ದಾವಣಗೆರೆ, ಏ.8 (Davanagere) : ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ನಗರದ ಸಕ್ರ್ಯೂಟ್ ಹೌಸ್ ಪಕ್ಕದಲ್ಲಿ ಭವನ ನಿರ್ಮಾಣಕ್ಕಾಗಿ ನಿವೇಶನ ನೀಡಿದ ಹಿನ್ನಲೆಯಲ್ಲಿ ದಲಿತ ಮುಖಂಡರು ನಗರದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ ಮೂರ್ತಿಗೆ ಮಾಲಾರ್ಪಣೆ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದರು.
ಮುಖಂಡ ಆಲೂರು ನಿಂಗರಾಜ ಮಾತನಾಡಿ, ದಾವಣಗೆರೆ ನಗರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಭವನ ನಿರ್ಮಿಸುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಐದು ಕೋಟಿ ನೀಡಿದ್ದರು. ಆದರೆ, ನಿವೇಶನದ ತಾಪತ್ರೆಯಿಂದ ಭವನದ ನಿರ್ಮಾಣ ತಡವಾಗಿತ್ತು. ಅಂದಿನಿಂದ ಇಲ್ಲಿಯ ತನಕ ದಲಿತ ಸಂಘಟನೆಗಳು ಮತ್ತೆ ಅಂಬೇಡ್ಕರ್ ಅವರ ಪ್ರಗತಿಪರ ಸಂಘಟನೆಗಳು ಪಕ್ಷಾತೀತವಾಗಿ ಆನೇಕ ರಾಜಕೀಯ ಪಕ್ಷಗಳ ಮುಖಂಡರು ಮತ್ತೆ ಅನೇಕ ಸಂಘಟನೆಗಳ ಮುಖಂಡರುಗಳು ಬೇರೆ ಬೇರೆ ಜಾತಿಯ ಮುಖಂಡರುಗಳು ಸರ್ಕಾರದ ಜೊತೆಗೆ ವಿವಿಧ ರೀತಿಯ ಹೋರಾಟಗಳು ಅಧಿಕಾರಿಗಳು ಚರ್ಚಿಸುತ್ತಾ ಹೋರಾಟವನ್ನು ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿಗಳು ಸತತ ಪ್ರಯತ್ನದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭವÀನದ ನಿವೇಶನ ಮಂಜೂರಾತಿಯಾಗಿದೆ. ಇದು ಪ್ರತಿಯೊಬ್ಬರಿಗೂ ಸಂತೋಷ ತರುವ ವಿಚಾರವಾಗಿದೆ. ಅಂಬೇಡ್ಕರ್ ಭವನಕ್ಕೆ ನಿವೇಶನ ಮುಂಜೂರಾತಿ ನೀಡಿದ್ದನ್ನು ನಾವು ಸ್ವಾಗತಿಸಿ, ಅಭಿನಂದಿಸುತ್ತಿದ್ದೇನೆ ಎಂದರು.
Read also : ಯುವಕನ ಕೊಲೆ : ಮೂವರು ಆರೋಪಿಗಳ ಸೆರೆ
ಶಾಮನೂರ ರಾಜು, ಮಂಜು, ಪೈಲ್ವಾನ್ ಚಿಕ್ಕನಹಳ್ಳಿ ಹನುಮಂತಪ್ಪ, ಚಿಕ್ಕನಹಳ್ಳಿ ಮಲ್ಲೇಶ್, ಬಾತಿ ಸಿದ್ದೇಶ್ , ನಿಟ್ಟುವಳ್ಳಿ ದುರ್ಗೇಶ್, ಕೆಟಿಜಿ ನಗರ ಆನಂದ್, ನಿಂಗರಾಜ್ ರೆಡ್ಡಿ ಚಾಮನೂರು, ಅಂಜನಪ್ಪ ಗಾಂಧಿನಗರ, ಗಾಂಧಿನಗರದ ಹನುಮಂತಪ್ಪ, ಎಸ್ ಓ ಜಿ ಕಾಲೋನಿ ಜಯಣ್ಣ , ಆಲೂರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಡಿ.ಬಸವರಾಜ್, ಕೆಟಿಜಿ ನಗರ ಡಿಎಸ್‍ಎಸ್ ರವಿ, ಕರಿಯಪ್ಪ ಅವರಗೆರೆ , ಹೊನ್ನೂರ್ ಹರೀಶ್ ಹಾಗೂ ಇನ್ನೂ ಅನೇಕ ದಲಿತ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದರು.