Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಎಸ್ ಎಸ್ ಹಿರೇಮಠ ಎಂಬ ಕ್ರಾಂತಿಕಾರಿ ಮೇಷ್ಟ್ರು ನೆನೆಯುತ್ತಾ……
Blog

ಎಸ್ ಎಸ್ ಹಿರೇಮಠ ಎಂಬ ಕ್ರಾಂತಿಕಾರಿ ಮೇಷ್ಟ್ರು ನೆನೆಯುತ್ತಾ……

Dinamaana Kannada News
Last updated: April 8, 2024 10:03 am
Dinamaana Kannada News
Share
ಎಸ್ ಎಸ್ ಹಿರೇಮಠ
ಎಸ್ ಎಸ್ ಹಿರೇಮಠ
SHARE

ಬಳ್ಳಾರಿ ಜಿಲ್ಲೆಯಲ್ಲಿ ಬಂಡಾಯದ ಧ್ವನಿ ಹುಟ್ಟು  ಹಾಕಿ ,ನಾಡಿನಾದ್ಯಂತ ಕ್ರಾಂತಿ ಪಸರಿಸಿದ ಎಸ್ ಎಸ್ ಹಿರೇಮಠ ಎಂಬ ಕ್ರಾಂತಿಕಾರಿ ಮೇಷ್ಟ್ರು ನೆನೆಯುತ್ತಾ……

ಹುಟ್ಟಿ ಬೆಳೆದಿದ್ದು ಬೆಳಗಾಂ ಜಿಲ್ಲೆಯ ಬೈಲಹೊಂಗಲ ತಾಲೂಕು, ಉಪನ್ಯಾಸಕರಾಗಿ ಹೊಸಪೇಟೆ, ಹೂವಿನಹಡಗಲಿ, ಹರಪನಹಳ್ಳಿಯಲ್ಲಿ ಕೆಲಸ ಮಾಡುತ್ತಾ ಎಡಪಂಥೀಯ ,ದಲಿತ ,ಬಂಡಾಯದ ಚಳುವಳಿಗಳಿಗಾಗಿ ತಮ್ಮ ಇಡೀ ಬದುಕನ್ನ ಮುಡಿಪಾಗಿಟ್ಟ ಎಸ್ ಎಸ್ ಹಿರೇಮಠ್ ರವರು ನಮ್ಮನ್ನಗಲಿ 15 ವರ್ಷಗಳು ಕಳೆದಿವೆ.

ಜೀವಮಾನವಿಡಿ ಮಿಡಿದದ್ದು ಬಡವರಿಗಾಗಿ

ಉಚ್ಚ ಸಾಮಾಜಿಕ ವರ್ಗದಲ್ಲಿ  ಹುಟ್ಟಿದ ಶಿವರುದ್ರಯ್ಯ ಸದಾಶಿವಯ್ಯ ಹಿರೇಮಠ (ಎಸ್ ಎಸ್ ಹಿರೇಮಠ) ತಮ್ಮ ಜೀವಮಾನವಿಡಿ ಮಿಡಿದದ್ದು ಬಡವರಿಗಾಗಿ ,ದಲಿತರಿಗಾಗಿ ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಏಳಿಗೆಗಾಗಿ

ಅವರ ಸಂಸ್ಕೃತಿ, ಪರಂಪರೆ ಹಬ್ಬಗಳು ಮತ್ತು ಜಾತ್ರೆಗಳ ಬಗೆಗೆ ಅವರ ವಿಭಿನ್ನ ಚಿಂತನೆಗಳು ಹಾಗೂ  ಹೋರಾಟದ ಮಜಲುಗಳನ್ನು ನಾಡಿಗೆ ಪರಿಚಯಿಸಿ ಅಧ್ಯಯನ ಹಾಗೂ ಆಧ್ಯಾಪನದ ಜೊತೆಗೆ ಸಂಘಟನೆ, ವೈಚಾರಿಕ ಜ್ಞಾನ, ಸಂಸ್ಕೃತಿ ಪರಂಪರೆಯ ಚರ್ಚೆ ಅಭಿವ್ಯಕ್ತಿ ಹಾಗು ಹೋರಾಟಕ್ಕೆ  ಅನೇಕ ವೇದಿಕೆ ಒದಗಿಸಲು ಗಮನಾರ್ಹವಾದ ಕೆಲಸವನ್ನು ನಿರ್ವಹಿಸಿದ ಬಹುಮುಖಿ ವ್ಯಕ್ತಿತ್ವದ ಹಿರೇಮಠ ಮೇಷ್ಟ್ರು ಅನೇಕ ಹೋರಾಟಗಾರರನ್ನ ತಮ್ಮ ಗರಡಿಯಲ್ಲಿ ಪಳಗಿಸಿದ್ದಾರೆ.

ಹಿರೇಮಠ್ ಮೇಷ್ಟ್ರು ಕರ್ನಾಟಕದ ಶ್ರೇಷ್ಠ ಚಿಂತಕರು

ಅನೇಕ ವಿದ್ಯಾರ್ಥಿ ಯುವ ಜನರಿಗೆ ದ್ವಂದ್ವಮಾನ ಹಾಗೂ ಚಾರಿತ್ರಿಕ ಭೌತವಾದದ ಪಾಠ ಹೇಳಿಕೊಟ್ಟ ಹಿರೇಮಠ ಮೇಷ್ಟ್ರು, ಶೋಷಣಾ ರಹಿತ ಸಮಾಜವಾದದ ಕನಸನ್ನು ಕಂಡು ತಮ್ಮ ಉಪನ್ಯಾಸಕ ಕಾಯಕವನ್ನು ಶ್ರದ್ಧೆ ,ನಿಷ್ಠೆಯಿಂದ ನಿರ್ವಹಿಸುವುದರ ಜೊತೆಗೆ ಒಂದು ಅರೆಗಳಿಗೆ ಸಮಯ ಹಾಳು ಮಾಡದೇ,ಅಧ್ಯಯನ, ಸಂಘಟನೆ ಹಾಗೂ ಹೋರಾಟಗಳಿಗಾಗಿ ತಮ್ಮ ಬದುಕಿನ ಬಹು ಸಮಯವನ್ನು ಮೀಸಲಿಟ್ಟ ಹಿರೇಮಠ್ ಮೇಷ್ಟ್ರು ಕರ್ನಾಟಕದ ಶ್ರೇಷ್ಠ ಚಿಂತಕರ ಸಾಲಿನಲ್ಲಿ ನಿಲ್ಲುತ್ತಾರೆ.

ಉಪನ್ಯಾಸಕರಾಗಿ ಕೆಲಸ ಮಾಡಿದ ಕಡೆಗಳಲ್ಲೆಲ್ಲ ಕ್ರಾಂತಿ ಬೀಜ ಬಿತ್ತಿ ಅದು ಹೆಮ್ಮರವಾಗುವ ಕನಸು ಕಾಣುತ್ತಿದ್ದ, ಅದಮ್ಯ ಕನಸುಗಾರ ಅವರು, ಕ್ರಾಂತಿ ಹಾಗೂ ಹೋರಾಟದ ಕುರಿತಂತೆ ವಿಶಿಷ್ಟವಾದ ಚಿಕಿತ್ಸಕ ದೃಷ್ಟಿಯಿಂದ ಅವರು ಹುಡುಕಾಟ ನಡೆಸುತ್ತಿದ್ದರು.

ಅವರ ಕೃತಿಗಳಾದ ಜಾತ್ರೆಗಳು, ಹಬ್ಬಗಳು ,ಸಾಂಖ್ಯಾ ದರ್ಶನ, ಪಾಶುಪತದರ್ಶನ, ಕಾಳಮುಖದರ್ಶನ ,ಮಾದರ ಚೆನ್ನಯ್ಯನ ನಾಡಿನಲ್ಲಿ, ಮುಂತಾದ 32ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ತಮ್ಮ ನಿವೃತ್ತಿಯ ನಂತರ ಅನೇಕ ಭಾರತೀಯ ಸಾಂಸ್ಕೃತಿಕ ದರ್ಶನಗಳು ಹಾಗೂ ಶೋಷಣೆಯ ವಿವಿಧ ಮಗ್ಗಲಗಳು ಮತ್ತು ಅದಕ್ಕೆ ಪರ್ಯಾಯಗಳ ಕುರಿತು ಸಾಹಿತ್ಯ ಕೃಷಿ ಮಾಡುವ ಆಲೋಚನೆಯನ್ನು ಹೊಂದಿದ್ದ ಎಸ್ ಎಸ್ ಹಿರೇಮಠ್ ಮೇಷ್ಟ್ರು ತಮ್ಮ ತೀವ್ರವಾದ ಅನಾರೋಗ್ಯದಿಂದ ಬೇಗನೆ ವಿಧಿವಶರಾಗಿದ್ದು ಕರ್ನಾಟಕದ ಸಾಂಸ್ಕೃತಿಕ ಚಿಂತನಾ ಲೋಕಕ್ಕೆ ಆದ ಒಂದು ದೊಡ್ಡ ಆಘಾತವೆಂದೇ ಭಾವಿಸಬಹುದು.

ವ್ಯವಸ್ಥೆಯ ಜೊತೆ ರಾಜಿ ಮಾಡಿಕೊಳ್ಳದ ಛಲಗಾರ, ಎಂಬತ್ತರ ದಶಕದಲ್ಲಿ ವಿದ್ಯಾರ್ಥಿ ಯುವಜನ ಸಂಘಟನೆ ಹಾಗೂ ಸಮುದಾಯ ಸಾಂಸ್ಕೃತಿಕ ಸಂಘಟನೆಗಳಿಗೆ ಹೊಸ ಭಾಷ್ಯ ಬರೆಯುವುದರಲ್ಲಿ ಹಿರೇಮಠರವರದು ಕರ್ನಾಟಕದಲ್ಲಿ ಪ್ರಮುಖ ಪಾತ್ರ, ಉಪನ್ಯಾಸಕ ಹಾಗೂ ಕಲಾವಿದ ಗೆಳೆಯರನ್ನು ಕಟ್ಟಿಕೊಂಡು ರಾಜ್ಯಾದ್ಯಂತ ಕಲಾಜಾಥಾ, ವಿಜ್ಞಾನ ಜಾಥಾಗಳನ್ನು ಸಂಘಟಿಸಿರೋದು ಚರಿತ್ರೆಯಲ್ಲಿ ಸೇರಿದ ಮರೆಯಲಾರದ ದಿನಗಳಾಗಿವೆ.

ಎಡ ಹಾಗೂ ಪ್ರಜಾಸತ್ತಾತ್ಮಕ ಧೋರಣೆಗಳನ್ನು ಮೈಗೂಡಿಸಿಕೊಂಡು ಭಾರತೀಯ ಸಾಂಸ್ಕೃತಿಕ ಸಂದರ್ಭದಲ್ಲಿ ಜಾತಿಯ ವ್ಯವಸ್ಥೆಯ ಬೇರುಗಳನ್ನು ಅರ್ಥ ಮಾಡಿಕೊಂಡು ಈ ಹಿನ್ನೆಲೆಯಲ್ಲಿ ಹೊಸ ಹೋರಾಟಗಳನ್ನು ರೂಪಿಸಬೇಕು ಎನ್ನುವ ಚಿಂತನೆ ಎಸ್ ಎಸ್ ಹಿರೇಮಠ್ ಮೇಷ್ಟ್ರು ಅವರದಾಗಿತ್ತು.

ಇಂದು ಬೇರೆ ಬೇರೆ ರಂಗಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿರೇಮಠ ಅವರ ಅನೇಕ ಶಿಷ್ಯ ಬಳಗವಿದೆ ಅದರಲ್ಲಿ ನಿಂಗಪ್ಪ ಮುದೇನೂರು, ಎ ಎಸ್ ಪ್ರಭಾಕರ , ಬಿ ಬಿ ಪೀರ ಭಾಷಾ, ಎಸ್ ವೈ ಗುರು ಶಾಂತ, ಇಂಥವರು ಇಂದು ಜನಪರ ಚಳುವಳಿ ಹಾಗೂ ಪ್ರಗತಿಪರ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರೆ ಅದರ ಹಿಂದೆ ಹಿರೇಮಠ ಅವರ ಬೋಧನೆ ಹಾಗೂ ಅವರ ವಿಚಾರಗಳ ಪ್ರಭಾವ ಇದೆ.

ಬಂಡಾಯ ಅವರ ವ್ಯಕ್ತಿತ್ವದ ಆಶಯವಾಗಿದ್ದರೂ ಎಲ್ಲೂ ಆವೇಶ ಆಕ್ರೋಶಗಳಿಗೆ ಅವರಾಗಲಿ ಅವರ ಸಾಹಿತ್ಯವಾಗಲಿ ಈಡಾಗುತ್ತಿರಲಿಲ್ಲ,ಯಾವುದೇ ವಿಚಾರದ ಬಗ್ಗೆ ಅವರ ಚರ್ಚೆಗಳು ಕುರುಡುನಂಬಿಕೆಯಿಂದ ಕೂಡಿರದೇ, ಅದಕ್ಕೊಂದು ವೈಜ್ಞಾನಿಕ ಸೈದ್ಧಾಂತಿಕ ಸ್ಪಷ್ಟವಾದ ಕಲ್ಪನೆ ಇರುತ್ತಿತ್ತು.

ನೊಂದ ಜನರ  ಧ್ವನಿ

ದಾವಣಗೆರೆ ಬಳ್ಳಾರಿ  ಭಾಗದ ಭಾರತ ಜ್ಞಾನ ವಿಜ್ಞಾನ ಸಮಿತಿಯ ಗೆಳೆಯರೊಂದಿಗೆ ಅನೇಕ ಜಾಥಾಗಳನ್ನು ಸಂಘಟಿಸಿ ಅಸ್ಪೃಶ್ಯತೆಯ ವಿರುದ್ಧ ಹಾಡು ಹಾಗೂ ಬೀದಿ ನಾಟಕಗಳನ್ನು ಆಯೋಜಿಸಿ,ಪಟ್ಟ ಭದ್ರ ಹಿತಾಸಕ್ತಿಗಳ ವಿರೋಧ ಕಟ್ಟಿಕೊಂಡು ವಯಕ್ತಿಕ ತೊಂದರೆ ಅನುಭವಿಸಿದ್ದರೂ ಕೂಡ ದೃತಿಗೆಡದೆ ಜೀವಮಾನವಿಡಿ ನೊಂದ ಜನರ  ಧ್ವನಿಯಾಗಿದ್ದರು.

ಚಾರಿತ್ರಿಕ ಭೌತವಾದವನ್ನು ಅತ್ಯಂತ ವೈಜ್ಞಾನಿಕವಾಗಿ ಈ ದೇಶಕ್ಕೆ ಪರಿಚಯ ಮಾಡಿಕೊಟ್ಟಂತ ದೇವಿಪ್ರಸಾದ್ ಚಟ್ಟೋಪಾಧ್ಯಾಯ, ಲೇಖಕರಾದ ಡಿಡಿ ಕೋಸಾಂಬಿ, ಎಸ್‌ ಜಿ ಸರ್ದೇಸಾಯಿ ,ಅವರ ಪ್ರವಾಹಕ್ಕೆ ಒಳಗಾಗಿದ್ದ ಹಿರೇಮಠ ಮೇಷ್ಟ್ರು ತಮ್ಮ ಶಿಷ್ಯರಿಗೆ ಭಾರತದಲ್ಲಿ ದ್ವಂದ್ವಮಾನ ಮತ್ತು ಚಾರಿತ್ರಿಕ ಭೂತವಾದವನ್ನು E=mc2 ಒಂದೇ ಸೂತ್ರದ ಮೂಲಕ ಅತ್ಯಂತ ಸರಳವಾಗಿ ಮನದಟ್ಟು ಮಾಡುವ ರೀತಿ ಅತ್ಯಂತ ಮನೋಜ್ಞವಾದದ್ದು,

ಬದುಕಿನ ಕೊನೆಗಾಲದಲ್ಲಿ ಆಸರೆಯಾಗಬೇಕಾಗಿದ್ದ, ಮುಪ್ಪಿಗೆ ಧೈರ್ಯ ತುಂಬಬೇಕಾಗಿದ್ದ ಮಗ ಕಾಣೆಯಾಗಿ ಹೋಗಿದ್ದು ಅವರ ಬದುಕಿನ ದೊಡ್ಡ ದುರಂತ,

ಅನೇಕ ಬಡ ವಿದ್ಯಾರ್ಥಿಗಳಿಗೆ ಬದುಕಿನ ಜೀವಸೆಲೆ ತುಂಬಿದ ಹಿರೇಮಠ ಮೇಷ್ಟ್ರು ಅವರ ಆರೋಗ್ಯ ದಿಡೀರನೆ ಕೈಕೊಟ್ಟು ಬದುಕಿನ ಮುಸ್ಸಂಜೆಯಲ್ಲಿ ಕಡುಕಷ್ಟದ ದಿನಗಳನ್ನು ಕಳೆದರು. ಸಮಾಜಮುಖಿಯಾದ ಮನುಷ್ಯ ವೈಯಕ್ತಿಕ ಬದುಕನ್ನು ಕಳೆದುಕೊಂಡು ಇಡೀ ಸಮಾಜಕ್ಕೆ ಪ್ರಿಯವಾಗುತ್ತಾರೆ. ಆ ಮೂಲಕ ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಎಸ್ ಎಸ್ ಹಿರೇಮಠ ಅವರು ಜೀವಂತ ಉದಾಹರಣೆ

 

ಬಸವರಾಜ ಸಂಗಪ್ಪನವರ್ ಹರಪನಹಳ್ಳಿ

TAGGED:dinamaana.comKannada NewsSS Hiremath.ಎಸ್ ಎಸ್ ಹಿರೇಮಠ ಎಂಬ ಕ್ರಾಂತಿಕಾರಿ ಮೇಷ್ಟ್ರು ನೆನೆಯುತ್ತಾ......ದಿನಮಾನ.ಕಾಂಹರಪನಹಳ್ಳಿ ಸುದ್ದಿ
Share This Article
Twitter Email Copy Link Print
Previous Article CEO Suresh Itnala ಬೇಸಿಗೆ ರಜೆಯಲ್ಲಿ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟ
Next Article SS Hiremath ನೆಲ ಹಡೆದ ಮೇಷ್ಟ್ರು : ಎಸ್.ಎಸ್.ಹಿರೇಮಠ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದಾವಣಗೆರೆ|ಆ.2 ರಂದು ವಿದ್ಯುತ್ ವ್ಯತ್ಯಯ

ದಾವಣಗೆರೆ  : 66/11 ಕೆವಿ ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರುಡುವ ಮಾರ್ಗದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ಆಗಸ್ಟ್…

By Dinamaana Kannada News

ಚನ್ನಣ್ಣನೆಂಬ ಮನೆಯಣ್ಣನ ನೆನೆದು

1993ರ ಬೇಸಿಗೆಯ ಒಂದು ಮಧ್ಯಾಹ್ನ, ಯುನಿವರ್ಸಿಟಿಯ ವಿಶಾಲ ಜಾಗಗಳ ತುಂಬಾ ಮುಳ್ಳು ಬೋರೆಹಣ್ಣಿನ ಗಿಡಗಳಲಿ ತುಂಬಿನಿಂತ ಹಣ್ಣುಗಳು. ಬಿರುಬಿಸಿಲಿನಲೂ ಆಗೊಮ್ಮೆ…

By Dinamaana Kannada News

ಸರಣಿ ಸರಗಳ್ಳತನ ಪ್ರಕರಣ | 14.5 ಲಕ್ಷ ಮೌಲ್ಯದ ಬಂಗಾರದ ಆಭರಣ ವಶಕ್ಕೆ

ದಾವಣಗೆರೆ  (Davanagere): ಸರಣಿ ಸರಗಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿರುವ ವಿದ್ಯಾ ನಗರ ಪೊಲೀಸರು  ಬಂಧಿತರಿAದ 14,50,000/- ರೂ ಬೆಲೆಯ ಬಂಗಾರದ…

By Dinamaana Kannada News

You Might Also Like

blood donation camp
ತಾಜಾ ಸುದ್ದಿ

ದಾವಣಗೆರೆ|ರಕ್ತದಾನ ಶಿಬಿರದ ಉದ್ಘಾಟನೆ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ|ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ಕ್ರೀಡೆಗೆ ಆದ್ಯತೆ ನೀಡಿ: ಜಿಪಂ ಸಿಇಓ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ|ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ಜಿ.ಪಂ ಸಿಇಓ

By Dinamaana Kannada News
Davanagere
ತಾಜಾ ಸುದ್ದಿ

ಬಡ ಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ಶಾಲೆಗಳು ದೊಡ್ಡ ಕೊಡುಗೆ :ಶಾಸಕ ಕೆ.ಎಸ್.ಬಸವಂತಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?