ದಾವಣಗೆರೆ : ಮೈಸೂರು ವಿಶ್ವವಿದ್ಯಾಲಯದ ಯೋಗ ಪೆವಿಲಿಯನ್ ಸಭಾಭವನದಲ್ಲಿ ನಡೆದ ಎರಡನೇ ರಾಜ್ಯ ಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ನಗರದ ಪ್ರತಿಷ್ಠಿತ ಎಸ್‌ಎಎಸ್‌ಎಸ್ ಯೋಗ ಕೇಂದ್ರದ ಯೋಗ ಪಟುಗಳು ವಿಭಾಗವಾರು ಪ್ರಶಸ್ತಿ ಪಡೆದುಕೊಂಡಿದ್ದಾರೆ.
35 ರಿಂದ 45 ವರ್ಷದ ವಯೋಮಿತಿಯ ಪುರುಷರ ವಿಭಾಗದಲ್ಲಿ ರಾಘವೇಂದ್ರ ಎಂ.ಚಾವನ್ ತೃತೀಯ ಸ್ಥಾನ, 45 ರಿಂದ 55 ವರ್ಷದ ಪುರುಷರ ವಿಭಾಗದಲ್ಲಿ ಚಂದ್ರಶೇಖರ್ ನಾಲ್ಕನೇ ಸ್ಥಾನ, 35 ರಿಂದ 45 ವರ್ಷದ ಮಹಿಳೆಯರ ವಿಭಾಗದಲ್ಲಿ ರೇಖಾ ಚಂದ್ರಶೇಖರ್ ನಾಲ್ಕನೇ ಸ್ಥಾನ ಪಡೆದು ನಮ್ಮ ಯೋಗ ಕೇಂದ್ರ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
Read also : ದಾವಣಗೆರೆ | ಕೋಳಿ ಸಾಕಾಣಿಕೆ ತರಬೇತಿ
ಯೋಗ ಪಟುಗಳ ಸಾಧನೆಗೆ ಎಸ್‌ಎಎಸ್‌ಎಸ್ ಯೋಗ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರು, ಯೋಗಗುರು, ಅಂತಾರಾಷ್ಟ್ರೀಯ ಯೋಗ ಕ್ರೀಡಾಪಟು ಡಾ.ಎನ್. ಪರಶುರಾಮ್, ಕೇಂದ್ರದ ಅಧ್ಯಕ್ಷ ರುದ್ರಪ್ಪ, ಉಪಾಧ್ಯಕ್ಷ ಎಂ.ಎನ್.ಗೋಪಾಲ, ಖಜಾಂಚಿ ಎಸ್.ರಾಜಶೇಖರ್, ಸಂಸ್ಥೆಯ ಎಲ್ಲಾ ನಿರ್ದೇಶಕರು ಹಾಗೂ ಸ್ಪರ್ಧೆಯ ಆಯೋಜಿಕರಾದ ಬಿ.ರವಿ, ಮೈಸೂರು ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಿ.ರೇಣುಕಾದೇವಿ, ಮೈಸೂರು ಚೈತನ್ಯ ಯೋಗ ಕೇಂದ್ರದ ಸಂಸ್ಥಾಪಕ ಬಿ.ಪಿ.ಮೂರ್ತಿ, ಎಸ್. ಕುಮಾರ್, ಸಹಾಯಕ ಜೈಲರ್, ಸಂಸ್ಥೆಯ ಯೋಗ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.