅವಳ ಬದುಕಿಗೆ ಸ್ಪೂರ್ತಿಯಾಯಿತು.
ಹಾಗಾದರೆ ಅವಳಿಗೆ ಪ್ರತಿದಿನ ಬರುತ್ತಿದ್ದ ಶಬ್ದ ಯಾವುದು? ಎನ್ನುವ ಪ್ರಶ್ನೆ ಕಾಡುವುದಲ್ಲವೇ ಪ್ರತಿದಿನ ಆ ಸಮಯಕ್ಕೆ ಅಲ್ಲಿಗೆ ಬರುತ್ತಿದ್ದಿದ್ದು ಒಂದು ಸುಂದರ ಪಕ್ಷಿ ಅದರ ಶಬ್ದವೇ ಅವಳನ್ನು ಮನಸೂರೆಗೊಂಡಿತ್ತು. ಅದು ಅವಳಿಗೆ ತಿಳಿಯದಾಗಿತ್ತು.
ಸುವಿ (ಸುಚಿತ್ರ) ದಾವಣಗೆರೆ