ಒಳ್ಳೆಯ ಉದ್ದೇಶ, ಸತ್ಯ ಸಂಧತೆ ಮತ್ತು ಅನಂತ ಪ್ರೇಮ, ಇವು ಜಗತ್ತನ್ನೇ ಗೆಲ್ಲಬಲ್ಲವು. ಈ ಸದ್ಗುಣಗಳನ್ನು ಹೊಂದಿದ ಒಂದೇ ಒಂದು ವ್ಯಕ್ತಿ ಕೋಟ್ಯಂತರ ದುಷ್ಟರ ದುರುಳರ ಕಪಟ ಜಾಲವನ್ನು ನಾಶ ಮಾಡಬಹುದು ಎಂದು ಸ್ವಾಮಿ ವಿವೇಕಾನಂದ ಅವರು ಹೇಳುವಂತೆ ಎಲ್ಲಾ ಗುಣಗಳನ್ನು ಒಳಗೊಂಡಿರುವ ಯುವ ರಾಜಕಾರಣಿ ಡಿ.ಆರ್. ಶ್ರೀನಿವಾಸ್ ಕಲ್ಪತರು.
‘ಭಾರತದಲ್ಲಿ ರಾಜಕೀಯ ನಾಯಕರಾಗುವುದು ಹೇಗೆ’ ಎಂಬುದು ಜನರು ಸಾಧಿಸಲು ಯೋಜಿಸುವ ಅನೇಕ ಆಕಾಂಕ್ಷೆಗಳಲ್ಲಿ ಒಂದಾಗಿದೆ. ಆದರೆ ಅದಕ್ಕೆ ಬದ್ಧತೆ, ಪ್ರಯತ್ನ ಮತ್ತು ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಜ್ಞಾನದ ಅಗತ್ಯವಿದೆ. ರಾಷ್ಟ್ರೀಯ ಮಟ್ಟದಲ್ಲಿ ಅಥವಾ ನಿಮ್ಮ ಸ್ಥಳೀಯ ಕ್ಷೇತ್ರದಲ್ಲಿ ಮುನ್ನಡೆಸುವ ಕನಸು ಕಾಣಲು, ವಿವಿಧ ರಾಜಕೀಯ ನಾಯಕರು ಹೇಗೆ ಮೇಲೆರುತ್ತಾರೆ ಎಂಬುದನ್ನು ಕಲಿಯುವುದು ನಾಯಕತ್ವವನ್ನು ಸಾಧಿಸಲು ಒಬ್ಬ ವ್ಯಕ್ತಿಯು ತನ್ನ ಅಥವಾ ಅವಳ ಹಾದಿಯನ್ನು ರೂಪಿಸಲು ಸಹಾಯ ಮಾಡುತ್ತದೆ.
ಈ ಹಾದಿಯಲ್ಲಿ ಡಿ.ಆರ್. ಶ್ರೀನಿವಾಸ್ ಕಲ್ಪತರು ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಇವರಿಗೆ ರಾಜಕೀಯ ಗುರುಗಳಾದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನದಲ್ಲಿ ಸಾರ್ವಜನಿಕರ ಸೇವೆಗೆ ಮುಂದಾಗಿದ್ದಾರೆ.
2011ರಲ್ಲಿ ರಾಜಕೀಯ ಪ್ರವೇಶ
ಎಂಬಿಎ ಪದವೀಧರರಾಗಿರುವ ಡಿ.ಆರ್. ಶ್ರೀನಿವಾಸ್ ಕಲ್ಪತರು 2011ರಲ್ಲಿ ರಾಜಕೀಯ ಪ್ರವೇಶ ಮಾಡಿದರು. 2012ರಲ್ಲಿ ವಾರ್ಡ್ ಯೂತ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿದ್ದಾರೆ.
ಅರಣಿ ತಿಮ್ಮಯ್ಯನವರು (ಅಜ್ಜ) ಕಾಂಗ್ರೆಸ್ ಪಕ್ಷದ ಹಳೇ ಕಾರ್ಯಕರ್ತರು, ಡಾ.ಶಾಮನೂರು ಶಿವಶಂಕರಪ್ಪ, ಚನ್ನಯ್ಯ ಒಡೆಯರ್ ಕಾಲದಲ್ಲಿ ಪಕ್ಷಕ್ಕೆ ಉತ್ತಮ ಕೆಲಸವನ್ನು ಮಾಡಿ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಪ್ರಮುಖ ಪಾತ್ರ ವಹಿಸಿದರು. ಹಾಗೂ ಕಲ್ಪತರು ಕ್ರೆಡಿಟ್ ಕೋ ಆಫ್ ಸೊಸೈಟಿ ಸಂಸ್ಥಾಪಕರು ಹಾಗೂ ಹಾಲಿ ನಿರ್ದೇಶಕರು, ಕೆಟಿಜೆ ನಗರ 10ನೇ ಕ್ರಾಸ್ ಶನೇಶ್ಚರ ದೇವಾಲಯ ಟ್ರಸ್ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಕೆಟಿಜೆ ನಗರದಲ್ಲಿ ಚಿರಪರಿಚಿತ ನಾಯಕರಾಗಿದ್ದಾರೆ.
ಅವರಂತೆ, ಅಜ್ಜನ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡಿರುವ ಶ್ರೀನಿವಾಸ್ ಕಲ್ಪತರು ಕೂಡ ರಾಜಕೀಯ ಮುಂಚೂಣಿ ನಾಯಕರಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.
ಕೋವಿಡ್ನಲ್ಲೂ ಉತ್ತಮ ಸೇವೆ
ಕೋವಿಡ್ ಸಂದರ್ಭದಲ್ಲಿ ಲೌಕ್ಡೌನ್ ಆಗಿ ಜನಜೀವನ ಅಸ್ತವ್ಯಸ್ತವಾಗಿದ್ದಲ್ಲದೇ ಜನರು ಒಂದೊತ್ತಿನ ಊಟಕ್ಕಾಗಿ ಪರದಾಡುತ್ತಿರುವ ಸಂದರ್ಭದಲ್ಲಿ ಡಿ.ಆರ್. ಶ್ರೀನಿವಾಸ್ ಕಲ್ಪತರು, ಬಡವರಿಗೆ ಆಹಾರ ಒದಗಿಸುವ ಮೂಲಕ ಅಂಗವಿಕಲರಿಗೆ ಆಹಾರದ ಕಿಟ್ಗಳನ್ನು ವಿತರಿಸಿ ಅವರ ಹಸಿವು ನೀಗಿಸಿದ್ದಾರೆ. ಅಷ್ಟೇ ಅಲ್ಲದೇ ಈಗಲೂ ನೊಂದವರಿಗೆ ನೆರವು ನೀಡಲು ಸದಾ ಮುಂಚೂಣಿಯಲ್ಲಿದ್ದಾರೆ.
ಗೆಲುವಿಗೆ ಪ್ರಮುಖ ಪಾತ್ರ :
ಡಿ.ಆರ್.ಶ್ರೀನಿವಾಸ್ ಕಲ್ಪತರು ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್, ಡಾ.ಶಾಮನೂರು ಶಿವಶಂಕರಪ್ಪ, ಲೋಕಸಭಾ ಚುನಾವಣೆಯಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ .
27ನೇ ವಾರ್ಡ್ ಪ್ರಬಲ ಆಕಾಂಕ್ಷಿ
ಪಕ್ಷ ವಹಿಸಿದ ಹಲವಾರು ಸಂಘಟಿತ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪಕ್ಷ ಸಂಘಟನೆ ಮಾಡುವ ಮೂಲಕ ಜನಮನ್ನಣೆ ಪಡೆದುಕೊಂಡಿರುವ ಡಿ.ಆರ್. ಶ್ರೀನಿವಾಸ್ ಕಲ್ಪತರು ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 27ನೇ ವಾರ್ಡ್ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಡಿ.ಆರ್. ಶ್ರೀನಿವಾಸ್ ಕಲ್ಪತರು ನಿರ್ವಹಿಸುತ್ತಿರುವ ಹುದ್ದೆಗಳು
- ಡಿ.ಆರ್. ಶ್ರೀನಿವಾಸ್ ಕಲ್ಪತರು, ಕಲ್ಪತರು ಕ್ರೆಡಿಟ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ, ಬಡವರ ಕಷ್ಟ ಸುಃಖಗಳನ್ನು ಆಲಿಸಿ ಅವರ ವ್ಯವಹಾರಗಳ ಹಾಗೂ ಬಡವರ ಏಳ್ಗಿಗೆ ದಾರಿ ದೀಪವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
- ಕೆಟಿಜೆ ನಗರದ 12ನೇ ಕ್ರಾಸ್ನಲ್ಲಿರುವ ಕುವೆಂಪು ಕನ್ನಡ ಕಲಾ ಸಂಘದಲ್ಲಿ ಖಜಾಂಚಿಯಾಗಿ ಕಾರ್ಯನಿರ್ವಹಿಸಿ, ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಚಿಕ್ಕವನಾಗಿದ್ದಾಗಲಿಂದಲೂ ಮಾಡಿಕೊಂಡು ಬಂದಿರುವ ಡಿ.ಆರ್. ಶ್ರೀನಿವಾಸ್ ಕಲ್ಪತರು ಅವರಿಗೆ ರಾಜಕೀಯ ಗುರುಗಳಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮಾಡಿರುವ ಸಮಾಜಮುಖಿ ಕಾರ್ಯಕ್ರಮಗಳೇ ಪ್ರೇರಣೆಯಾಗಿವೆ.
- ದಾವಣಗೆರೆ ಜಿಲ್ಲಾ ಒಕ್ಕಲಿಗರ ಸಂಘದಲ್ಲಿ ನಿರ್ದೇಶಕರಾಗಿ ಸತತ ಮೂರು ವರ್ಷ ಕಾರ್ಯನಿರ್ವಹಿಸಿ ಹಾಗೂ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
- ಪ್ರಚಾರಕ್ಕಾಗಿ ಆಸೆ ಪಡದೆ ಎಲೆಮರಿ ಕಾಯಿಯಂತೆ ಇದ್ದು, ಸತತ 24 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
- ಉತ್ತಮ ವಲಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಎರಡು ವರ್ಷದಿಂದ ಸೇವೆ ಸಲ್ಲಿಸುವ ಮೂಲಕ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡಿ ಪಕ್ಷದ ಸಂಘಟನೆಯನ್ನು ಮಾಡುತ್ತಿದ್ದಾರೆ.